September 19, 2024

ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದವರು ನಾರಾಯಣಗುರು

0
ಪ್ರೆಸ್‌ಕ್ಲಬ್‌ನಲ್ಲಿ ನಡೆದ ತಿಂಗಳ ಅಥಿತಿ ಕಾರ್ಯಕ್ರಮ

ಪ್ರೆಸ್‌ಕ್ಲಬ್‌ನಲ್ಲಿ ನಡೆದ ತಿಂಗಳ ಅಥಿತಿ ಕಾರ್ಯಕ್ರಮ

ಚಿಕ್ಕಮಗಳೂರು: ಸಾರಗೋಡು ನಿರಾಶ್ರಿತರಿಗೆ ಭೂಮಿ ಗುರುತಿಸಿದ್ದು, ಮುಂದಿನ ಮುಂದಿನ ದಿನಗಳಲ್ಲಿ ಪುರ್ನವಸತಿ ಕಲ್ಪಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರ ದಲ್ಲಿ ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸಿದ ಸಂತೃಪ್ತಿ ತಮ್ಮಗಿದೆ ಎಂದು ವರ್ಗಾವಣೆಗೊಂಡ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಹೇಳಿದರು.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ತಿಂಗಳ ಅಥಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಹಂಚಿಕೊಂಡರು. ಅರಣ್ಯಭೂಮಿ ಒತ್ತುವರಿಯಿಂದ ಮೂಡಿಗೆರೆ ತಾಲೂಕು ಸಾರಗೋಡು ಗ್ರಾಮದ ೧೮ ಕುಟುಂಬಗಳು ನಿರಾಶ್ರಿತರಾಗಿದ್ದರು. ಸರ್ಕಾರಿ ಭೂಮಿ ಗುರುತಿಸಿ ಅವರಿಗೆ ಪುರ್ನವಸತಿ ಕಲ್ಪಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿತ್ತು. ಇದಕ್ಕಾಗಿ ವಿಶೇಷ ತಂಡ ರಚಿಸಿ ಜಮೀನು ಗುರುತಿಸಲಾಗಿದೆ. ಅವರಿಗೆ ಜಮೀನು ಹಸ್ತಾಂತರಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದರು.

ಕಳೆದ ಒಂದೂವರೆ ವರ್ಷಗಳ ಕಾಲ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸಾರಗೋಡು ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸಿದ ಆತ್ಮತೃಪ್ತಿ ಇದೆ ಎಂದ ಅವರು, ಅತೀವೃಷ್ಟಿಯಿಂದ ಮನೆ ಜಮೀನು ಕಳೆದುಕೊಂಡ ಕಳಸ ತಾಲೂಕಿನ ಮಲೆಮನೆ, ಮಧುಗುಣಿ, ಮೇಗೂರು ಗ್ರಾಮದ ೧೦ ರಿಂದ ೧೨ ಕುಟುಂಬಗಳಿಗೆ ಜಮೀನು ಗುರುತಿಸಲಾಗಿದೆ. ಈ ಎರಡು ಕಾರ್ಯಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿಯುವ ಕೆಲಸಗಳಾಗಿವೆ ಎಂದು ಅಭಿಪ್ರಾಯಿಸಿದರು.

ಚಿಕ್ಕಮಗಳೂರು ಉಪವಿಭಾಗದಲ್ಲಿ ರಸ್ತೆಯ ಸಮಸ್ಯೆಗಳು ಇವೆ. ರಸ್ತೆಗೆ ಅಡ್ಡಿಪಡಿಸುವುದು ಸರಿಯಲ್ಲ, ನಕಾಶೆ ಕಂಡ ರಸ್ತೆ, ಬಂಡಿ ರಸ್ತೆ, ಕಾಲುರಸ್ತೆಗಳಿಗೆ ಬೇಲಿ ಹಾಕುವಂತಿಲ್ಲ. ಇದು ಕಾನೂನು ಬಾಹಿರವಾಗುತ್ತದೆ. ರಸ್ತೆಗೆ ಅತಿಕ್ರಮವಾಗಿ ಬೇಲಿ ಹಾಕುವಂತಿಲ್ಲ. ರಸ್ತೆಗೆ ತಡೆಯೊಡ್ಡಿದ ನಾಲ್ಕು ಪ್ರಕರಣಗಳಲ್ಲಿ ಸರ್ಕಾರದಿಂದ ಮಂಜೂ ರಾಗಿದ್ದ ಭೂಮಿಯನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅಕ್ರಮ ಭೂಮಂಜೂರಾತಿ ಸಂಬಂಧ ವಿಶೇಷ ತಂಡದಿಂದ ತನಿಖೆ ನಡೆಸಿದ್ದು, ೨೭೦ ಪ್ರಕರಣಗ ಳಲ್ಲಿ ಭೂಮಂಜೂರಾತಿಯನ್ನು ರದ್ದುಪಡಿಸಲಾಗಿದೆ. ಒಂದೆರೆಡು ಪ್ರಕರಣಗಳು ಮಾತ್ರ ಕ್ರಮಬದ್ಧವಾಗಿವೆ ಎಂದ ಅವರು, ಅಂದಾಜು ಒಂದು ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಮತ್ತು ಅರಣ್ಯಭೂಮಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದೆ. ನಾನು ಮೊದಲು ಉಪವಿಭಾಗಾಧಿಕಾರಿಯಾಗಿ ಇಲ್ಲಿಗೆ ಬಂದಾಗ ಇದೊಂದು ಚಾಲೆಜಿಂಗ್ ಆಗಿತ್ತು. ಜಂಟಿ ಸರ್ವೇ ಕಾರ್ಯ ಕೆಲವು ಕಡೆಗಳಲ್ಲಿ ಆಗಿದೆ. ಕೆಲವು ಕಡೆಗಳಲ್ಲಿ ಆಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಆಗ ಬೇಕಿದೆ. ಸರ್ಕಾರ ಜಂಟಿಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ಕಂದಾಯ ಮತ್ತು ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.

ಉಪವಿಭಾಗದ ಮಲೆನಾಡು ಭಾಗದಲ್ಲಿ ಸರ್ಕಾರಿ ಜಮೀನು, ಗೋಮಾಳ ಜಾಗವಿದೆ. ಆದರೆ, ಜಂಟಿಸರ್ವೇ ಕಾರ್ಯ ನಡೆಸಿ ಗಡಿಗುರುತು ಮಾಡಿದಲ್ಲಿ ಮೂಲಭೂತ ಸೌಲಭ್ಯಗಳನ್ನು ಜನತೆಗೆ ಕಲ್ಪಿಸಲು ಅನುಕೂಲವಾಗ ಲಿದೆ ಎಂದು ಅಭಿಪ್ರಾಯಿಸಿದ ಅವರು, ಈ ಸಂಬಂಧ ಸಾಕಷ್ಟು ಪ್ರಯತ್ನವನ್ನು ಮಾಡಲಾಗಿದೆ. ಜಂಟಿ ಸರ್ವೇ ಕಾರ್ಯ ಪೂರ್ಣಗೊಂಡ ಬಳಿಕ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

ಫಾರಂ ನಂ.೫೦, ೫೨, ೫೩ ಸಂಬಂಧ ಜನತೆಯಲ್ಲಿ ಗೊಂದಲಗಳಿವೆ. ಮೊದಲು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಬೇಕು. ೫೦ ಮತ್ತು ೫೩ ೧-೪-೧೯೮೭ ಪೂರ್ವ ಅರ್ಜಿ ಸಲ್ಲಿಸುವರಿಗೆ ೧೮ವರ್ಷ ಪೂರ್ಣಗೊಂಡಿರಬೇಕು. ಸಾಗುವಳಿ ಮಾಡುತ್ತಿರಬೇಕು. ಖಾಯಂ ನಿವಾಸಿಯಾಗಿರಬೇಕು. ಸ್ವತಃ ಸಾಗುವಳಿ ಮಾಡುತ್ತಿರಬೇಕು. ಕುಟುಂಬದಲ್ಲಿ ನಾಲ್ಕು ಎಕರೆ ೩೮ ಗುಂಟೆ ಜಮೀನು ಮೀರಿರಬಾರದು ಹಾಗೂ ಅರ್ಜಿ ಭೂಮಿಯೂ ಅರಣ್ಯ ವ್ಯಾಪ್ತಿಗೆ ಒಳಪಟ್ಟಿರಬಾರದು ಎಂದರು.

ಡಿಸೆಂಬರ್ ೧, ೨೦೨೩ರಲ್ಲಿ ಸರ್ಕಾರ ಸುತ್ತೋಲೆ ತಂದಿದ್ದು, ಸಮಿತಿ ಬಯೋಮೆಟ್ರಿಕ್ ಹಾಜರಾತಿ, ಸಭೆಯ ಪೋಟೋ, ಸಾಗುವಳಿ ಜಾಗದ ಪೋಟೋಗ್ರಾಫ್‌ಗಳನ್ನು ಆಪ್‌ನಲ್ಲಿ ಅಪಲೋಡ್ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರಾತಿ ಮಾಡಲಾಗುತ್ತಿದೆ ಎಂದರು.

ಸಾರ್ವಜನಿಕರು ತಮ್ಮ ಯಾವುದೇ ಸರ್ಕಾರಿ ಕೆಲಸಗಳಿಗೆ ನೇರವಾಗಿ ಸರ್ಕಾರಿ ಕಚೇರಿಗೆ ಬೇಟಿನೀಡಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮುಂದಾಗಬೇಕು. ಮಧ್ಯವರ್ತಿಗಳು ಸೇರಿದಂತೆ ಇತರೆ ಅಡ್ಡದಾರಿ ಗಳನ್ನು ಹಿಡಿಯುವುದರಿಂದ ಹಣ ಮತ್ತು ಸಮಸ ವ್ಯರ್ಥವಾಗುತ್ತದೆ. ಯಾರು ಮೋಸ ಹೋಗದೆ ನೇರವಾಗಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಭೇಟಿಮಾಡಿ ತಮ್ಮ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ್ ಇದ್ದರು. ಎನ್.ಕೆ.ಗೋಪಿ ಸ್ವಾಗತಿಸಿದರು.

Guest of the Month program held at the Press Club

About Author

Leave a Reply

Your email address will not be published. Required fields are marked *

You may have missed