September 19, 2024

ಕುರುವಿನಶೆಟ್ಟಿ ಸಮಾಜದ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ

0
ನೀಲಕಂಠೇಶ್ವರ ಕುರುವಿನ ಶೆಟ್ಟಿ ಸಂಘದ ೨೦೨೪ ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ

ನೀಲಕಂಠೇಶ್ವರ ಕುರುವಿನ ಶೆಟ್ಟಿ ಸಂಘದ ೨೦೨೪ ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ

ಚಿಕ್ಕಮಗಳೂರು: ನೀಲಕಂಠೇಶ್ವರ ಕುರುವಿನಶೆಟ್ಟಿ ಸಮಾಜದ ಸಂಘದ ಕಟ್ಟಡ ನಿರ್ಮಾಣಕ್ಕೆ ಹಾಗೂ ಸಮುದಾಯ ಭವನಕ್ಕೆ ಸರ್ಕಾರದಿಂದ ಮಂಜೂರು ಮಾಡಿಸಿ ತಮ್ಮ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.

ಅವರು ತಮ್ಮ ಶಾಸಕರ ಕಚೇರಿಯಲ್ಲಿ ನೀಲಕಂಠೇಶ್ವರ ಕುರುವಿನ ಶೆಟ್ಟಿ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವೂ ಹೊರ ತಂದಿರುವ ೨೦೨೪ ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಸಾವಿರಾರು ಉಚಿತ ಕ್ಯಾಲೆಂಡರ್‌ಗಳನ್ನು ಮುದ್ರಣ ಮಾಡಿ ವಿತರಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಸಕರು ಚಿಕ್ಕ ಚಿಕ್ಕ ಸಮುದಾಯಗಳು ಒಗ್ಗಟ್ಟಾಗಿ ಈ ರೀತಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಸಹಕಾರದಿಂದ ಸಿಗುವ ಗೌರವಕ್ಕಿಂತ ಈ ರೀತಿ ಸಂಘಟನಾತ್ಮಕವಾಗಿ ಸೇರಿದಾಗ ಸಂಘಟನೆಗೆ ಮತ್ತು ಆ ಸಮಾಜಕ್ಕೆ ಬಲ ಬರುತ್ತದೆ ಎಂದು ಹೇಳಿದರು.

ಚಿಕ್ಕ ಚಿಕ್ಕ ಸಮುದಾಯಗಳು ಒಟ್ಟಿಗೆ ಸೇರಿ ಕುರುಹಿನಶೆಟ್ಟಿ ಸಂಘ ಸ್ಥಾಪನೆ ಮಾಡಿದ್ದು, ಈಗ ನಿಗಮವೂ ಆಗಿದೆ. ಈ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಇನ್ನೂ ಹೆಚ್ಚು ಹೆಚ್ಚು ಕೆಲಸ ಮಾಡಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಇಂದುಕುಮಾರ್ ಮಾತನಾಡಿ ಸಂಘದ ವತಿಯಿಂದ ೨೦೨೪ ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಸುಮಾರು ೪ ಸಾವಿರ ಮನೆಗಳಿಗೆ ಈ ಕ್ಯಾಲೆಂಡರ್ ವಿತರಣೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ರಾಜಪ್ಪಶೆಟ್ಟಿ, ಉಪಾಧ್ಯಕ್ಷ ಶಂಕರಶೆಟ್ಟಿ, ಚಂದ್ರಶೇಖರ್, ನಾರಾಯಣ, ಹೆಚ್.ಎಸ್ ರಾಜೇಂದ್ರ, ಮಂಜಪ್ಪಶೆಟ್ಟಿ, ದಶರಥ, ಚಂದ್ರಣ್ಣ, ಲೋಹಿತ್, ಧರಣೇಂದ್ರ, ಚಂದ್ರಾವತಿ ಶಂಕರ್ ಇದ್ದರು.

Neelkantheshwar Kuru’s Shetty Sangh New Calendar 2024 Released

About Author

Leave a Reply

Your email address will not be published. Required fields are marked *

You may have missed