September 19, 2024

ನಾಡಕಚೇರಿ ಆಪರೇಟರ್‌ಗಳ ವೇತನ ಪಾವತಿಸುವಂತೆ ನೌಕರರ ಒತ್ತಾಯ

0
ನಾಡಕಚೇರಿ ಆಪರೇಟರ್‌ಗಳ ವೇತನ ಪಾವತಿಸುವಂತೆ ನೌಕರರ ಒತ್ತಾಯ

ನಾಡಕಚೇರಿ ಆಪರೇಟರ್‌ಗಳ ವೇತನ ಪಾವತಿಸುವಂತೆ ನೌಕರರ ಒತ್ತಾಯ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ನಾಡಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇ ಟರ್‌ಗಳಿಗೆ ಕಳೆದ ಐದಾರು ತಿಂಗಳಿನಿಂದ ವೇತನ ದೊರೆಯದೇ ಬಹಳಷ್ಟು ಸಮಸ್ಯೆಯಾಗಿದ್ದು ಕೂಡಲೇ ಬಗೆಹರಿ ಸಿಕೊಡಬೇಕು ಎಂದು ಜಿಲ್ಲಾ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರರ ಸಂಘವು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಆಪರೇಟರ್‌ಗಳು ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಕಚೇರಿಯ ಆಪರೇಟರ್‌ಗಳಿಗೆ ನಿಗಧಿತ ಸಮಯಕ್ಕೆ ಸಂಬಳ ದೊರೆಯದಿರುವ ಹಿನ್ನೆಲೆಯಲ್ಲಿ ನಿತ್ಯದ ಖರ್ಚು ವೆಚ್ಚ ಹಾಗೂ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಸೋಮಶೇಖರ್ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹೋಬಳಿಯ ನಾಡ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹತ್ತು ವರ್ಷಗಳ ಹೆಚ್ಚು ಕಾಲ ಡಾಟಾ ಆಪರೇಟರ್‌ಗಳಾಗಿ ಕೆಲಸ ಮಾಡಲಾಗುತ್ತಿದ್ದರೂ ಹಲವಾರು ತಿಂಗಳಿಂದ ಸರಿಯಾದ ವೇತನ ಪಾವತಿಯಾಗಿರುವುದಿಲ್ಲ. ಹಾಗೂ ಪಿಎಫ್ ಹಣ ಸಂದಾಯದ ಮಾಹಿತಿಯು ಲಭ್ಯವಾಗುತ್ತಿಲ್ಲ ಎಂದು ಹೇಳಿದರು.

ಈಗಾಗಲೇ ಜಿಲ್ಲಾಧಿಕಾರಿಗಳ ಹಂತದಲ್ಲಿ ಟೆಂಡರ್ ಮಂಜೂರಾಗಿದ್ದರೂ ಕೂಡಾ ನಾಡ ಕಚೇರಿಗಳಿಗೆ ನಿಗ ಧಿತ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಹೀಗಾಗಿ ಬಾಕಿ ಉಳಿದಿರುವ ವೇತನ ಪಾವತಿಸಬೇಕು. ಆಪರೇಟರ್ ಗಳಿಗೆ ಆರೋಗ್ಯ ಅಥವಾ ಸ್ವಂತ ಯಾವುದೇ ಸಮಸ್ಯೆಗಳಿದ್ದಲ್ಲಿ ಒಂದು ದಿನದಮಟ್ಟಿನ ರಜೆ ಸಿಗುತ್ತಿಲ್ಲ ಈ ಬಗ್ಗೆ ಚಿಂತಿಸಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷೆ ಡಿ.ಪ್ರತಿಭಾ ಮಾತನಾಡಿ ವೇತನ ಸಂಬಂಧ ಆಪರೇಟರ್‌ಗಳು ಸಂಬಂಧಪಟ್ಟ ಜಿಲ್ಲಾ ಸಂಯೋಜಕರನ್ನು ವಿಚಾರಿಸಿದರೆ ಬೆಂಗಳೂರು ಆಟಲ್ ಜೀ ಜನಸ್ಮೇಹಿ ಕೇಂದ್ರ ನಿರ್ದೇಶನಾಲಯಕ್ಕೆ ತಿಳಿಸಲಾ ಗಿದೆ ಎಂದು ಸಬೂಬು ಹೇಳಿಕೊಂಡು ಬರಲಾಗುತ್ತಿದೆ. ಇವರನ್ನೇ ನಂಬಿಕೊಂಡು ಕಾರ್ಯನಿರ್ವಹಿಸುತ್ತಿರುವ ಆಪರೇಟರ್‌ಗಳು ತಮ್ಮ ಕುಟುಂಬಗಳ ನಿರ್ವಹಣೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೈ.ಜಿ.ಕಿರಣ್, ಸಹ ಕಾರ್ಯದರ್ಶಿ ಮುರುಗೇಶ್, ಖಜಾಂಚಿ ಅರುಣ್‌ಕುಮಾರ್, ಸದಸ್ಯರುಗಳಾದ ಮುಕ್ತಿಯಾರ್ ಅಹ್ಮದ್, ಡಿ.ಎಸ್.ದಿವ್ಯ, ಹೆಚ್.ಸಿ.ಸತೀಶ್, ಎಸ್.ರಂಜಿತ, ಎಂ.ಪುಷ್ಪಾವತಿ, ತಿಪ್ಪೇಶ್‌ನಾಯ್ಕ, ನಿವಾಸ್, ಹೆಚ್.ಜಿ.ಸಚಿನ್‌ಕುಮಾರ್ ಮತ್ತಿತರರು ಹಾಜರಿದ್ದರು.

Employees demand payment of theater operator’s salary

About Author

Leave a Reply

Your email address will not be published. Required fields are marked *

You may have missed