September 19, 2024

ಪ್ರಧಾನ ಮಂತ್ರಿ ಆವಾಸ್ ಯೋಜನೆಫಲಾನುಭವಿಗಳ ಸಾಲ ಮೇಳ

0
ಜಿ ಪ್ಲಸ್ ಟು ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ ಕಾರ್ಯಕ್ರಮ

ಜಿ ಪ್ಲಸ್ ಟು ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ ಕಾರ್ಯಕ್ರಮ

ಚಿಕ್ಕಮಗಳೂರು: ಕಳೆದ ಒಂದು ತಿಂಗಳಿನಿಂದ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ಸೇರಿಸಿ ಸ್ಥಳದಲ್ಲೇ ಸಾಲ ಮಂಜೂರಾತಿ ಮಾಡಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿ ಪ್ಲಸ್ ಟು ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಲ ಮಂಜುರಾತಿಗೆ ಇರುವ ಸಮಸ್ಯೆಗಳೇನು ಎನ್ನುವುದನ್ನು ಇಲ್ಲೇ ಚರ್ಚಿಸಿ, ಕಡತಗಳು ಸರಿಯಾಗಿಲ್ಲವಾದರೆ ಸರಿಪಡಿಸಿ ಕೊಡಲು ಅವಕಾಶವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದರು.

ಈಗಾಗಲೇ ಸುಮಾರು ೮೦೦ ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಇನ್ನೆರಡು ತಿಂಗಳಲ್ಲಿ ಎಲ್ಲಾ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು. ಮನೆಗಳ ಹಂಚಿಕೆ ಆದ ನಂತರ ಫಲಾನುಭವಿಗಳು ಸಾಲವನ್ನು ತಪ್ಪದೇ ಮರು ಪಾವತಿ ಮಾಡಬೇಕು. ಫಲಾನುಭವಿಗಳು ಸಹ ಬಡವರೇ ಇರುತ್ತಾರೆ. ಬ್ಯಾಂಕ್‌ನವರು ಸಹ ಸಣ್ಣ ಪುಟ್ಟ ಕಾರಣಕ್ಕೆ ಸಾಲ ಮಂಜೂರಾತಿ ನಿರಾಕರಿಸಬಾರದು ಎಂದು ಮನವಿ ಮಾಡಿದರು.

ಆಶ್ರಯ ಶಾಖೆಯ ವಿಷಯ ನಿರ್ವಾಹಕರಾದ ಡಿ.ಸಿ.ನಾಗರಾಜ್ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಜಿ ಪ್ಲಸ್ ಟು ಮನೆಗಳ ಫಲಾನುಭವಿಗಳಿಗೆ ಫಲಾನುಭವಿ ವಂತಿಕೆಯನ್ನು ಬ್ಯಾಂಕ್‌ಗಳ ಮೂಲಕ ಸಾಲದ ರೂಪದಲ್ಲಿ ಕೊಡಿಸುವ ಸಲುವಾಗಿ ಇಂದು ಬ್ಯಾಂಕ್ ಆಫ್ ಬರೋಡ, ಕಾವೇರಿ ಗ್ರಾಮೀಣ ಬ್ಯಾಂಕ್, ಐಡಿಬಿಐ, ಮತ್ತು ಐಸಿಐಸಿ ಬ್ಯಾಂಕ್‌ಗಳ ಅಧಿಕಾರಿಗಳನ್ನು ಸಾಲ ಮೇಳಕ್ಕೆ ಆಹ್ವಾನಿಸಲಾಗಿದೆ ಎಂದರು.

ಫಲಾನುಭವಿಗಳು ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆಯುವಂತಾಗಬಾರದು ಎನ್ನುವ ಜಿಲ್ಲಾಧಿಕಾರಿಗಳು ಸಹ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ಮತ್ತು ಬ್ಯಾಂಕ್ ವ್ಯವಸ್ಥಾಪಕರುಗಳ ಸಾಲ ಮೇಳ ನಡೆಸಲಾಗುತ್ತಿದೆ. ಸ್ಥಳದಲ್ಲೇ ಸಾಲ ಮಂಜೂರಾತಿ ಪತ್ರಗಳನ್ನು ಕೊಡಿಸುವುದು ಇದರ ಉದ್ದೇಶ ಎಂದರು.

ಬ್ಯಾಂಕ್‌ಗಳು ಕೆಲವು ಫಲಾನುಭವಿಗಳಿಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರದ ಸಿಬಿಲ್ ಅಂಕಗಳನ್ನು ನಿರ್ಧರಿಸಿ ಸರಿಯಾಗಿ ಸಾಲ ಮರುಪಾವತಿ ಮಾಡದಿರುವವರ ಕಡತಗಳನ್ನು ಹಿಂದಕ್ಕೆ ಕಳಿಸಿದ್ದಾರೆ. ಅಂತಹವರ ಸಮಸ್ಯೆಗಳನ್ನು ಸರಿಪಡಿಸುವ ಸಲುವಾಗಿ ಸಭೆ ಕರೆಯಲಾಗಿದೆ ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಡೇನ್ಮಲ್ ಯೋಜನೆಯ ಸಮುದಾಯ ಸಂಘಟಕರಾದ ಚಂದ್ರಶೇಖರ್, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು ಭಾಗವಹಿಸಿದ್ದರು.

Salamela program for selected beneficiaries of G Plus Two type group homes

About Author

Leave a Reply

Your email address will not be published. Required fields are marked *

You may have missed