September 19, 2024

ಅಪೂರ್ಣ ಅಮೃತ್ ಯೋಜನೆ ಹಸ್ತಾಂತರಕ್ಕೆ ಶಾಸಕ ತಮ್ಮಯ್ಯ ಆಕ್ರೋಶ

0
ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ

ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಅಮೃತ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ನಗರಸಭೆಗೆ ಹಸ್ತಾಂತರ ಮಾಡಿಕೊಂಡಿರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಹೆಚ್.ಡಿ ತಮ್ಮಯ್ಯ ಅವರು ಪೂರ್ಣಗೊಳ್ಳದ ಯೋಜನೆಯನ್ನು ನಗರಸಭೆಗೆ ವಹಿಸಿಕೊಂಡಿರುವ ಇಂಜಿನಿಯರ್ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಇಂದು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಹಿಂದಿನ ಸಭೆಯ ನಿರ್ಣಯಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದರು. ಡಿಸೆಂಬರ್ ತಿಂಗಳಲ್ಲಿ ನಡೆದ ವಿಶೇ? ಸಾಮಾನ್ಯ ಸಭೆಯಲ್ಲಿ ಅಮೃತ್ ಯೋಜನೆಯನ್ನು ನಗರಸಭೆಗೆ ವಹಿಸಿಕೊಳ್ಳುವ ಕುರಿತು ಸುದೀರ್ಘವಾಗಿ ಚರ್ಚಿಸಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಗರಸಭೆಗೆ ವಹಿಸಿಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.

ನಂತರ ಈ ನೀರು ಸರಬರಾಜಿನ ಪಂಪ್ ಹಾಳಾಗಿ ಲಕ್ಷಾಂತರ ರೂ ಖರ್ಚಾಗುತ್ತಿರುವ ಬಗ್ಗೆ ಬಿಜೆಪಿ ಸದಸ್ಯ ರಾಜಶೇಖರ್, ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸೇರಿದಂತೆ ಎಲ್ಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ಮಧ್ಯೆ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಅವರು ಪಂಪ್ ದುರಸ್ಥಿ ಆಗದೆ ಇನ್ನೂ ಅನೇಕ ಕಡೆಗಳಲ್ಲಿ ನೀರಿನ ಸಂಪರ್ಕ ಕಲ್ಪಿಸದೆ ಪೂರ್ಣವಾಗಿ ಕೆಲಸವಾಗದಿದ್ದರೂ ನಗರಸಭೆಗೆ ವಹಿಸಿಕೊಳ್ಳಲು ಶಿಫಾರಸ್ಸು ಮಾಡಿರುವ ಎಇಇ ಹೊಟ್ಟೆಗೆ ಅನ್ನ ತಿನ್ನುತ್ತಿದ್ದರೆ ಎಂದು ಏನು ತಿನ್ನುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಈ ರೀತಿ ನಾಗರಿಕರ ಹಣವನ್ನು ಅನಗತ್ಯವಾಗಿ ಖರ್ಚಾಗುವಂತೆ ಮಾಡಿರುವುದು ನಾಗರೀಕರಿಗೆ ಮಾಡಿರುವ ದ್ರೋಹ ಮತ್ತು ಅಪರಾಧವಾಗಿದೆ. ಆ ಅಧಿಕಾರಿ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಈ ವಿ?ಯಕ್ಕೆ ವಿವರಣೆ ನೀಡಿದ ಸಭಾಧ್ಯಕ್ಷರ ವರಸಿದ್ಧಿ ವೇಣುಗೋಪಾಲ್ ಅವರು ಬೇಲೂರಿನ ಯಗಚಿ ಜಾಕ್‌ವೆಲ್‌ನಲ್ಲಿರುವ ಪಂಪ್ ಸಂಪೂರ್ಣವಾಗಿ ಹಾಳಾಗಿದ್ದು ಹೊಸದಾಗಿ ಪಂಪ್ ಖರೀದಿ ಸಬ್‌ಮರ್ಸಿಬಲ್ ಹಾಗೂ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕರು ನಗರದಲ್ಲಿ ಉದ್ಯಮ ಪರವಾನಗಿ ಪಡೆಯಲು ಅತ್ಯಂತ ದುಬಾರಿಯಾಗಿ ಅವೈಜ್ಞಾನಿಕವಾಗಿ ನಿಗದಿಪಡಿಸಿದ್ದು ವ್ಯಾಪಾರಸ್ತರಿಗೆ ತುಂಬಾ ಹೊರೆಯಾಗಿದೆ. ಈ ಬಗ್ಗೆ ಮರು ಪರಿಶೀಲನೆ ನಡೆಸಿ ಹಾಲಿ ಇರುವ ಪರವಾನಗಿ ದರದ ಶೇ ೧೦ ರಿಂದ ೧೫ ರ? ಪರಿ?ರಣೆ ಮಾಡಿದರೆ ವ್ಯಾಪಾರೋದ್ಯಮಗಳಿಗೂ ಅನುಕೂಲವಾಗುತ್ತದೆ, ನಗರಸಭೆಗೂ ಆದಾಯ ಬರುತ್ತದೆ ಎಂದು ಹೇಳಿದರು.

ಕಸ ವಿಲೇವಾರಿ ವಿ?ಯದ ಚರ್ಚೆ ನಡೆದಾಗ ಬಿಜೆಪಿ ಸದಸ್ಯ ರಾಜಶೇಖರ್ ಮಾತನಾಡಿ ಇಂದಾವರ ಕಸ ವಿಂಗಡಣಾ ಕೇಂದ್ರಕ್ಕೆ ಪದೇ ಪದೇ ಖರ್ಚು ತೋರಿಸಲಾಗಿದೆ. ಮನೆ ಮನೆ ಕಸ ಸಂಗ್ರಹಣೆಯಲ್ಲಿಯೂ ಅವ್ಯವಹಾರ ನಡೆಯುತ್ತಿದೆ ಎಂಬ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ, ಏನಾರಾ ಮಾಡಿ ಬೆಂಕಿ ಹಾಕಿಕೊಳ್ಳಿ ನಮಗೇನು ನ?ವಿಲ್ಲ. ನಾಗರೀಕರ ಹಣ ದುರುಪಯೋಗವಾಗಬಾರದೆಂದು ಹೇಳಿದರು.

ರಾಜಶೇಖರ್ ಅವರು ಬೆಂಕಿ ಎಂಬ ಪದ ಬಳಕೆ ಮಾಡಿದ ಬಗ್ಗೆ ಕುಪಿತಗೊಂಡ ಕಾಂಗ್ರೆಸ್ ಸದಸ್ಯರುಗಳು ಆ ಮಾತನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದಾಗ ಸ್ಪಲ್ಪ ಹೊತ್ತು ಗದ್ದಲದ ವಾತಾವರಣ ಏರ್ಪಟ್ಟಿತ್ತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕರು ನಗರದಲ್ಲಿ ಕಸ ಸಂಗ್ರಹಣೆ, ಸಮರ್ಪಕವಾಗಿ ನಡೆಯುತ್ತಿಲ್ಲ ವೈಜ್ಞಾನಿಕವಾಗಿ ಕಸ ವಿಂಗಡಣೆ ಆಗುತ್ತಿಲ್ಲ ಎಂದು ಹಲವು ನ್ಯೂನತೆ ತಿಳಿಸಿದಾಗ ಈ ಬಗ್ಗೆ ಉತ್ತರಿಸಿದ ಸಭಾಧ್ಯಕ್ಷರು ಕಸ ಸಾಗಣೆಗೆ ಹೆಚ್ಚುವರಿ ಟಿಪ್ಪರ್‌ಗಳನ್ನು ಖರೀದಿಸುವುದಾಗಿ ತಿಳಿಸಿದರು. ಈ ಚರ್ಚೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯದಂತೆ ವಿಶೇ? ಸಭೆ ಕರೆದು ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಬಿ.ಸಿ ಬಸವರಾಜ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed