September 19, 2024

ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ

0
೬೬/೧೧ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ಸಮಾರಂಭ

೬೬/೧೧ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ಸಮಾರಂಭ

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಿತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಶನಿವಾರ ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಾಳಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರನ ನಿಗಮ ನಿಯಮಿತ ವತಿಯಿಂದ ನಿರ್ಮಿಸುತ್ತಿರುವ ೬೬/೧೧ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಬಹಳ ಹಿಂದಿನಿಂದಲೂ ಲಕ್ಯಾ ಹೋಬಳಿ ಹಿಂದುಳಿದ ಹೋಬಳಿ ಎಂದು ಹೇಳುತ್ತಿದ್ದರು. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಿ ಈ ಹೋಬಳಿ ಒಂದು ಮುಂದುವರಿದ ಹೋಬಳಿಯಾಗಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ಈ ಉಪ ಕೇಂದ್ರಕ್ಕೆ ಇರುವ ಎಲ್ಲ ತಾಂತ್ರಿಕ ಅಡೆ ತಡೆಗಳನ್ನು ನಿವಾರಣೆ ಮಾಡಿ ಇಂದು ಶಂಕುಸ್ಥಾಪನೆ ಮಾಡಿದ್ದೇವೆ. ಶೀಘ್ರವಾಗಿ ಲೋಕಾರ್ಪಣೆ ಮಾಡಲಾಗುತ್ತದೆ. ಸದ್ಯದಲ್ಲೇ ಪಶು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಭದ್ರಾ ಉಪಕಣಿವೆ ಯೋಜನೆ, ರಣಘಟ್ಟ ಯೋಜನೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಕ್ಕೆ ಚುರುಕು ಮುಟ್ಟಿಸುತ್ತೇವೆ ಎಂದರು. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಯಾವುದೇ ರಾಜಕೀಯ ಮಾಡದೆ ಜನರಿಗೆ ತಲುಪಿಸುವ ಕೆಲಸವನ್ನು ಮಾಡುವವರೇ ನಿಜವಾದ ಜನಪ್ರತಿನಿಧಿ ಎಂದರು.

ಕ್ಷೇತ್ರದ ಜನಕೊಟ್ಟಿರುವ ಜವಾಬ್ದಾರಿ ಅರಿತು ಮುಂದಿನದಿನಗಳಲ್ಲಿ ಎಲ್ಲ ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿಮಾತನಾಡಿದ ಶಿವಮೊಗ್ಗದ ಅಧೀಕ್ಷಕ ಇಂಜಿನಿಯರ್ ಸುರೇಶ್ ಮಾತನಾಡಿ, ಲಕ್ಯಾ ಸುತ್ತಮುತ್ತಲಿನ ಗ್ರಾಮಗಳಿಗೆ ಲೋ ವೋಲ್ಟೇಜ್ ಸ್ಮಸ್ಯೆಯನ್ನು ಎದುರಿಸುವ ಪರಿಸ್ಥಿತಿನಿರ್ಮಾಣವಾಗಿದ್ದು. ಗಾಣದಳು ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಕಳಸಾಪುರದಲ್ಲಿ ಟಿವಿ ಸ್ಥಾಪಿಸಿ ಅಲ್ಲಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದರು.

ಉತ್ತಮ ಗುಣಮಟ್ಟದ ವೋಲ್ಟೇಜ್ ಸಿಗುವುದರ ಮೂಲಕನಿರಂತರ ವಿದ್ಯುತ್ ಪೂರೈಕೆ ಮಾಡಿಕೊಡಲಾಗುತ್ತದೆ. ಅದಕ್ಕೆ ಕೆಲಸ ಮಾಡುವ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಿ ಒಂದು ವರ್ಷದ ಒಳಗೆ ಕೆಲಸ ಮುಗಿಸಲು ಸಹಕರಿಸಬೇಕು ಎಂದು ವಿನಂತಿಸಿದರು.

ಹಿರೇಗೌಜ ಗ್ರಾ.ಪಂ. ಸದಸ್ಯ ಶಿವಕುಮಾರ್ ಮಾತನಾಡಿ, ಇದುವರೆಗೂ ಲಕ್ಯಾ ಹೋಬಳಿಯ ಜನರನ್ನು ಅಸ್ಪೃಶ್ಯರಂತೆ ಕಣಲಾಗುತ್ತಿತು. ಆದರೆ ಕಳೆದ ೭ ತಿಂಗಳಿಂದ ಆ ಒಂದು ಅಸ್ಪೃಶ್ಯತಾ ಭಾವನೆ ಮರೆಯಾಗಿ ಬೆಳಕು ಮೂಡಿದ್ದರ ಪರಿಣಾಮವಾಗಿ ಇಂದು ಗಾಣದಾಳು ಗ್ರಾನದಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು. ಲಕ್ಯಾ ಹೋಬಳಿಯ ಬಹಳ ವರ್ಷಗಳ ಕನಸಾಗಿತ್ತು ಅದನ್ನು ಇಂದು ನನಸು ಮಾಡಿದ್ದಾರೆ. ಲಕ್ಯಾ ಹೋಬಳಿಯ ಭಾಗದಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿದಿ ಉದ್ಯೋಗ ಸೃಷ್ಟಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು ೧೧ ಎಕರೆ ಜಾಗ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಲಕ್ಯಾ ಹೋಬಳಿಯ ಜನರ ದಶಕದ ಕನಸು ಈಡೇರುವ ಶುಭ ದಿನ ಇಂದು ನೆರವೇರಿದೆ. ಇದಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಗಾಣದಾಳು ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು. ಗ್ರಾ.ಪಂ. ನವರು ಪಶು ಆಸ್ಪತ್ರೆಗೂ ಇಲ್ಲಿಯೇ ಸ್ಥಳಾವಕಾಶ ಕಲ್ಪಿಸಿಕೊಡಬೇಕಿದೆ ಎಂದು ಮನವಿ ಮಾಡಿದರು. ಶಾಶ್ವತ ಬಹುಗ್ರಾಮ ಕುಡಿಯುವ ನೀರು ಯೋಜನೆ ಆಗಬೇಕಿದ್ದು. ಅದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಲಕ್ಯಾ ಗ್ರಾ.ಪಂ ಅಧ್ಯಕ್ಷ ಮೊಹ್ಮದ್ ಹನೀಫ್, ಉಪಾಧ್ಯಕ್ಷ ದಿನೇಶ್, ಲಕ್ಯಾ ಗ್ರಾ.ಪಂ.ಸದಸ್ಯರುಗಳಾದ ಗುರುಮೂರ್ತಿ, ಈರಮ್ಮ, ಶೊಭಾ, ಹಾಲಮ್ಮ, ರೇಣುಕಮ್ಮ, ಮೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಸ್ಥರು. ಕೆಪಿಟಿಸಿಎಲ್ ನ ಶಿವಮೊಗ್ಗದ ಕಾ.ನಿ.ಇಂ. ಮುರುಳಿ ಮೋಹನ್, ಕೆಪಿಟಿಸಿಎಲ್ ನ ಡಿ.ಹೆಚ್ ಉಮೇಶ್, ಮೆಸ್ಕಾಂನ ಜಿ. ಮಾರುತಿ, ವಿ.ಎಲ್ ಅನಿಲ್ ಕುಮಾರ್, ಗಣೇಶ್, ಚಿದಾನಂದ್, ವಸಂತ್ ಕುಮಾರ್, ಜಿ. ರಾಜಶೇಖರ್, ಉಪಸ್ಥಿತರಿದ್ದರು.

66/11 Power Substation Foundation Laying Ceremony

 

About Author

Leave a Reply

Your email address will not be published. Required fields are marked *

You may have missed