September 19, 2024
ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ

ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ

ಚಿಕ್ಕಮಗಳೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಿ ಬೆಳಗ್ಗೆ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ದಂಪತಿಗಳು ಗಣಪತಿ ಹೋಮ, ಸುದರ್ಶನ ಹೋಮವನ್ನು ಲೋಕ ಕಲ್ಯಾಣಕ್ಕಾಗಿ ಮತ್ತು ಕೊರೋನಾ ಮುಕ್ತವಾಗಲೆಂದು ನೆರೆವೇರಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು

ಶನಿವಾರ ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಿ ವೈಕುಂಠ ದ್ವಾರದ ಬಳಿ ಪುಣ್ಯಹವಾಚನ ದ್ವಾರಪೂಜೆ, ಪ್ರಕಾರೋತ್ಸವದೊಂದಿಗೆ ಸಪ್ತದ್ವಾರದ ಮೂಲಕ ವೈಕುಂಠ ದ್ವಾರ ಪ್ರವೇಶವನ್ನು ಭಕ್ತಾಧಿಗಳು ಬೆಳಿಗ್ಗೆ ೫ ರಿಂದಲೆ ವಿಶೇಷ ಪೂಜೆಯೊಂದಿಗೆ ದೇವರ ದರ್ಶನ ಪಡೆದು ಪ್ರಸಾದ ಪಡೆದರು.

ವೈಕುಂಠ ಏಕಾದಶಿ ಅಂಗವಾಗಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ಮಾತನಾಡಿ ನಾಗರೀಕರ ಆಯಸ್ಸು, ಆರೋಗ್ಯ ಕಾಪಾಡಲಿ ಎಂಬ ಉದ್ದೇಶದಿಂದ ಜಿಲ್ಲಾ ಒಕ್ಕಲಿಗರ ಸಂಘ ವೈಕುಂಠ ಏಕಾದಶಿ ಆಚರಣೆ ಏರ್ಪಡಿಸಲಾಗಿದೆ ಎಂದರು.

ಈಗಾಗಲೇ ಕೋವಿಡ್ ಹೊಸ ರೂಪಾಂತರಿ ಜೆಎನ್-೧ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಜಿಲ್ಲೆಯ ಜನತೆಗೆ ಈ ಮಹಾಮಾರಿ ಬರದಂತೆ ಭಗವಂತ ಕಾಪಾಡಲಿ ಎಂದು ಹಾರೈಸಿದರು.

ಪ್ರತೀ ವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ಹೋಮ, ಹವನ ಮಾಡುವ ಮೂಲಕ ನಗರದ ನಾಗರೀಕರು ಹಾಗು ನಾಡಿನ ಒಳಿತಿಗಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಎನ್.ಲಕ್ಷ್ಮಣಗೌಡ, ನಿರ್ದೇಶಕರಾದ ಕೆ.ಕೆ.ಮನುಕುಮಾರ್, ಕೆ.ಎಸ್.ನಾರಾಯಣಗೌಡ, ಜಿ.ಎಚ್.ದಿನೇಶ್, ಡಿ.ಎಲ್.ವಸಂತಕುಮಾರಿ, ಟಿ.ಡಿ.ಮಲ್ಲೇಶ್, ನಿಕಟಪೂರ್ವ ಗೌರವ ಕಾರ್ಯದರ್ಶಿ ಉಮೇಶ್ ಚಂದ್ರ, ದೇವಸ್ಥಾನ ಸಲಹಾಮಿತಿ ಸದಸ್ಯ ಐ.ಕೆ.ಓಂಕಾರೇಗೌಡ, ವ್ಯವಸ್ಥಾಪಕ ರಾಜು, ಸಿಇಓ ಕುಳ್ಳೇಗೌಡ ಉಪಸ್ಥಿತರಿದ್ದರು.

Special worship as part of Vaikuntha Ekadashi

About Author

Leave a Reply

Your email address will not be published. Required fields are marked *

You may have missed