September 19, 2024

ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್ ಆಯ್ಕೆ

0
ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್ ಆಯ್ಕೆ

ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್ ಆಯ್ಕೆ

ಚಿಕ್ಕಮಗಳೂರು: ತಾಲ್ಲೂಕಿನ ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ಮೂರನೇ ಬಾರಿಗೆ ಸಿ.ಆನಂದ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಸ್.ಗುರುಮೂರ್ತಿ ಎರಡನೇ ಬಾರಿಗೆ ಗುರು ವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಹಾಗೂ ಗುರುಮೂರ್ತಿ ಹೊರತುಪಡಿಸಿ ಬೇರ್‍ಯಾವ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸಂಧ್ಯಾರಾಣಿ ಘೋಷಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್ ಸಂಘದಲ್ಲಿ ಪ್ರತಿ ಸದಸ್ಯರನ್ನು ವಿಶ್ವಾಸ ತೆಗೆದುಕೊಳ್ಳುವ ಜೊತೆಗೆ ರಾಜಕೀಯವನ್ನು ಬೆರೆಸದೇ ಮುನ್ನೆಡೆದರೆ ಸಂಘವು ಅಭಿವೃದ್ದಿ ಯತ್ತ ಬೆಳವಣಿಗೆ ಹೊಂದಿ ಸುತ್ತಮುತ್ತಲಿನ ರೈತಾಪಿ ವರ್ಗಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದರೊಂದಿಗೆ ಸಂಘದ ಸಿಬ್ಬಂದಿಗಳು ಅತ್ಯಂತ ಪ್ರಾಮಾಣಿಕತೆಯಿಂದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಖುಷಿಯ ಸಂಗತಿ. ಹೀಗಾಗಿ ಸಂಘದ ಪದಾಧಿಕಾರಿಗಳು ಎಲ್ಲರ ಸಹಕಾರ ಪಡೆದುಕೊಳ್ಳಬೇಕು. ನಿಗಧಿತ ಸಮಯಕ್ಕೆ ಸಾಲ ವಿತರಿಸುವ ಜೊತೆಗೆ ಮರುಪಾವತಿಗೆ ಮುಂದಾದರೆ ಸಂಘವು ಆರ್ಥಿಕವಾಗಿ ಸದೃಢ ವಾಗಲು ಸಾದ್ಯ ಎಂದರು.

ಸಂಘದ ನೂತನ ಅಧ್ಯಕ್ಷ ಸಿ.ಆನಂದ್ ಮಾತನಾಡಿ ಸಂಘವು ಸ್ಥಾಪನೆಗೊಂಡು ದಶಮಾನೋತ್ಸವದ ವಸ್ತಿಲ ಲ್ಲಿದೆ. ಪ್ರಾರಂಭದ ದಿನಗಳಲ್ಲಿ ಹಲವಾರು ಗ್ರಾಮಗಳಿಗೆ ಪದಾಧಿಕಾರಿಗಳ ತಂಡವು ಭೇಟಿ ನೀಡಿ ಸದಸ್ಯತ್ವ ಪಡೆದು ಕೊಳ್ಳಲು ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಸುಮಾರು ೧೬೩೦ ಸದಸ್ಯತ್ವವನ್ನು ಪ್ರಸ್ತುತ ಹೊಂದಿದೆ ಎಂದು ತಿಳಿ ಸಿದರು.

ನೂತನ ಕಟ್ಟಡ ನಿರ್ಮಿಸುವ ವೇಳೆಯಲ್ಲಿ ಮೂಗ್ತಿಹಳ್ಳಿ ವ್ಯಾಪ್ತಿಯ ಹಲವಾರು ದಾನಿಗಳ ಸಹಕಾರವಿದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಶ್ರಮ ಬಹಳಷ್ಟಿದ್ದ ಕಾರಣ ಸ್ವಂತ ಕಟ್ಟಡವನ್ನು ಸಂಘವು ಹೊಂದಲು ಸಾಧ್ಯವಾಗಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಮೂರನೇ ಅಂತಸ್ತಿನಲ್ಲಿ ರೈತರಿಗೆ ಸಣ್ಣಪುಟ್ಟ ಸಮಾರಂಭ ನಡೆಸಲು ರಿಯಾಯಿತಿ ದರದಲ್ಲಿ ಬಾಡಿಗೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ.ರಾಜೇಶ್ ಮಾತನಾಡಿ ಬೆಳೆ, ವಾಹನ ಸೇರಿದಂತೆ ಒಟ್ಟಾರೆ ೮.೫ ಕೋಟಿಗಳಷ್ಟು ಸಾಲ ವಿತರಿಸಿ ಶೇ.೯೮ರಷ್ಟು ವಸೂಲಾತಿ ಮಾಡಿದೆ. ಜೊತೆಗೆ ಪ್ರಾರಂಭದಿಂದಲೂ ಎಲ್ಲಾ ವ್ಯವಹಾರವು ಗಣಿಕೀಕೃತವಾಗಿರುವುದಲ್ಲದೇ ಅಪೆಕ್ಸ್ ಬ್ಯಾಂಕ್‌ನಿಂದ ಮಾದರಿ ಸಂಘವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತ ಬಸವರಾಜಪ್ಪ, ಗ್ರಾ.ಪಂ. ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಅಂಬಿಕಾ, ಸಹಕಾರ ಸಂಘದ ಸಹಾಯಕ ನಿಬಂಧಕ ರಾಮಣ್ಣಗೌಡ ಪಾಟೀಲ್, ಸಂಘದ ಉಪಾಧ್ಯಕ್ಷ ಎಂ.ಎಸ್.ಗುರುಮೂರ್ತಿ, ನಿರ್ದೇಶರುಗಳಾದ ಬಿ.ಕುಮಾರೇಗೌಡ, ಎಸ್.ಟಿ.ಚಂದ್ರೇಗೌಡ, ಎಂ.ಎಂ.ಮನುಕುಮಾ ರ್, ಬಿ.ಎಲ್.ಪ್ರಮ್ಭಿಣಾ, ಹೆಚ್.ಕೆ.ಸೀತಾ, ಎಸ್.ಎಸ್.ದೇವರಾಜ್, ಪದ್ಮ, ದಿನೇಶ್‌ರಾಜ್ ಅರಸ್, ಎಂ.ಟಿ.ಪ್ರಭಾಕರ್, ಟಿ.ಹೆಚ್.ಹರೀಶ್‌ರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ.ರಾಜೇಶ್ ಮತ್ತಿತರರಿದ್ದರು.

Anand was selected as the President of Moogtihalli Primary Agricultural Farmers’ Co-operative Society

 

About Author

Leave a Reply

Your email address will not be published. Required fields are marked *

You may have missed