September 19, 2024

Hindu capability: ಹಿಂದು ಸಾಮರ್ಥ್ಯ ಏನೆಂಬುದು ಸತೀಶ್ ಜಾರಕಿಹೊಳಿಗೆ ತೋರಿಸಬೇಕು

0

ಚಿಕ್ಕಮಗಳೂರು: ಯಾರೋ ಕೆಲವರು ಕೀಳಾಗಿ ಬಿಂಬಿಸುವ ಪ್ರಯತ್ನ ಮಾಡಿರಬಹುದು. ಆದರೆ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ತನ್ನ ತಪ್ಪಿಗೆ ಕ್ಷಮೆಯನ್ನು ಯಾಚಿಸದೆ ದುರಂಹಕಾರದ ವರ್ತನೆ ತೋರಿಸಿದ್ದಾರೆ ಹಾಗಾಗಿ ತಮ್ಮನ್ನು ತಾವು ಹಿಂದೂ ಎಂದು ಧರ್ಮದ ಪಟ್ಟಿಯಲ್ಲಿ ಯಾರ್ಯಾರು ಗುರುತಿಸಿಕೊಂಡಿದ್ದೀರೋ ಅವರ್ಯಾರು ಕಾಂಗ್ರೆಸ್‌ಗೆ ಓಟು ಹಾಕಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆಗೆ ಚಿಕ್ಕಮಗಳೂರು ನಗರದಲ್ಲಿ  ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುವಿನ ಸಾಮರ್ಥ್ಯ ಏನೆಂಬುದನ್ನು ಸತೀಶ್ ಜಾರಕಿಹೊಳಿ ಮತ್ತು ಅವರ ಪಕ್ಷಕ್ಕೂ ತೋರಿಸಬೇಕು. ಈ ಮೂಲಕ ಒಡೆದಾಳುವ ನೀಚ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಬೇಕು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು.

ಸತೀಶ್ ಜಾರಕಿಹೊಳಿ ಹೀಗೆ ಹೇಳುವ ಮೂಲಕ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಮಹಾರಾಜರಿಗೆ ಮತ್ತು ಮರಾಠ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದ್ದಾರೆ. ಶಿವಾಜಿ ಮಹಾರಾಜರು ಮೊಗಲರ ವಿರುದ್ಧ ಸುಲ್ತಾನೆಟ್‌ಗಳ ವಿರುದ್ಧ ಹಿಂದುಗಳನ್ನು ಸಂಘಟಿಸಿ ಭಗವಧ್ವಜವನ್ನೇ ಆದರ್ಶವಾಗಿಟ್ಟುಕೊಂಡು ಸಮರ್ಥರಾಮದಾಸರ ಪ್ರೇರಣೆಯಿಂದ ಹಿಂದು ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿಕೊಂಡರು. ವಿಜಯನಗರದ ಅರಸರು ತಮ್ಮನ್ನು ತಾವು ಹಿಂದೂರಾಜ ಸುರತ್ರಾಣ ಎಂದು ಕರೆಸಿಕೊಂಡರು ಅಂದರೆ ವಿಜಯ ನಗರದ ಮಹಾರಾಜರುಗಳಿಗೆ ಅವರು ಅಪಮಾನಿಸಿದ್ದಾರೆ. ಯಾವ ಉದ್ದೇಶದಿಂದ ಪುನರುತ್ಥಾನವಾಗಬೇಕು, ಸಾಂಸ್ಕೃತಿಕ ಹಿರಿಮೆ ರಕ್ಷಣೆ ಮಾಡಬೇಕೆಂದು ವಿಜಯನಗರ ಸ್ಥಾಪನೆಯಾಯಿತೊ, ಸಾಮ್ರಾಜ್ಯದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಸಮುದಾಯಕ್ಕೆ ಅಪಮಾನಿಸಿದ್ದಾರೆ. ಅಂದರೆ ಅವರು ಹುಟ್ಟಿದ ಸಮುದಾಯಕ್ಕೆ ಜಾರಕಿಹೋಳಿ ಅಪಮಾನಿಸಿದ್ದಾರೆ ಎಂದು ಕಿಡಿಕಾರಿದರು.

ದತ್ತಪೀಠಕ್ಕೆ ಅರ್ಚಕರ ನೇಮಕಕ್ಕೆ ಬೇಕಾದ ಪ್ರಕ್ರಿಯೆಗಳೆಲ್ಲವನ್ನು ಸರ್ಕಾರ ಮಾಡುತ್ತಿದ್ದು  ಎಲ್ಲಾ ದೇವಾಲಯಗಳಂತೆ ಇದಲ್ಲ ನಿಯಮಗಳ ಮೇಲೆ ನಡೆಯಬೇಕಿದೆ ನ್ಯಾಯಾಲಯದ ತೀರ್ಪು, ಅದು ಹಾಕಿರುವ ನಿಬಂಧನೆಗಳು ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಿದೆ ಎಂದರು.

ಶ್ರೀರಾಮಸೇನೆ ಹೇಳಿಕೆ ನೀಡುತ್ತಿರುವುದು ಯಮೋಷನ್ ಮೇಲೆ ಎನ್ನುವುದಾದರೆ ನಾವೂ ಅಂತಹ ನೂರು ಗಡುವನ್ನು ನೀಡಿದ್ದೇವೆ ಆದರೆ ರಿಯಾಲಿಟಿಯಾಗಿ ನಿಯಮಗಳನ್ನು ಪಾಲಿಸಿಯೇ ಮಾಡಬೇಕಿದೆ. ಬಿಜೆಪಿ ಸರ್ಕಾರ ಕ್ಯಾಬಿನೆಟ್ ಉಪ ಸಮಿತಿಗಳನ್ನು ರಚನೆ ಮಾಡಿ ಅರ್ಚಕರ ನೇಮಕ, ಧರ್ಮದರ್ಶಿ ಮಂಡಳಿ ನೇಮಿಸಬೇಕೆಂದು ನಿರ್ಣಯಿಸಿ ವರದಿ ನೀಡಿದೆ. ಅದನ್ನು ಆದರಿಸಿ ಅರ್ಜಿ ಆಹ್ವಾನಿಸಿ ಧಾರ್ಮಿಕ ಪರಿಷತ್ ನಿರ್ಣಯವನ್ನು ಕೈಗೊಂಡಿದೆ ಆ ನಿರ್ಣಯ ಸರ್ಕಾರದ ಆದೇಶವಾಗಿ ಹೊರಗೆ ಬರಲು ಕೆಲ ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ ನಿರಂತರ ಹೋರಾಟ ಮಾಡುತ್ತಿರುವವರನ್ನು ಈ ಜಿಲ್ಲೆಯಲ್ಲಿ ಜನ ಗೆಲ್ಲಿಸಿದ್ದಾರೆ. ಶ್ರೀರಾಮಸೇನೆ ಭಾವನೆ ಬೇರೆಯಲ್ಲ ನಮ್ಮ ಭಾವನೆ ಬೇರೆಯಲ್ಲ. ಅಂತಹರ ಭಾವನೆ ಈಡೇರಿಸುವುದಕ್ಕಾಗಿಯೇ ಸತತ ಪ್ರಯತ್ನ ಮಾಡಲಾಗುತ್ತಿದೆ. ಗೆದ್ದಮೇಲೆ ಮರೆತಿರುವ ಜನ ನಾವಲ್ಲ ಗೆದ್ದ ನಂತರವೂ ಹೋರಾಟಕ್ಕೆ ಶಕ್ತಿ ತುಂಬುವ ಎಲ್ಲಾ ಪ್ರಯತ್ನ ಮಾಡಿದ್ದೇವೆ ಅದು ಅವರಿಗೂ ತಿಳಿದಿದೆ ಈಡೇರುತ್ತದೆ ಎಂದರು.

ಸಚಿವ ಭೈರತಿ ಬಸವರಾಜು ಅಗರ್ಭ ಶ್ರೀಮಂತರಲ್ಲೊಬ್ಬರು ಅವರದ್ದೇ ನೂರಾರು ಎಕರೆ ಜಮೀನಿದೆ 15 ಲಕ್ಷ ಲಂಚಕ್ಕೆ ಕೈವೊಡ್ಡಬೇಕಾದ ದುಸ್ಥಿತಿ ಅವರಿಗಂತೂ ಬಂದಿಲ್ಲ. ತನಿಖಾ ಏಜೆನ್ಸಿ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ. ರೇಣುಕಾಚಾರ್ಯ ಅವರು ಅಣ್ಣನ ಮಗನನ್ನು ಕಳೆದುಕೊಂಡಿದ್ದಾರೆ. ತನಿಖೆ ನಿಸ್ಪಕ್ಷಪಾತವಾಗಿ ನಡೆಯುತ್ತಿದೆ. ಯಾವ ಹಿನ್ನೆಲೆಯಲ್ಲಿ ಸಾವಾಗಿದೆ ಎಂಬ ಬಗ್ಗೆ ಎಲ್ಲಾ ಮೂಲದ ವರದಿ ಪಡೆದು ನಂತರ ಯಾವುದಾದರೂ ಪಿತೂರಿಯೊ, ಹತ್ಯೆಯೊ ಅಥವಾ ಅಸ್ವಾಭಾವಿಕ ಮರಣವಾಗಿದ್ದರೆ ನ್ಯಾಯಾ ಸಿಕ್ಕೆ ಸಿಗುತ್ತದೆ. ಅವರ ನೋವಿನ ಜೊತೆ ನಾವಿದ್ದೇವೆ ಅಂತ ತಿಳಿಸಿದ್ದಾರೆ.

Hindu capability:

About Author

Leave a Reply

Your email address will not be published. Required fields are marked *

You may have missed