September 19, 2024

ಹೊಸತಂತ್ರಜ್ಞಾನ ಬಳಸಿ ಹೃದಯ ವೈಪಲ್ಯದಿಂದ ಬಳಲುತ್ತಿರುವ ರೋಗಿಯ ಜೀವ ಉಳಿಸುವಿಕೆ

0
ಆಶ್ರಯ ಆಸ್ಪತ್ರೆಯಲ್ಲಿ ಹೊಸತಂತ್ರಜ್ಞಾ ನವನ್ನು ಬಳಸಿ ಹೃದಯ ವೈಪಲ್ಯದಿಂದ ಬಳಲುತ್ತಿರುವ ಯುವ ರೋಗಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಫಿ ಡಿಫಿಬ್ರಿಲೇಟರ್

ಆಶ್ರಯ ಆಸ್ಪತ್ರೆಯಲ್ಲಿ ಹೊಸತಂತ್ರಜ್ಞಾ ನವನ್ನು ಬಳಸಿ ಹೃದಯ ವೈಪಲ್ಯದಿಂದ ಬಳಲುತ್ತಿರುವ ಯುವ ರೋಗಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಫಿ ಡಿಫಿಬ್ರಿಲೇಟರ್

ಚಿಕ್ಕಮಗಳೂರು: ಜಿಲ್ಲೆಯಲ್ಲೇ ಮೊದಲನೇ ಬಾರಿಗೆ ಆಶ್ರಯ ಆಸ್ಪತ್ರೆಯಲ್ಲಿ ಹೊಸತಂತ್ರಜ್ಞಾ ನವನ್ನು ಬಳಸಿ ಹೃದಯ ವೈಪಲ್ಯದಿಂದ ಬಳಲುತ್ತಿರುವ ಯುವ ರೋಗಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಫಿ ಡಿಫಿಬ್ರಿಲೇಟರ್ ಮಾಡಲಾಗಿದೆ ಎಂದು ಹೃದ್ರೋಗ ತಜ್ಞ ಡಾ|| ಅನಿಕೇತ್ ವಿಜಯ್ ತಿಳಿಸಿದ್ದಾರೆ

ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಈ ತಂತ್ರಜ್ಞಾನವನ್ನು ಪೇಸ್‌ಮೇಕರ್ ಅಳವಡಿಕೆಗೆ ಹೋಲುವ ಸಣ್ಣ ವಿಧಾನದಂತೆ ಬಳಲಾಗುತ್ತದೆ. ಆದರೆ ಹೃದಯದ ಪಂಪಿಂಗ್ ಕಾರ್ಯವನ್ನು ಹೆಚ್ಚಿಸಲು ಈ ತಂತ್ರಜ್ಞಾನ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

೪೦ ವರ್ಷದ ವಯಸ್ಸಿನ ಪುರುಷ ರೋಗಿಯ ಎಲ್‌ಬಿಬಿಬಿ ಡಿಸೆಎಮ್ ಡೈಲೇಟೆಡ್ ಕಾರ್ಡಿಯೋಮಯೋ ಪತಿ ಹೊಂದಿದ್ದು ಉಸಿರಾಟದ ತೊಂದರೆ ಮತ್ತು ಎರಡು ಕಾಲುಗಳ ಊತ ಮತ್ತು ಮುಖದ ಊತದಿಂದ ಇತ್ತೀ ಚೆಗೆ ಆಶ್ರಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞ ಡಾ|| ಅನಿಕೇತ್ ವಿಜಯ್ ರೋಗ ಇರುವುದು ಪತ್ತೆ ಹಚ್ಚಿದ್ದರು.

ರೋಗಿಯ ಹೃದಯದ ಪಂಪಿಂಗ್ ಕಾರ್ಯವು ಶೇ.೨೦ ಆಗಿತ್ತು. ಸಾಮಾನ್ಯ ಹೃದಯ ಪಂಪಿಂಗ್ ಕಾರ್ಯವು ಶೇ.೬೦ ಇರುತ್ತದೆ. ರೋಗಿಯನ್ನು ಆರಂಭದ ಮೂರು ತಿಂಗಳ ಕಾಲ ಔಷಧಿಗಳೊಂದಿಗೆ ಚಿಕಿತ್ಸೆ ನೀಡ ಲಾಯಿತು. ಹೃದಯದ ಪಂಪಿಂಗ್ ಮಾಡುವ ಕಾರ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.

ಡಾ| ಅನಿಕೇತ್ ವಿಜಯ್ ಮತ್ತು ಅವರ ತಂಡವು ಕಾರ್ಡಿಯಾಕ್ ರೀಸಿಂಕ್ರೊನೇಸೇಶನ್ ಥೆರಫಿ ಡಿಫಿಬ್ರಿಲೇಟರ್ ಎಂಬ ಈ ಹೊಸ ತಂತ್ರಜ್ಞಾನದ ಬಗ್ಗೆ ರೋಗಿ ಮತ್ತು ಸಂಬಂಧಿಕರಿಗೆ ಸಲಹೆ ನೀಡಿದರು. ಡಾ|| ಅನಿಕೇತ್ ವಿಜಯ್ ಹಾಗೂ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ.ಮನೀಶ್ ರೈ, ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರೆಪಿ-ಡಿಫಿಬ್ರಿಲೇಟರ್ ಈ ಯಂತ್ರವನ್ನು ರೋಗಿಯ ಎದೆಯಲ್ಲಿ ಇರಿಸಲು ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಈ ಯಂತ್ರವು ರೋಗಿಯ ಎದೆಯಲ್ಲಿ ಇರಿಸಲಾದ ಬ್ಯಾಟರಿ ಮತ್ತು ಬ್ಯಾಟರಿಯಿಂದ ೩ ಲೀಡ್‌ಗಳನ್ನು ಒಳ ಗೊಂಡಿರುತ್ತದೆ ಹಾಗೂ ಈ ಲೀಡ್‌ಗಳನ್ನು ಹೃದಯದ ೩ ಕೋಣೆಗಳಿಗೆ ಸಂಪರ್ಕ ಹೊಂದಿರುತ್ತದೆ. ಈ ಸಂಪೂರ್ಣ ಕಾರ್ಯವಿಧಾನವು೨ ರಿಂದ ೩ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಕಾರ್ಡಿಯಾಕ್ ರೀಸಿಂಕ್ರೊಸೇಶಷನ್ ಥೆರಫಿ-ಡಿಪ್ರಿಬ್ರಿಲೇಟರ್ ನ ಯಶಸ್ವಿ ಅಳವಡಿಕೆಯ ನಂತರ ರೋಗಿಯು ಚೆನ್ನಾಗಿ ಚೇತರಿಸಿಕೊಂಡರು ಮತ್ತು ಶಸ್ತ್ರಚಿಕಿತ್ಸೆಯ ೩ ವಾರಗಳ ನಂತರ ಅವರ ಹೃದಯದ ಪಂಪಿಂಗ್ ಕಾರ್ಯ ವು ಶೇ.೪೫ಗೆ ಹೆಚ್ಚಿಸಿತು.

ಡಾ|| ಅನಿಕೇತ್ ವಿಜಯ್ ಈ ಹೊಸ ತಂತ್ರಜ್ಞಾನವನ್ನು ವಿವರಿಸುತ್ತಾ ಈ ಯಂತ್ರವು ಹೃದಯ ವೈಫಲ್ಯದ ಕೆಲವು ಆಯ್ದ ರೋಗಿಗಳಿಗೆ ಜೀವ ಉಳಿಸುತ್ತದೆ ಮತ್ತು ರೋಗಿಗಳು ತಮ್ಮ ಸಾಮಾನ್ಯ ಜೀವನಶೈಲಿಯನ್ನು ನಡೆ ಬಹುದು ಎಂದು ಹೇಳಿದರು.

Cardiac Resynchronization Therapy Defibrillator in Asylum Hospital

About Author

Leave a Reply

Your email address will not be published. Required fields are marked *

You may have missed