September 19, 2024

ಭಾರತ ಧಾರ್ಮಿಕವಾಗಿ ಎತ್ತರಕ್ಕೆ ಬೆಳೆಯಬೇಕೆಂದು ಸ್ವಾಮಿ ವಿವೇಕಾನಂದರ ಅಭಿಲಾಷೆಯಾಗಿತ್ತು

0
National Youth Week

National Youth Week

ಚಿಕ್ಕಮಗಳೂರು:  ಭಾರತದೇಶ ಧಾರ್ಮಿಕವಾಗಿ ನಾನಾರೂಪದಲ್ಲಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಬೇಕೆಂದು ಸ್ವಾಮಿ ವಿವೇಕಾನಂದರು ಅಭಿಲಾಷೆ ಮತ್ತು ಆಸೆ ಹೊಂದಿದ್ದರು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯಿಸಿದರು.

ಅವರು ಇಂದು ಭಾರತ್ ಸೇವಾದಳ ಕಛೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಭಾರತ ಸೇವಾದಳ, ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ  ರಾಷ್ಟ್ರೀಯ ಯುವ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಇದಕ್ಕೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ರೀತಿಯ ಹಲವು ಕಾರ್ಯಕ್ರಮಗಳನ್ನು ಯುವಜನರಿಗಾಗಿ ಹಂಬಿಕೊಂಡಿದ್ದಾರೆ ಜನವರಿ ೧೨ರಂದು ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದರು.

ಯುವಕರು ಎಚ್ಚರವಾಗಬೇಕು ದೇಶಪ್ರೇಮ ಬೆಳಸಿಕೊಂಡು ದೇಶಕಟ್ಟಲು ಈ ರೀತಿಯ ಘೋಷಣಾ ಸ್ಪರ್ಧೆ ಆಯೋಜಿಸಲಾಗಿದೆ ದೇಶದ ಸಮಗ್ರತೆ, ಏಕತೆ, ಐಕ್ಯತೆ,ಕುರಿತು ಸಾರ್ವಭೌಮತ್ವದ ಬಗ್ಗೆ ದೇಶ ಅಭಿವೃದ್ಧಿ ಹೊಂದಬೇಕಾದರೆ ಯುವಕರು ಕಂಡ ಕನಸು ನನಸಾಗಿಸಲು ಪರಿಕಲ್ಪನೆ ಮೇಲೆ ಒಗ್ಗಟ್ಟು, ಸಾಮಗ್ರತೆ ಕುರಿತು ನಿಮ್ಮದೆ ಆದ ರೀತಿಯಲ್ಲಿ ಕಡಿಮೆ ಅವಧಿಯಲ್ಲಿ ಭಾಷಣವನ್ನು ಬಹಾಳ ಪರಿಣಾಮಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಹೇಳಿದರು.

ಜನವರಿ ೧೯ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ಒಳ್ಳೆಯ ಬಹುಮಾನ ದೊರೆಯಲಿದೆ ನಮ್ಮ ಜಿಲ್ಲೆಯಿಂದ ಹೋಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ್ ಚವಾರೆ ಮಾತನಾಡಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ, ರಾಜ್ಯ ಮಟ್ಟದಲ್ಲಿ ವಿಜೇತಾದವರಿಗೆ ಮೊದಲನೇ ಬಹುಮಾನ ೧ ಲಕ್ಷ, ದ್ವಿತೀಯ ಬಹುಮಾನ ೫೦ ಸಾವಿರ, ತೃತೀಯ ಬಹುಮಾನ ೨೫ ಸಾವಿರ ರೂ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸೇವಾದಳ ಸಂಘಟನ ಅಧಿಕಾರಿ ಚಂದ್ರಕಾಂತ್, ಕರ್ನಾಟಕ ರಾಜ್ಯದ ಯುವ ಸಂಘಗಳ ಒಕ್ಕೂಟದ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾದ ಇಮ್ರಾನ್ ಅಹಮದ್ ಬೇಗ್, ಎನ್.ರಾಮಪ್ಪ, ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

National Youth Week

About Author

Leave a Reply

Your email address will not be published. Required fields are marked *

You may have missed