September 19, 2024

ಬಡವರ್ಗದ ಶ್ರೆಯೋಭಿವೃದ್ದಿಗೆ ಕೇಂದ್ರ ಸರ್ಕಾರ ಒತ್ತುನೀಡಿದೆ

0
ಮೂಡಿಗೆರೆ ತಾಲೂಕಿನ ಉರುಬಗ್ಗೆ ಗ್ರಾಮದಲ್ಲಿ ವಿಕಸಿತ್ ಭಾರತ್ ಸಂಕಲ್ಪಯಾತ್ರೆಗೆ ಚಾಲನೆ

ಮೂಡಿಗೆರೆ ತಾಲೂಕಿನ ಉರುಬಗ್ಗೆ ಗ್ರಾಮದಲ್ಲಿ ವಿಕಸಿತ್ ಭಾರತ್ ಸಂಕಲ್ಪಯಾತ್ರೆಗೆ ಚಾಲನೆ

ಚಿಕ್ಕಮಗಳೂರು: ಕೇಂದ್ರದ ನರೇಂದ್ರ ಮೋದಿ ಅವರ ಬಿ.ಜೆ.ಪಿ ಸರ್ಕಾರವು ಬಡ ವರ್ಗದ ಹಿಂದುಳಿದವರ ಶ್ರೆಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ಕೇಂದ್ರ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮೂಡಿಗೆರೆ ತಾಲೂಕಿನ ಉರುಬಗ್ಗೆ ಗ್ರಾಮದಲ್ಲಿ ವಿಕಸಿತ್ ಭಾರತ್ ಸಂಕಲ್ಪಯಾತ್ರೆಗೆ ಚಾಲನೆ ನೀಡಿದ ಬಳಿಕ ಮತನಾಡಿದ ಅವರು ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿ.ಜೆ.ಪಿ ಸರ್ಕಾರ ಕೆಂದ್ರದಲ್ಲಿ ಅಧಿಕಾರಕ್ಕೆ ಬಂದ ೯ ವರ್ಷಗಳಲ್ಲಿ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ ಎಂದರು.

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಉಜ್ವಲ್ ಯೋಜನೆ, ಕಿಸಾನ್ ಸನ್ಮಾನ್ ಯೋಜನೆ, ಕಿಸಾನ್ ಕಾರ್ಡ್ ಯೋಜನೆ, ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹೀಗೆ ಜನಪರವಾಗಿ ಹಲವರು ಯೋಜನೆಗಳನ್ನು ಜಾರಿಗೊಳಿಸಿ ಜನಪರವಾದ ಆಡಳಿತ ನೀಡಲಾಗಿದೆ. ಜಲ ಜೀವನ್ ಮಿಷಯ್ ಮೂಲಕ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದ್ದು ದೇಶದೆಲ್ಲೆಡೆ ಜನೌಷದಾಲಯ ಸ್ಥಾಪಿಸಿ ಬಡ ಜನರೀಗೆ ಅಗ್ಗದ ದರದಲ್ಲಿ ಹೌಷಧಿ ಸಿಗುವಂತೆ ಪ್ರಧಾನಿಗಳು ಮಾಡಿದ್ದಾರೆ ಎಂದರು.

ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಳಲು ಕೇಂದ್ರವು ಸಹಕಾರ ನೀಡಿದ್ದು ರೈತರು ತಮ್ಮ ಜಮೀನಿನಲ್ಲಿ ಡ್ರೋನ್ ಮೂಲಕ ಸೌಷಧಿ ಸಿಂಪಡಣೆ ಮಾಡುವ ತಂತ್ರಜ್ಞಾಜ ಜಾರಿಗೊಳಿಸಲಾಗಿದೆ. ಇದ್ದರಿಂದ ಸಮಯದ ಉಳಿತಾಯದ ಜೊತೆಗೆ ಔಷಧಿ ಸಿಂಪಡಣೆಯಿಂದ ಮನುಷ್ಯರೀಗೆ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಪ್ಪಿಸಿದ್ದಂತಾಗುತ್ತದೆ ಎಂದರು

ಈ ವಿಕಸಿತ್ ಭಾರತ್ ಯಾತ್ರೆಯ ಮೂಲಕ ಕೇಂದ್ರದ ಮತ್ತಷ್ಟು ಯೋಜನೆಗಳನ್ನು ಜನರೀಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ ವಿಧಾನ ಪರಿಷತ್ ಶಾಸಕ ಎಂ.ಕೆ ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಸೇರಿ ಹಲವರು ಹಾಜರಿದ್ದರು.

Vikasit Bharat Sankalpa Yatra

 

About Author

Leave a Reply

Your email address will not be published. Required fields are marked *

You may have missed