September 19, 2024

ಜೀವನದಲ್ಲಿ ಶಾಂತಿ, ನೆಮ್ಮದಿ ಸಾಧಿಸಲು ಯೋಗ ಅಗತ್ಯ

0
ಒಂದು ವಾರಗಳ ಕಾಲ ರಾಜಯೋಗ ಶಿಬಿರ ಸಪ್ತಾಹ ಕಾರ್ಯಕ್ರಮ

ಒಂದು ವಾರಗಳ ಕಾಲ ರಾಜಯೋಗ ಶಿಬಿರ ಸಪ್ತಾಹ ಕಾರ್ಯಕ್ರಮ

ಚಿಕ್ಕಮಗಳೂರು: ಇಂದಿನ ಯಾಂತ್ರಿಕ ಬದುಕಿನಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಒತ್ತಡದಲ್ಲಿ ಜೀವಿಸುತ್ತಿದ್ದಾರೆ. ಒತ್ತಡ ನಿವಾರಣೆ ಹಾಗೂ ಮಾನಸಿಕ ನೆಮ್ಮದಿಗಾಗಿ ರಾಜಯೋಗ ಶಿಬಿರ ಸಹಕಾರಿ ಎಂದು ಬುಕ್ಕಂಬುಧಿ ಗ್ರಾ.ಪಂ. ಅಧ್ಯಕ್ಷೆ ಮುಬೀನ ಬಾನು ಹೇಳಿದರು.

ಅಜ್ಜಂಪುರ ತಾಲ್ಲೂಕಿನ ಬುಕ್ಕಂಬುಧಿ ಗ್ರಾಮದ ಆತ್ಮದರ್ಶನ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ಆತ್ಮಕಲ್ಯಾಣ, ಲೋಕಕಲ್ಯಾಣಾರ್ಥವಾಗಿ ಒಂದು ವಾರಗಳ ಕಾಲ ರಾಜಯೋಗ ಶಿಬಿರ ಸಪ್ತಾಹ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಸದಾ ಸುಖ, ಶಾಂತಿ ಹಾಗೂ ನೆಮ್ಮದಿ ಸಾಧಿಸಲು ಯೋಗ ಅಗತ್ಯ. ಇದು ನಮ್ಮ ಕಮೇಂ ದ್ರಿಯಗಳನ್ನು ನಿಯಂತ್ರಿಸುತ್ತದೆ. ನಮ್ಮಲ್ಲಿ ಉದ್ಭವಿಸುವ ಭಯ, ಅಸುಯೆ, ದ್ವೇ?, ಅಹಂಕಾರ ಇತ್ಯಾದಿ ದುರ್ಗುಣ ಗಳನ್ನು ದೂರವಾಗಿಸಲು ರಾಜಯೋಗ ಶಿಬಿರ ಅಗತ್ಯವಾಗಿದೆ ಎಂದರು.

ಪ್ರಪಂಚ ಎಷ್ಟೇ ಆಧುನಿಕತೆಯಲ್ಲಿ ಮುಂದುವರಿದರೂ ಚಿಂತೆ, ಒತ್ತಡದಿಂದ ಪಾರಾಗಲು ಔ?ಧ ಲಭ್ಯ ವಾಗಿಲ್ಲ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಬರುವ ಪ್ರಾಚೀನ ರಾಜಯೋಗ ಶಿಬಿರವು ಇದಕ್ಕೆ ಮದ್ದು ನೀಡಲಿದ್ದು ಪ್ರತಿಯೊಬ್ಬರು ಮುಕ್ತವಾಗಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಮಾತನಾಡಿ ಪರಮಾತ್ಮನು ಶಕ್ತಿ ಹಾಗೂ ಗುಣಗಳ ಸಮುದ್ರ ನಾಗಿರುವನು. ಆತನೊಂದಿಗೆ ಯೋಗ ಹಚ್ಚಿದಾಗ ನಮ್ಮಲ್ಲಿ ಧನಾತ್ಮಕ ಅಲೆಗಳು ಹಾಗೂ ಯೋಗಿಯ ಲಕ್ಷಣಗಳು ಹುಟ್ಟಿಕೊಳ್ಳುತ್ತವೆ. ಇದು ಮನು?ನ ಇಡೀ ಜೀವನವೇ ಯೋಗಮಯವಾಗಲು ಸಾಧ್ಯವಾಗುತ್ತದೆ. ಖಿನ್ನತೆಯಿಂದ ಕೂಡಿದ ಮನು? ನಿತ್ಯ ರಾಜಯೋಗದಲ್ಲಿ ತಲ್ಲಿನನಾದರೇ ಸದಾ ಜ್ಯೋತಿಯಂತೆ ಪ್ರಜ್ವಲಿಸುವ ಮನೋಭಾವ ಇದರಿಂದ ಸಾಧ್ಯ ಎಂದು ತಿಳಿಸಿದರು.

ಗ್ರಾಮದಲ್ಲಿ ಈಗಾಗಲೇ ಜ.೨ ರಿಂದ ೮ ರವರೆಗೆ ಒಂದು ವಾರಗಳ ರಾಜಯೋಗ ಶಿಬಿರ ಆಯೋಜನೆ ಮಾಡಲಾಗಿದೆ. ಜೊತೆಗೆ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಜ್ಜಂಪುರ ಭಾಗದಲ್ಲಿ ಸ್ಥಳೀಯ ಶಾಖೆಯೊ ಂದನ್ನು ತೆರೆಯುವ ಉದ್ದೇಶ ಹೊಂದಿದ್ದು ಈ ತಿಂಗಳ ಅಂತ್ಯದೊಳಗೆ ಆರಂಭವಾಗಲಿದೆ ಎಂದು ತಿಳಿಸಿದರು.

ಶ್ರೀ ಪಂಪ ವಿರೂಪಾಕ್ಷೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ ಶರೀರಕ್ಕೆ ಯೋಗ ಮತ್ತು ಪ್ರಾಣಾಯಾಂ ಎ? ಮುಖ್ಯವೋ ಮನಸ್ಸು ಬಲಿ?ವಾಗಿರಲು ರಾಜಯೋಗ ಅಗತ್ಯ. ಹೀಗಾಗಿ ಬೆಳಗ್ಗಿನ ಜಾವದಲ್ಲಿ ಯೋಗ ಮಾಡುವುದರಿಂದ ನೂರು ರೋಗಗಳನ್ನು ಹೊಡೆದೂಡುವ ಶಕ್ತಿ ಲಭಿಸುತ್ತದೆ. ಸದಾ ಹಸನ್ಮುಖಿಯಾಗಿರುವುದರಿಂದ ಮುಖದಲ್ಲಿ ಚೈತನ್ಯ ಶಕ್ತಿ ಕಾಣಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿನೋದ, ಸದಸ್ಯ ಗುರುಮೂರ್ತಿ, ಮಾಜಿ ಅಧ್ಯಕ್ಷ ಬಿ.ಮಹೇಶ್ವರಪ್ಪ, ಪಿಡಿಓ ಎಂ.ಬಿ.ಸುರೇಶ್, ಬೀರೂರು ಪೊಲೀಸ್ ಅಧಿಕಾರಿ ನವೀನ್, ಗ್ರಾಮದ ಪ್ರಮುಖ ಚಂದ್ರ ಶೇಖರಪ್ಪ, ಅಜ್ಜಂಪುರ ಬ್ರಹ್ಮಕುಮಾರೀಸ್ ಸಂಚಾಲಕಿ ಬಿ.ಕೆ.ಜಯಂತಿ, ತರೀಕೆರೆ ಸಂಚಾಲಕಿ ಕಲೈವಾಣಿ ದೇವಾ ಲಯ ಸಮಿತಿ ಕಾರ್ಯದರ್ಶಿ ಬಿ.ಜಿ.ರವಿ ಮತ್ತಿತರರು ಉಪಸ್ಥಿತರಿದ್ದರು.

Rajyoga camp weekly program for one week

About Author

Leave a Reply

Your email address will not be published. Required fields are marked *

You may have missed