September 19, 2024

ಹೋರಾಟಗಾರರುಗಳ ಮೇಲೆ ಹೂಡಿರುವ ರಾಜಕೀಯ ಪ್ರೇರಿತ ಸುಳ್ಳು ಮೊಕದ್ದಮೆ ಹಿಂಪಡೆಯಬೇಕು ಮನವಿ

0
ಕಾಂಗ್ರೆಸ್ ಮುಖಂಡ ಕೆ.ಭರತ್ ಗೃಹ ಸಚಿವರಿಗೆ ಮನವಿ

ಕಾಂಗ್ರೆಸ್ ಮುಖಂಡ ಕೆ.ಭರತ್ ಗೃಹ ಸಚಿವರಿಗೆ ಮನವಿ

ಚಿಕ್ಕಮಗಳೂರು: ಕಳೆದ ಎರಡು ದಶಕಗಳಿಂದ ಜನಪರವಾಗಿ, ರೈತರ ಪರವಾಗಿ, ದೀನ ದಲಿತರ ಪರವಾಗಿ ಹೋರಾಟ ಮಾಡಿದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರುಗಳು, ರೈತ ಸಂಘದ ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರುಗಳ ಮೇಲೆ ಹೂಡಿರುವ ರಾಜಕೀಯ ಪ್ರೇರಿತ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಗೃಹ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.

ಮನವಿ ನೀಡಿ ಮಾತನಾಡಿ ಈ ವಿ?ಯ ತಿಳಿಸಿರುವ ಅವರು ವಿನಾ ಕಾರಣ ನ್ಯಾಯಯುತವಾಗಿ ಜನಸಾಮಾನ್ಯರ ಪರವಾಗಿ ಹೋರಾಟ ಮಾಡುವವರುಗಳ ಮೇಲೆ ಅನಾವಶ್ಯಕವಾಗಿ ಮೊಕದ್ದಮೆಗಳನ್ನು ದಾಖಲಿಸಬಾರದು ಹಾಗೂ ಹೋರಾಟ ಮಾಡುವವರಿಗೆ ಯಾವುದೇ ರೀತಿಯಾದ ತೊಂದರೆ ನೀಡಬಾರದು ಮತ್ತು ಸುಮಾರು ೨೦ ರಿಂದ ೩೦ ವ?ಕ್ಕೂ ಮೇಲ್ಪಟ್ಟು ಜಿಲ್ಲೆಯಲ್ಲಿಯೆ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಬಡ್ತಿಹೊಂದಿ ಉನ್ನತ ಮಟ್ಟಕ್ಕೆ ಹೋದರೂ ಕೂಡ ನಾನಾ ರೀತಿಯ ಸಬೂಬುಗಳನ್ನು ನೀಡಿ ಇಲ್ಲಿಯೇ ಉಳಿದುಕೊಂಡಿರುವ ಕೆಲವು ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಪರಿಶೀಲಿಸಿ ಅಂತವರುಗಳನ್ನು ತಕ್ಷಣ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ ಇಲಾಖೆ ಸ್ಥೈರ್ಯವನ್ನು ಎತ್ತಿ ಹಿಡಿಯಬೇಕೆಂದಿದ್ದಾರೆ.

ಇತ್ತೀಚಿಗೆ ನಗರದಲ್ಲಿ ನಡೆದ ವಕೀಲರು ಮತ್ತು ಪೊಲೀಸ್ ಇಲಾಖೆಯ ಜಟಾಪಟಿಯಿಂದ ಸರ್ಕಾರ ತಲೆತಗ್ಗಿಸಿದ್ದಲ್ಲದೆ ಉಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಪೊಲೀಸರಿಗೆ ಛೀಮಾರಿ ಹಾಕಿರುವುದನ್ನು ಸ್ಮರಿಸಿದ್ದಾರೆ.

ಕೆಲವು ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ಎಂಬುದನ್ನು ಮರೆತು ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಜನಸಾಮಾನ್ಯರೊಂದಿಗೆ ವ್ಯತಿರಿಕ್ತ ರೀತಿಯಲ್ಲಿ ಹಾಗೂ ಭಯಭೀತಿ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ತಾವು ಈ ಹಿಂದೆ ಜಿಲ್ಲೆ ಉಸ್ತುವಾರಿ ಸಚಿವರಾದ ವೇಳೆಯಲ್ಲಿ ಪೊಲೀಸ್ ಇಲಾಖೆಯನ್ನು ಹದ್ದುಬಸ್ತಿನಲ್ಲಿಟ್ಟ ಕಾರಣ ಜನಸಾಮಾನ್ಯರು ಭಯಭೀತಿ ಇಲ್ಲದೆ ಠಾಣೆಗಳಿಗೆ ಹೋಗಿ ನಿರ್ಭೀತಿಯಿಂದ ನ್ಯಾಯ ಪಡೆದುಕೊಳ್ಳುತ್ತಿದ್ದರು. ತಾವು ಅಂದು ರಾಜ್ಯಕ್ಕೆ ಮಾದರಿ ಗೃಹಮಂತ್ರಿಯಾಗಿ ತೋರಿಸಿಕೊಟ್ಟಿದ್ದೀರಿ. ಈಗ ಆ ವಾತಾವರಣ ಇಲ್ಲದಿರುವುದು ಶೋಚನೀಯವಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಕಳೆದ ೧೦ ವ?ಗಳಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಗೆ ಅಗತ್ಯವಿರುವ ಕಡೆ ಪೊಲೀಸ್ ಉಪಠಾಣೆಗಳ ತೀರಾ ಅವಶ್ಯಕತೆ ಇರುತ್ತದೆ. ಇದರಿಂದ ಭೂ ಮಾಫಿಯಾ, ಕಳ್ಳತನ, ಕಾನೂನುಬಾಹಿರ ಚಟುವಟಿಕೆಗಳು, ಗಾಂಜಾ ಮತ್ತು ಡ್ರಗ್ಸ್, ವೇಶ್ಯಾವಾಟಿಕೆ ಹಾಗೂ ಇನ್ನೂ ಮುಂತಾದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಈ ಬಗ್ಗೆ ತಾವು ಗಂಭೀರವಾಗಿ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ.

Congress leader K. Bharat appealed to the Home Minister

About Author

Leave a Reply

Your email address will not be published. Required fields are marked *

You may have missed