September 19, 2024

ವರಸಿದ್ದಿ ವೇಣುಗೋಪಾಲ್ ರನ್ನು ತರಾಟೆಗೆ ತಗೆದುಕೊಂಡ.ಸ್ಥಳೀಯರು

0
Varasiddivenugopal was beaten up by locals

Varasiddivenugopal was beaten up by locals

ಚಿಕ್ಕಮಗಳೂರು: ನಗರದ ನೆಹರು ನಗರ ಬಡಾವಣೆಯಲ್ಲಿ ನಗರಸಭೆ ಕಸ ಸಂಗ್ರಹಣ ಮಾಡಿಡುತ್ತಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ. ರೋಗ ರುಜೀನಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಇಲ್ಲಿ ಕಸ ಸಂಗ್ರಹಣೆ ಮಾಡಬಾರದು ಎಂದು ನಿವಾಸಿಗಳು ಆಗ್ರಹಿಸಿ ಪ್ರತಿಭಟಿಸಿದರು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಸ್ಥಳೀಯರು ತರಾಟೆಗೆ ತಗೆದುಕೊಂಡರು.

ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ್ ಮಾತನಾಡಿ, ನೆಹರು ನಗರ ಬಡಾವಣೆಯಲ್ಲಿ ನಗರಸಭೆ ಕಸ ಡಂಪಿಂಗ್ ಪಾಯಿಂಟ್ ಇದ್ದು, ಇಲ್ಲಿಂದ ಇಂದಾವರ ಘನತ್ಯಾಜ್ಯ ಘಟಕಕ್ಕೆ ರವಾನೆ ಮಾಡಲಾಗುತ್ತದೆ. ಈ ವಿಚಾರವಾಗಿ ಒಂದು ವರ್ಷದಿಂದ ನಗರಸಭೆ ಗಮನಕ್ಕೆ ತಂದಿದ್ದೇನೆ. ಕಸದಿಂದ ಇಲ್ಲಿನ ನಿವಾಸಿಗಳು ನಿತ್ಯ ದುರ್ವಾ ಸನೆ, ಮಲೇರಿಯಾ, ಡೆಂಗ್ಯೂ ರೋಗ ಹರಡುತ್ತದೆ ಎಂದರು.

ಈ ಬಡಾವಣೆಯಲ್ಲಿ ೧೦ ರಿಂದ ೧೫ ಸಾವಿರ ಜನರು ವಾಸವಿದ್ದು, ನಗರಸಭೆ ಅಧ್ಯಕ್ಷರು ಇದಕ್ಕೆ ಹಿಂದಿನ ಶಾಸಕರೇ ಕಾರಣವೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಚುನಾವಣೆ ನಂತರ ಕಸ ಹಾಕುವ ಜಾಗ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಇಂದಿನ ಶಾಸಕರು ಬೇರೆ ಜಾಗ ಹುಡುಕುತ್ತಿದ್ದೇವೆ ಜಾಗ ಗುರುತಿಸಿದ ನಂತರ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಇಲ್ಲಿ ನಡೆದಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಕಳಪೆ ಕಾಮಗಾರಿ ತನಿಖೆಯಾಗಬೇಕು ಎಂದ ಅವರು, ನಗರಸಭೆ ಅಧ್ಯಕ್ಷರು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜಾಗ ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಇದೇ ಚಿಕ್ಕಮಗಳೂರು ನಗರದಲ್ಲಿ ಫುಡ್‌ಕೋರ್ಟ್, ನಗರಸಭೆ ಉದ್ಯಾನವನ ಕಳಪೆ ಕಾಮಗಾರಿ ನಡೆದಿದೆ ಎಂಬ ದೂರುಗಳು ಇದ್ದು ತನಿಖೆ ನಡೆಯಬೇಕು ಎಂದರು.

Varasiddivenugopal was beaten up by locals

About Author

Leave a Reply

Your email address will not be published. Required fields are marked *

You may have missed