September 19, 2024

ಜ.8ಕ್ಕೆ ನಗರದಲ್ಲಿ ಭೀಮಾ ಕೊರೆಂಗಾವ್ ವಿಜಯೋತ್ಸವ

0
Press conference of platform leaders of dalit organizations

Press conference of platform leaders of dalit organizations

ಚಿಕ್ಕಮಗಳೂರು:  ಸಮಾನತೆ ಮತ್ತು ಶಿಕ್ಷಣಕ್ಕಾಗಿ ಹೋರಾಟ ನಡೆಸಿದ ೨೦೬ ನೇ ಭೀಮಾ ಕೊರೆಂಗಾವ್ ವಿಜಯೋತ್ಸವ ದಿನದ ಅಂಗವಾಗಿ ಜ.೮ ರಂದು ನಗರದ ಅಜಾದ್‌ಪಾರ್ಕ್ ವೃತ್ತದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ದಲಿತ ಸಂಘಟನೆಗಳ ವೇದಿಕೆ ತೀರ್ಮಾನಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ದಲಿತ ಸಂಘಟನೆ ಮುಖಂಡರುಗಳಾದ ಹಿರೇಮಗಳೂರು ರಮೇಶ್ ಹಾಗೂ ಹೊನ್ನೇಶ್ ಅಂದು ಮಧ್ಯಾಹ್ನ ೨ ಗಂಟೆಗೆ ಕೆಇಬಿ ವೃತ್ತದಿಂದ ಡಿಜೆ ಮತ್ತು ವಿವಿಧ ಕಲಾತಂಡಗಳೊಂದಿಗೆ ಎಂ.ಜಿ ರಸ್ತೆ ಮೂಲಕ ಬೃಹತ್ ಮೆರವಣಿಗೆ ಮೂಲಕ ಆಜಾದ್ ವೃತ್ತ ತಲುಪಲಿದೆ ಎಂದರು.

ಅದೇ ದಿನ ಸಂಜೆ ೫:೩೦ಕ್ಕೆ ಪ್ರಾರಂಭವಾಗುವ ವೇದಿಕೆ ಕಾರ್ಯಕ್ರಮದಲ್ಲಿ ಮಂಡರಗಿ ತೋಂಡದಾರ್ಯ ಶಾಖಮಠದ ಬೈಲೂರು ನಿ?ಲ ಮಂಟಪ ನಿಜಗುಣಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಶಾಸಕರಾದ ಹೆಚ್.ಡಿ ತಮ್ಮಯ್ಯ, ನಯನ ಮೋಟಮ್ಮ, ಮಹಾರಾ? ಸೊಲ್ಲಾಪುರ ಕ್ಷೇತ್ರದ ಶಾಸಕಿ ಪ್ರಣತಿ ಸಿಂಧೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುಮಾರು ೨೦ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ವಿಶೇ? ಆಹ್ವಾನಿತರಾಗಿ ಮಹಾ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಧಾರಾವಾಹಿ ತಂಡ ಭಾಗವಹಿಸಲಿದೆ ಎಂದ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಿಜಗುಣಾನಂದ ಶ್ರೀಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದೆಂದು ಹೇಳಿದರು.

ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದ ಯುದ್ಧದಿಂದ ಮುಂದೆ ಅಸ್ಪೃಶ್ಯನೊಬ್ಬ ಸಮಾನತೆಯ ಸಂವಿಧಾನ ರಚಿಸಲು ಸಾಧ್ಯವಾಯಿತು. ಆದರೆ ಇಂದು ಈ ಸಂವಿಧಾನದ ವಿರುದ್ಧ ಒಂದು ದೇಶ ಒಂದು ಕಾನೂನು ಬಂಡವಾಳಿಗರ ಪರ ಭೂ ಕಾಯ್ದೆ, ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ನೂತನ ಶಿಕ್ಷಣ ನೀತಿ ೨೦೨೦ ಜಾರಿ ಮಾಡಲಾಗುತ್ತಿದೆ ಎಂದು ದೂರಿದರು.

ಲಾಭದಾಯಕ ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ನಿರುದ್ಯೋಗ ಹೆಚ್ಚಾಗಿ ವಿದ್ಯಾವಂತ ಯುವಕರು ಸಂಸತ್ತಿನ ಒಳಗೆ ಪ್ರತಿಬಿಂಬಿಸುವಂಥಾಗಿದೆ. ಈ ಅಸಮಾನತೆಯ ಸೃಷ್ಟಿಯ ವಿರುದ್ಧ ಐತಿಹಾಸಿಕ ಜಾಗೃತಿಯೊಂದಿಗೆ ಸಮಾನತೆ ಮತ್ತು ವೈಜ್ಞಾನಿಕ ಭಾರತ ಕಟ್ಟಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೆಮಕ್ಕಿ ಲಕ್ಷ್ಮಣ, ಜಯರಾಮ್, ಶ್ರೀನಿವಾಸ್ ದಂಟರಮಕ್ಕಿ ಮತ್ತು ಧರ್ಮೇಶ್, ಅಣ್ಣಯ್ಯ, ರಘು ಉಪಸ್ಥಿತರಿದ್ದರು.

Bhima Korengao Victory Festival in the city on January 8

About Author

Leave a Reply

Your email address will not be published. Required fields are marked *

You may have missed