September 19, 2024

ವಿವೇಚನಾ ಅಧಿಕಾರ ಬಳಸಿ ನಗರಸಭೆ ನಿರ್ಣಯಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರ ಧರಣಿ

0
ವಿವೇಚನಾ ಅಧಿಕಾರ ಬಳಸಿ ನಗರಸಭೆ ನಿರ್ಣಯಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರ ಧರಣಿ

ವಿವೇಚನಾ ಅಧಿಕಾರ ಬಳಸಿ ನಗರಸಭೆ ನಿರ್ಣಯಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರ ಧರಣಿ

ಚಿಕ್ಕಮಗಳೂರು: ನಗರಸಭೆಯ ಜಮಾ-ಖರ್ಚು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ಪಡೆಯಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಪ? ಬಹುಮತವಿಲ್ಲದೆ ವಿವೇಚನಾಧಿಕಾರ ಬಳಸಿ ನಿರ್ಣಯಗಳನ್ನು ಅಂಗೀಕರಿಸಿದ ನಗರಸಭಾ ಅಧ್ಯಕ್ಷರ ನಿರ್ಧಾರವನ್ನು ಖಂಡಿಸಿ, ಬಿಜೆಪಿ ಸದಸ್ಯರುಗಳು ಧರಣಿ ಕುಳಿತು ಪ್ರತಿಭಟನೆ ನಡೆಸಿದ ಪ್ರಸಂಗ ನಗರ ಸಭೆಯಲ್ಲಿ ಇಂದು ನಡೆಯಿತು.

ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಕೋರಂ ಸಮಬಲ ಇದ್ದುದರಿಂದ ಅಧ್ಯಕ್ಷರ ವಿವೇಚನಾಧಿಕಾರ ಬಳಸಿ ಜಮಾ-ಖರ್ಚು ಸೇರಿದಂತೆ ವಿವಿಧ ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಯಿತು.
ಸಭೆ ಆರಂಭವಾಗಿ ಹಿಂದೆ ನಡೆದ ಸಾಮಾನ್ಯ ಸಭೆ ಹಾಗೂ ವಿಶೇ? ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಅನುಪಾಲನಾ ವರದಿಯ ಚರ್ಚೆಯ ನಂತರ ಇಂದಿನ ಸಭೆಯ ಅಜೆಂಡಾದ ಚರ್ಚೆ ಆರಂಭವಾಗುತ್ತಿದ್ದಂತೆ ಬಹುಮತದ ಗೊಂದಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳ ನಡುವೆ ಆರೋಪ ಪ್ರತ್ಯಾರೋಪಗಳ ಚರ್ಚೆಯೊಂದಿಗೆ ಗದ್ದಲದ ಗೂಡಾಗಿ ಸಭೆ ಪರಿವರ್ತನೆಯಾಯಿತು.

ಈ ಗದ್ದಲದ ಚರ್ಚೆಯಲ್ಲಿ ಹಿಂದಿನ ೫ ತಿಂಗಳ ಜಮಾ-ಖರ್ಚಿನ ಬಗ್ಗೆ ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಸಭೆಯ ಅನುಮೋದನೆ ಕೇಳಿದಾಗ ಬಿಜೆಪಿ ಸದಸ್ಯರಾದ ಟಿ.ರಾಜಶೇಖರ್, ಜೆಡಿಎಸ್‌ನ ಎ.ಸಿ ಕುಮಾರ್‌ಗೌಡ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿ ತಿಂಗಳು ಸದಸ್ಯರಿಗೆ ಜಮಾ-ಖರ್ಚಿನ ವಿವರ ನೀಡಬೇಕಾಗಿದ್ದು ೫ ತಿಂಗಳ ಜಮಾ-ಖರ್ಚಿನ ವಿವರಗಳನ್ನು ಸಭೆಗೆ ತಂದಿರುವುದರಿಂದ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು.

ರಾಜಶೇಖರ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಕಾಂಗ್ರೆಸ್ ಹಿರಿಯ ಸದಸ್ಯ ಸಿ.ಪಿ ಲಕ್ಷ್ಮಣ್ ಮುಂತಾದವರು ಮಾತನಾಡಿ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾವು ವಿರೋಧ ವ್ಯಕ್ತಪಡಿಸಿದರೂ ಬಹುಮತದ ಆಧಾರದ ಅಲ್ಲಿ ನಿರ್ಣಯ ಮಾಡಿಕೊಳ್ಳುತ್ತಿದ್ದರು. ಈಗಲೂ ನಮಗೆ ಬಹುಮತ ಇದೆ ಜಮಾ-ಖರ್ಚು ಹಾಗೂ ಎಲ್ಲಾ ವಿ?ಯಗಳಿಗೆ ತಮ್ಮ ಒಪ್ಪಿಗೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಈ ವಿ?ಯದಲ್ಲಿ ಗದ್ದಲದ ಚರ್ಚೆ ಏರ್ಪಡುತ್ತಿದ್ದಂತೆ ಮಧ್ಯಪ್ರವೇಶಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಅವರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎರಡೂ ಕಡೆ ಸಮಬಲದ ಸದಸ್ಯರಿದ್ದಾಗ ವಿವೇಚನಾ ಮತವನ್ನು ಪರಿಗಣಿಸಿ ನಿರ್ಣಯ ಅಂಗೀಕರಿಸಲು ಕಾನೂನಿನಲ್ಲಿ ಅವಕಾಶ ಇರುವುದರಿಂದ ಇಂದಿನ ಸಭೆಯಲ್ಲಿ ಅನುಮೋದನೆ ನೀಡುವಂತೆ ಸಲಹೆ ನೀಡಿದರು.

ಶಾಸಕರ ಸಲಹೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಎದ್ದುನಿಂತು ಮೇಜು ಗುದ್ದಿ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಇಂದಿನ ಎಲ್ಲಾ ನಿರ್ಣಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರೂಲಿಂಗ್ ನೀಡಿದ ಸಭಾಧ್ಯಕ್ಷರ ವರಸಿದ್ಧಿ ವೇಣುಗೋಪಾಲ್ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು. ಅವರನ್ನು ಹಿಂಬಾಲಿಸಿ ಶಾಸಕರ ಸಹಿತ ಕಾಂಗ್ರೆಸ್ ಸದಸ್ಯರುಗಳು ಸಭೆಯಿಂದ ನಿರ್ಗಮಿಸಿದರು.

ಸಭೆಯನ್ನು ಮೊಟಕುಗೊಳಿಸಿ ತೆರಳುತ್ತಿದ್ದಂತೆಯೇ ಆಕ್ರೋಶಗೊಂಡ ಬಿಜೆಪಿ ಸದಸ್ಯರು ನಗರಸಭಾ ಅಧ್ಯಕ್ಷರ ವಿರುದ್ಧ ಘೋ?ಣೆ ಕೂಗುತ್ತಾ ಸಭಾಂಗಣದಲ್ಲಿಯೇ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಟಿ.ರಾಜಶೇಖರ್ ಇಂದಿನ ಸಭೆ ಕ್ರಮಬದ್ಧವಾಗಿ ನಡೆದಿಲ್ಲ, ಬಿಜೆಪಿ ಪರವಾಗಿದ್ದ ೧೭ ಜನ ಸದಸ್ಯರು ಸಭಾ ನಡವಳಿಕೆಯನ್ನು ವಿರೋಧಿಸಿದ್ದೇವೆ, ಆದರೆ ಶಾಸಕರು ಹಾಗೂ ಸಭಾಧ್ಯಕ್ಷರು ಸೇರಿ ೧೭ ಮಂದಿ ಸದಸ್ಯರುಗಳು ವಿವೇಚನಾಧಿಕಾರ ಬಳಸಿಕೊಂಡು ನಿರ್ಣಯಗಳಿಗೆ ಅನುಮೋದನೆ ಪಡೆದಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ನಗರಸಭೆ ಖಾತೆಯಲ್ಲಿ ಕೇವಲ ಮೂರು ಲಕ್ಷ ರೂ ಹಣ ಇದ್ದರೂ ೫ ಕೋಟಿ ರೂ ಮೊತ್ತದ ಕಾಮಗಾರಿಗಳಿಗೆ ಅನುಮತಿ ಪಡೆಯಲು ಸಭೆಗೆ ಮಂಡಿಸಿದ್ದಾರೆ. ಇದೇ ರೀತಿ ಕೋಟ್ಯಾಂತರ ರೂ ಲೂಟಿ ಮಾಡುವ ಹುನ್ನಾರ ನಡೆಸಿದ್ದು ಇದನ್ನು ಬಿಜೆಪಿ ಸದಸ್ಯರು ವಿರೋಧಿಸಿದ ಕಾರಣ ಬಹುಮತ ಇಲ್ಲದಿದ್ದರೂ ಅನುಮೋದನೆ ಪಡೆದಿರುವುದು ಖಂಡನೀಯ ಮತ್ತು ಕಾನೂನುಬಾಹಿರ ಎಂದು ಹೇಳಿದರು.

ಸಾರ್ವಜನಿಕ ಹಣ ಲೂಟಿಯಾಗುತ್ತಿದ್ದಾರೆ ತಿರುವುದು ಗೊತ್ತಿದ್ದರೂ ಇದನ್ನು ಸರಿಪಡಿಸುವ ಬದಲು ಶಾಸಕ ಹೆಚ್.ಡಿ ತಮ್ಮಯ್ಯ ಅವರು ಕಾನೂನುಬಾಹಿರ ನಿರ್ಣಯಕ್ಕೆ ಬೆಂಬಲಿಸಿರುವುದು ನಾಗರೀಕರಿಗೆ ಮಾಡಿದ ದ್ರೋಹ ಮತ್ತು ಅಪರಾಧ ಎಂದು ರಾಜಶೇಖರ್ ಆರೋಪಿಸಿದರು.
ಎ.ಸಿ ಕುಮಾರಗೌಡ ಮಾತನಾಡಿ ಇಂದು ನಡೆದ ಸಭೆ ಕಾನೂನು ರೀತಿ ನಡೆದಿಲ. ಇಂದು ತೆಗೆದುಕೊಂಡಿರುವ ನಿರ್ಣಯಗಳು ಕಾನೂನುಬಾಹಿರವಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಲ್ಲದೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಇಂದು ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಅವರು ಸಭಾ ಪೀಠದಲ್ಲಿ ಕೂರದೆ ಬಿಜೆಪಿ ಸದಸ್ಯರುಗಳೊಂದಿಗೆ ಕುಳಿತುಕೊಂಡಿದ್ದು, ಇವರನ್ನು ಸೇರಿ ಒಟ್ಟು ೧೭ ಬಿಜೆಪಿ ಸದಸ್ಯರಿದ್ದರು. ಆಡಳಿತ ಪಕ್ಷದ ಪರವಾಗಿ ಶಾಸಕ ತಮ್ಮಯ್ಯ ಸೇರಿ ಒಟ್ಟು ೧೬ ಮಂದಿ ಸದಸ್ಯರಿದ್ದು, ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ಆಡಳಿತ ಪಕ್ಷದ ಪರವಾಗಿ ೧೭ ಮಂದಿ ಹಾಜರಿದ್ದರು.

ಸಭೆ ಮುಗಿದ ಬಳಿಕ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಕಾನೂನಿನಲ್ಲಿ ಅವಕಾಶವಿರುವಂತೆ ಇಂದು ಸಭೆಯ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಬಿಜೆಪಿ ಸದಸ್ಯರು ಅನಾವಶ್ಯಕವಾಗಿ ವಿರೋಧಿಸುವ ಮೂಲಕ ನಗರದ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆಂದು ಆರೋಪಿಸಿದರು.

ತಾವು ಅಧ್ಯಕ್ಷರಾದ ನಂತರ ೩೫ ವಾರ್ಡ್‌ಗಳಿಗೂ ತಾರತಮ್ಯವಾಗದಂತೆ ಸಮಗ್ರವಾಗಿ ನಗರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಹಿಂದಿನ ಇತಿಹಾಸದಲ್ಲಿಯೇ ಅತಿಹೆಚ್ಚು ಅಭಿವೃದ್ಧಿ ಕೆಲಸಗಳು ತಮ್ಮ ಅವಧಿಯಲ್ಲಿ ನಡೆದಿದೆ ಎಂದು ಹೇಳಿದರು.‌

BJP-JDS members’ sit-in for municipal council resolution using discretionary power

About Author

Leave a Reply

Your email address will not be published. Required fields are marked *

You may have missed