September 19, 2024

ಏಸು ಸ್ವಾಮಿಗಳ ಜನ್ಮ ದಿನವನ್ನು ಕ್ರಿಸ್‌ಮಸ್ ಆಚರಿಸಲಾಗುತ್ತಿದೆ

0
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ನರಿಗೆ ಶಾಸಕ ಹೆಚ್.ಡಿ ತಮ್ಮಯ್ಯ ಶುಭಾಷಯ ಕೋರಿದರು

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ನರಿಗೆ ಶಾಸಕ ಹೆಚ್.ಡಿ ತಮ್ಮಯ್ಯ ಶುಭಾಷಯ ಕೋರಿದರು

ಚಿಕ್ಕಮಗಳೂರು: ಶಾಂತಿ, ಪ್ರೀತಿ, ಕ್ಷಮೆ ಇವುಗಳ ಆಧಾರದ ಮೂಲಕ ಇಡೀ ಜಗತ್ತಿಗೆ ಧರ್ಮ ಪ್ರಚಾರ ಮಾಡಿದ ಏಸುಕ್ರಿಸ್ತರು ಬೈಬಲ್ ರಚಿಸಿ ಶಾಂತಿ, ಪ್ರೀತಿ, ಪ್ರೇಮ, ಹಾಗೂ ಅಹಿಂಸೆ ಇವುಗಳನ್ನು ಪ್ರತಿಪಾಧಿಸಿದ್ದರು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ನಗರದ ಹೋಲಿ ಫ್ಯಾಮಿಲಿ ಚರ್ಚ್ ಮತ್ತು ಕೆ.ಎಂ ರಸ್ತೆಯ ಬಿಷಪ್ ಚರ್ಚ್ ಹಾಗೂ ಸಂತ ಜೋಸೆಫರ ಚರ್ಚ್‌ಗೆ ಭೇಟಿ ನೀಡಿ ಇಂದು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ನರಿಗೆ ಶುಭಾಷಯ ಕೋರಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಏಸುಕ್ರಿಸ್ತರನ್ನು ತಪ್ಪಾಗಿ ಅರ್ಥೈಸಿಕೊಂಡು ಶಿಲುಭೆಗೆ ಏರಿಸುತ್ತಾರೆ. ಅದರೆ ೩ ದಿನಗಳ ನಂತರ ಪುನರ್ ಜನ್ಮ ಪುನಹಾ ಜಗತ್ತಿಗೆ ಆಗಮಿಸುವ ಏಸುಕ್ರಿಸ್ತರ ಹೊಸ ಅವತಾರವನ್ನೇ ಈಸ್ಟರ್ ಎಂದು ಇಡೀ ಜಗತ್ತಿನಲ್ಲಿ ಅಲ್ಪಸಂಖ್ಯಾತರು ಆಚರಿಸುತ್ತಾರೆ ಎಂದು ಹೇಳಿದರು.

ಏಸು ಸ್ವಾಮಿಗಳ ಜನ್ಮ ದಿನವನ್ನು ಕ್ರಿಸ್‌ಮಸ್ ಆಚರಿಸಲಾಗುತ್ತಿದೆ. ಧರ್ಮಕ್ಕಾಗಿ, ಸಮಾನತೆಗಾಗಿ ಹೋರಾಟ ಮಾಡುವವರಿಗೆ ಖಂಡಿತ ಸಾವು ಇಲ್ಲ. ಪ್ರಪಂಚ ಇರುವವರೆಗೂ ಅವರು ಅಜರಾಮರರಾಗಿರುತ್ತಾರೆ. ಎಲ್ಲಾ ಧರ್ಮದಲ್ಲಿಯೂ ಈ ರೀತಿಯ ಪ್ರತಿಪಾದಕರಿರುತ್ತಾರೆ ಎಂದು ತಿಳಿಸಿದರು.

ನಾನು ಮಾನವ ಧರ್ಮ ಪ್ರೀತಿಸುವ ಜೊತೆಗೆ ಸರ್ವ ಧರ್ಮವನ್ನು ಪ್ರೀತಿಸುತ್ತೇನೆ, ಬಸವಣ್ಣ, ಡಾ. ಬಿ.ಆರ್ ಅಂಬೇಡ್ಕರ್ ಹೇಳಿದಂತೆ ಸರ್ವರನ್ನು ಸಮಾನವಾಗಿ ಕಾಣುವುದೇ ಮಾನವ ಧರ್ಮ ಎಂದು ವಿಶ್ಲೇಷಿಸಿದರು.

ಇಂದು ಏಸುಕ್ರಿಸ್ತರ ಜನ್ಮ ದಿನಾಚರಣೆ ಆಚರಿಸಿ ಕೇಕ್ ಕತ್ತಿರಿಸಿ ಹಬ್ಬ ಆಚರಿಸಿದರೆ ಸಾಲದು. ಅವರು ಸಾರ್ವಜನಿಕ ಬದುಕಿಗೆ ಹಾಕಿಕೊಟ್ಟಿರುವ ಅಹಿಂಸೆ, ಕ್ಷಮೆ ಈ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಧಾರ್ಮಿಕ ಪುರಷರ ಜಯಂತಿ ಆಚರಣೆಗೆ ನಿಜ ಅರ್ಥ ಬರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಸ್ತ ಕ್ರಿಸ್ತ ಸಮುದಾಯಕ್ಕೆ ಶುಭಾಷಯ ಕೋರಿದರು.ಫಾಧರ್ ಆಂತೋನಿ ಪಿಂಟೋ, ಫಾದರ್ ರಿಜು ಜೋಸೆಫ್, ಐಎಫ್‌ಕೆಸಿಎ ಕಾರ್ಯದರ್ಶಿ ಮೈಕಲ್ ಬ್ಯಾಪ್ಟಿಸ್ಟ್, ಪ್ಯಾರಿಸ್ ಕೌನ್ಸಿಲ್ ಕಾರ್ಯದರ್ಶಿ ಕ್ಲೌಡ್ ಲೋಬೋ, ಜೇಮ್ಸ್ ಪಿಂಟೋ ಮತ್ತು ಸಿಲ್ವೆಸ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಉಪಸ್ಥಿತರಿದ್ದರು.

Jesus Swami’s birthday is celebrated as Christmas

About Author

Leave a Reply

Your email address will not be published. Required fields are marked *

You may have missed