September 19, 2024

Vote wisely: ಸಮಸಮಾಜ ನಿರ್ಮಾಣವಾಗ ಬೇಕಾದರೆ ಕೆಳ ವರ್ಗದಜನ ವಿವೇಚನೆಯಿಂದ ಮತ ಚಲಾಯಿಸಬೇಕು

0

ಚಿಕ್ಕಮಗಳೂರು:  ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಆಶಯದಂತೆ ಸಮಸಮಾಜ ನಿರ್ಮಾಣವಾಗ ಬೇಕಾದರೆ ಕೆಳ ವರ್ಗದಜನ ವಿವೇಚನೆಯಿಂದಮತ ಚಲಾಯಿಸಬೇಕು ಎಂದುಬಿಎಸ್‌ಪಿ ಜಿಲ್ಲಾಧ್ಯಕ್ಷಕೆ.ಟಿ.ರಾಧಾಕೃಷ್ಣ ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿ ನಗರದಬಿಎಸ್‌ಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕನಕ ಜಯಂತಿಕಾರ್ಯಕ್ರಮದಲ್ಲಿಪಾಲ್ಗೊಂಡುಅವರು ಮಾತನಾಡಿದರು.
ಕೆಳ ವರ್ಗದಜನದೌರ್ಜನ್ಯ ಮತ್ತುಶೋಷಣೆಯಿಂದಮುಕ್ತರಾಗಬೇಕು. ಸಮಾಜದಲ್ಲಿನಅಸಮಾನತೆಮತ್ತುಅಸ್ಪಶ್ಯತೆನಿವಾರಣೆಯಾಗಿಸಮತಾಸಮಾಜದನಿರ್ಮಾಣವಾಗಬೇಕು ಎಂಬುದು ಸಂವಿಧಾನ ಶಿಲ್ಪಿಯ ಆಶಯವಾಗಿತ್ತುಭಕ್ತಶ್ರೇಷ್ಠ ಕನಕದಾಸರೂಸಹ ಅದನ್ನೇ ಪ್ರತಿಪಾದಿಸಿದ್ದರು ಎಂದರು.

ಆದರೆಸ್ವಾತಂತ್ರ್ಯ ಬಂದು ೭ ದಶಕಗಳಾದರೂ ಇನ್ನೂದೇಶದಲ್ಲಿಅಸಮಾನತೆ, ಅಸ್ಪೃಶ್ಯತೆ, ದೌರ್ಜನ್ಯ ಮತ್ತು ಶೋಷಣೆಗಳು ಮುಂದುವರೆಯುತ್ತಲೆ ಇವೇ.ಇದಕ್ಕೆ ಮೂಲ ಕಾರಣ ಕೆಳ ವರ್ಗದಜನಮೌಢ್ಯಮತ್ತುಮೂಢನಂಬಿಕೆಗಳಿಂದ ಹೊರಬರದಿರುವುದು ಹಾಗೂ ವಿವೇಕ ಮತ್ತು ವಿವೇಚನೆಯಿಂದ ಮತದಾನ ಮಾಡದಿರುವುದುಎಂದು ವಿಷಾಧಿಸಿದರು.

ಕೆಳ ವರ್ಗದಜನಈಗಲಾದರೂಎಚ್ಚೆತ್ತು ಮೌಢ್ಯ ಮತ್ತು ಮೂಢನಂಬಿಕೆಯಿಂದಹೊರಬರಬೇಕು.ವಿವೇಕ ಮತ್ತು ವಿವೇಚನೆಯಿಂದ ಮತ ಚಲಾಯಿಸಬೇಕು.ಮೇಲ್ವರ್ಗದಜಾತಿಗಳಂತೆ ಉಪ ಪಂಗಡಗಳ ಭಿನ್ನಾಭಿಪ್ರಾಯವನ್ನು ಬದಿಗೊತ್ತಿಒಂದಾಗಬೇಕುಎಂದುಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದಬಿಎಸ್‌ಪಿ ತಾಲ್ಲೂಕು ಸಂಯೋಜಕಿಕೆ.ಎಸ್.ಮಂಜುಳಾ ಕನಕದಾಸರುತಮ್ಮ ಕೃತಿಗಳಿಂದ ಸಮಾಜವನ್ನುಪರಿವರ್ತನೆ ಮಾಡಿದಮಹಾತ್ಮರುಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿ ಮಾತನಾಡಿದಸಹೋದರತ್ವ ಸಮಿತಿಯಜಿಲ್ಲಾಧ್ಯಕ್ಷೆ ಕೆ.ಬಿ.ಸುಧಾಕನಕದಾಸರಂತಹಮಹಾತ್ಮರಚಿಂತನೆಮತ್ತು ಸಂದೇಶಗಳನ್ನು ನಾವು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಸಹೋದರತ್ವ ಸಮಿತಿಸ್ಥಾಪನೆಗೊಂಡುಆರು ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂಸಾಮಾಜಿಕ ಪರಿವರ್ತನೆಗಾಗಿಶ್ರಮಿಸುತ್ತಿದೆಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾಉಪಾಧ್ಯಕ್ಷಕೆ.ಆರ್.ಗಂಗಾಧರ್, ತಾಲ್ಲೂಕುಅಧ್ಯಕ್ಷಹರೀಶ್ ಮಿತ್ರ, ನವೀನ್, ವಸಂತ, ಸಮಿತಿಯಮುಖಂಡರಾದಸಾಕಮ್ಮ, ಸಿದ್ಧಯ್ಯ, ಎಚ್.ಕುಮಾರ್, ರತ್ನಮ್ಮ, ಸುಮಾ, ಯಶೋಧಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.

Vote wisely

About Author

Leave a Reply

Your email address will not be published. Required fields are marked *

You may have missed