September 19, 2024

ಜ.28ಕ್ಕೆ ಕುವೆಂಪು ಕಲಾಮಂದಿರದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

0
ಜ.28ಕ್ಕೆ ಕುವೆಂಪು ಕಲಾಮಂದಿರದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಜ.28ಕ್ಕೆ ಕುವೆಂಪು ಕಲಾಮಂದಿರದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಚಿಕ್ಕಮಗಳೂರು:  ನಗರದ ದಿ ಸ್ಟ್ರೇಂಜರ್‍ಸ್ ಡ್ಯಾನ್ಸ್ ಎಂಟರ್‌ಟೇನರ್ ವತಿಯಿಂದ ಜ.೨೮ ರಂದು ಭಾನುವಾರ ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ಲೆಟ್ಸ್‌ಡ್ಯಾನ್ಸ್ ೨೦೨೪ ಎಂಬ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ನೃತ್ಯ ನಿರ್ದೇಶಕ ಪ್ರಸಾದ್ ಅಮೀನ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ೪೫೦ ತಂಡಗಳನ್ನು ಭೇಟಿ ಮಾಡಿ ಆಹ್ವಾನಿಸಿದ್ದು ಆಸಕ್ತ ಸ್ಪರ್ಧಿಗಳು ಜ.೨೫ ರ ಒಳಗಾಗಿ ತಮ್ಮ ತಂಡದ ಹೆಸರನ್ನು ನೊಂದಾಯಿಸುವಂತೆ ಮನವಿ ಮಾಡಿದರು.

ಹಿರಿಯರ ವಿಭಾಗದಲ್ಲಿ ಚಲನಚಿತ್ರ ನೃತ್ಯ ಅಥವಾ ಪಾಶ್ಚಾತ್ಯ ನೃತ್ಯ(ತಂಡ), ಚಲನಚಿತ್ರ ಒಂಟಿ ನೃತ್ಯ ಅಥವಾ ಪಾಶ್ಚಾತ್ಯ ಒಂಟಿ ನೃತ್ಯ (ಹಿರಿಯರ ಹಾಗೂ ಕಿರಿಯರ ವಿಭಾಗ) ವನ್ನು ಏರ್ಪಡಿಸಿದ್ದೇವೆ ಎಂದು ಹೇಳಿದರು.

ಈ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ೪೦,೦೦೦/- ದ್ವಿತೀಯ ಬಹುಮಾನ ೩೦,೦೦೦/- ತೃತೀಯ ಬಹುಮಾನ ೨೦,೦೦೦/- ಹಾಗೂ ಸೀನಿಯರ್ ಸೋಲೋ ಪ್ರಥಮ ಬಹುಮಾನ ೧೦,೦೦೦/- ದ್ವಿತೀಯ ಬಹುಮಾನ ೭,೫೦೦/- ತೃತೀಯ ಬಹುಮಾನ ೫,೦೦೦/- ಹಾಗೂ ಜ್ಯೂನಿಯರ್ ಸೋಲೋ ಪ್ರಥಮ ಬಹುಮಾನ ೫,೦೦೦/- ದ್ವಿತೀಯ ಬಹುಮಾನ ೩,೦೦೦/- ತೃತೀಯ ಬಹುಮಾನ ೨,೦೦೦/- ಅತ್ಯಾಕರ್ಷಕವಾದ ದಿ ಸ್ಟ್ರೇಂಜರ್‍ಸ್ ಟ್ರೋಫಿಯನ್ನಿತ್ತು ಸನ್ಮಾನಿಸಲಾಗುವುದು ಎಂದರು.

ಅಂದು ಕಾರ್ಯಕ್ರಮದ ಎರಡು ಗಂಟೆಯ ಒಳಗಾಗಿ ಕುವೆಂಪು ಕಲಾ ಮಂದಿರದ ಆವರಣದಲ್ಲಿ ಇರತಕ್ಕದ್ದು. ಈ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ನುರಿತ ನೃತ್ಯ ನಿರ್ದೇಶಕರುಗಳು ತೀರ್ಪನ್ನು ನೀಡಲಿದ್ದು, ಯಾವುದೇ ತರಹದ ತಾರತಮ್ಯವಿಲ್ಲದೆ ತೀರ್ಮಾನಿಸಲಿದ್ದಾರೆ. ಕಲಾವಿದರ ಪ್ರತಿಭೆಯನ್ನು ಬೆಳಕಿಗೆ ತರುವುದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗೆ ಮೊ.೯೮೪೪೧೩೬೨೫೫, ೯೩೭೯೧೭೮೦೭೮, ೯೮೪೫೮೫೯೮೩೫ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ.ಸಾ.ಪ. ಗೌರವಕಾರ್ಯದರ್ಶಿ ಜಿ.ಬಿ.ಪವನ್, ಯಧುಕುಮಾರ್, ವ್ಯವಸ್ಥಾಪಕ ಶ್ರೀಕಾಂತ್ ಇದ್ದರು.

State level dance competition at Kuvempu Kalamandir on January 28

About Author

Leave a Reply

Your email address will not be published. Required fields are marked *

You may have missed