September 19, 2024

ಸಿಪಿಐ ಕಚೇರಿಯಲ್ಲಿ 161ನೇ ವಿವೇಕಾನಂದ ಜನ್ಮದಿನಾಚರಣೆ

0
ಸಿಪಿಐ ಕಚೇರಿಯಲ್ಲಿ 161ನೇ ವಿವೇಕಾನಂದ ಜನ್ಮದಿನಾಚರಣೆ

ಸಿಪಿಐ ಕಚೇರಿಯಲ್ಲಿ 161ನೇ ವಿವೇಕಾನಂದ ಜನ್ಮದಿನಾಚರಣೆ

ಚಿಕ್ಕಮಗಳೂರು: ನಗರದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ೧೬೧ನೇ ಸ್ವಾಮಿ ವಿವೇಕಾನಂದರ ಜನ್ಮದಿನಾ ಚರಣೆಯನ್ನು ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಿದರು.

ಬಳಿಕ ಮಾತನಾಡಿದ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ವಿವೇಕಾನಂದರು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಎಲ್ಲರೊಂದಿಗೆ ಸ್ನೇಹ, ಪ್ರೀತಿ ಬೆಸೆಯುವುದೇ ನಿಜವಾದ ಧರ್ಮ ಎಂದು ಸಾರಿದ ಮಹಾನ್ ಚೇತನ ಎಂದ ಅವರು ದ್ವೇಷದಿಂದ ಎಂದಿಗೂ ಗೆಲುವು ಸಾಧಿಸಲಾ ಗದು ಎಂಬ ಸಂದೇಶ ಪಸರಿಸಿದವರು ಎಂದು ತಿಳಿಸಿದರು.

ಮಾನವೀಯ ಮೌಲ್ಯಗಳನ್ನು ಗೌರವಿಸುವ ಮೂಲಕ ಸಮಾಜವನ್ನು ನೈತಿಕವಾಗಿ ಎಚ್ಚರಿಸಿದ ಮಹಾನ್ ಸಂತರು ಸ್ವಾಮಿ ವಿವೇಕಾನಂದರು. ಹಸಿದವನಿಗೆ ಆಧ್ಯಾತ್ಮಕ ಬೋಧಿಸಿದರೆ ಹಸಿವಿಗೆ ಅಪಮಾನಿ ಸಿದಂತೆ ಎಂದು ಆಧ್ಯಾತ್ಮಿಕ ಸೂಕ್ಷ್ಯತೆಯನ್ನು ಪ್ರತಿಪಾದಿಸಿದ ವಿವೇಕಾನಂದರು ಹಸಿದ ಹೊಟ್ಟಿಗೆ ಅನ್ನ ನೀಡು ವುದೇ ಧರ್ಮದ ಧ್ಯೇಯನಾಗಬೇಕೆಂದು ಸಾರಿದವರು ಎಂದರು.

ನೆರೆಹೊರೆಯವರನ್ನು ಪ್ರೀತಿಸಿ, ಗೌರವಿಸುವುದು ನಿಜವಾದ ಧರ್ಮಪಾಲನೆ ಎಂದು ಅರ್ಥೈಸಿಕೊಂ ಡಿದ್ದ ವಿವೇ ಕಾನಂದರು ಎಳಿ ಎದ್ದೇಳಿ ಜಾಗೃತರಾಗಿ ಎಂಬ ಘೋಷಣೆಯ ಮೂಲಕ ಸಹೋದರತೆ, ಸಹಿಷ್ಣುತೆಯೇ, ಧರ್ಮದ ಮೂಲ ತಿರುಗಳಾಗಬೇಕೆಂದು ಆಶಿಸಿದವರು ಎಂದು ಹೇಳಿದರು.

ಅಂಗನವಾಡಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಮಾತನಾಡಿ ಸ್ವಾಮಿ ವಿವೇಕಾ ನಂದರು ೧೮೬೩ ರಲ್ಲಿ ಜನಿಸಿದ್ದು ಭಾರತೀಯ ತತ್ತ್ವಶಾಸ್ತ್ರಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿ ಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಸರ್ವಧರ್ಮ ಜಾಗೃತಿಯನ್ನು ಹೆಚ್ಚಿಸಿದ ಕೀರ್ತಿಗೆ ಪಾತ್ರರಾಗಿ ದ್ದರು ಎಂದರು.

೧೯ ನೇ ಶತಮಾನದ ಸಂತ ರಾಮಕೃ?ರ ಮುಖ್ಯ ಶಿ?ರಾಗಿದ್ದರಲ್ಲದೇ ರಾಮಕೃ? ಮಠ ಮತ್ತು ರಾಮಕೃ? ಮಿ?ನ್ ಸಂಸ್ಥಾಪಕರಾಗಿದ್ದರು. ಯುವಕರಿಗೆ ಜೀವನ ವಿಧಾನ ಮತ್ತು ಆದರ್ಶಗಳನ್ನು ಭವಿ?ದಲ್ಲಿ ಭಾರತವನ್ನು ಉತ್ತಮ ದೇಶವನ್ನಾಗಿ ಮಾಡುವ ಸಂದೇಶವನ್ನು ನಿರಾರ್ಗಳವಾಗಿ ಎಲ್ಲೆಡೆ ಹಬ್ಬಿಸಿದವರು ಎಂದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ಮಾತನಾಡಿ ವಿವೇಕಾನಂದರ ತತ್ವಗಳು, ತತ್ವಗಳು ಮತ್ತು ವಿಚಾರ ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಾಥಮಿಕ ಉದ್ದೇಶದಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿ ಸಲಾಗುತ್ತಿದ್ದು ವಿದ್ಯಾರ್ಥಿಗಳು ಭಾರತದ ಉತ್ತಮ ನಾಗರಿಕರಾಗಲು ಪ್ರೇರೇಪಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಶೈಲಾ ಬಸವರಾಜ್, ಮೂಡಿಗೆರೆ ಅಧ್ಯಕ್ಷ ಶೈಲಾ, ಕಡೂರು ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರುಗಳಾದ ಕಲಾ, ದೀಪಿ ಕಾ, ವಸಂತ, ರಾಜೇಶ್ವರಿ, ಸುಕನ್ಯ, ಯಶೋಧ, ಪೂರ್ಣಿಮಾ, ಅನಿತಾ, ವಿಜಯಕುಮಾರಿ ಮತ್ತಿತರರು ಹಾಜ ರಿದ್ದರು.

161st Vivekananda Birth Anniversary at CPI Office

About Author

Leave a Reply

Your email address will not be published. Required fields are marked *

You may have missed