September 19, 2024

ಅಧಿಕಾರಿಗಳು ಕಾನೂನು ಬಾಹಿರ ಕೆಲಸಗಳಿಗೆ ಮಣಿಯ ಬಾರದು

0
ವಿಜಯಪುರ ಬಡಾವಣೆಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆಗಳ ಜನ ಸಂಪರ್ಕ ಸಭೆ

ಚಿಕ್ಕಮಗಳೂರು: ಅಧಿಕಾರಿಗಳು ಕಾನೂನು ಬಾಹಿರ ಕೆಲಸಗಳಿಗೆ ಮಣಿಯದೆ ಜನರಿಗೆ ಅನುಕೂಲವಾಗುವಂತೆ ಕೆಲಸವನ್ನು ಮಾಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ನಗರದ ವಿಜಯಪುರ ಬಡಾವಣೆ ಯಲ್ಲಿ ನಗರಸಭೆಯಿಂದ ಹಮ್ಮಿ ಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿ ಗೃಹಲಕ್ಷಿ ಯೋಜನೆಯಡಿಯಲ್ಲಿ ದಾಖಲೆ ಸಮಸ್ಯೆಯಿಂದ ೮೦ ಸಾವಿರ ಜನ ಮಹಿಳೆಯರಿಗೆ ಎರಡು ಸಾವಿರ ರೂ.ಹಣ ಬರುತ್ತಿಲ್ಲ. ರಾಜ್ಯ ಮಟ್ಟದಲ್ಲಿ ಶೀಘ್ರವೇ ಸಮಸ್ಯೆ ಪರಿಹಾರವಾ ಗಲಿದೆ ಎಂದರು.

ಕೊಳಚೆ ನಿರ್ಮೂಲನೆ ಮಂಡಳಿಯಿಂದ ಮಂಜೂರಾಗಿರುವ ಮನೆಗಳು ಅರ್ಧಬರ್ಧವಾಗಿದ್ದು ತಾಂತ್ರಿಕ ಮತ್ತು ಹಣದ ಕೊರತೆಯಿಂದ ಸಮಸ್ಯೆ ಉಂಟಾಗಿತ್ತು, ರಾಜ್ಯ ಮಟ್ಟದಲ್ಲಿ ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ರಾಜ್ಯಸಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಗಳು ರಾಜ್ಯ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಿದರು. ಉಸ್ತುವಾರಿ ಸಚಿವರ ಅಧ್ಯಕ್ಷ ತೆಯಲ್ಲಿ ಜಿಲ್ಲಾಮಟ್ಟದಲ್ಲಿ ಹಾಗೂ ಶಾಸಕರ ಅಧ್ಯಕ್ಷ ತೆಯಲ್ಲಿ ನಗರ, ಹೋಬಳಿ, ಗ್ರಾಮಾಂತರ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಜನ ಸಂಪರ್ಕ ಸಭೆ ಉದ್ದೇಶ ಜನರ ಬಳಿಗೆ ಸರ್ಕಾರ ಎನ್ನುವುದಾಗಿ ದೆ. ಜನರ ಸಮಸ್ಯೆ ಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸಲಾ ಗುವುದು ಎಂದರು.

ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪದ ಸಮಸ್ಯೆ ಮುಂದಿನ ಸಭೆಯಲ್ಲಿ ಇಂತಹ ಸಮಸ್ಯೆ ಗಳು ಬಂದರೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗು ವುದಾಗಿ ಹೇಳಿದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನಗರಸಭೆ ಯಿಂದ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕ ರ ಬಳಿಗೆ ಬಂದು ಅವರ ಸಮಸ್ಯೆ ಗಳನ್ನು ಪರಿಹರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಹೇಳಿ ವಿದ್ಯುತ್ ದೀಪ, ಕುಡಿಯುವ ನೀರು, ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂಬ ದೂರುಗಳು ಕೇಳಿ ಬಂದಿದೆ ಎಂದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಗೋಶಾಲೆ ಮಾದರಿಯಲ್ಲಿ ಶ್ವಾನ ಶಾಲೆ ಮಾಡಲು ಐದು ಎಕರೆ ಜಾಗಕ್ಕೆ ಮನವಿ ಮಾಡಲಾಗಿದೆ. ಜಾಗ ನೀಡಿದಲ್ಲಿ ನಗರಸಭೆ ಯಿಂದ ನಿರ್ವಹಣೆ ಮಾಡಲಾಗುವುದು. ಹಾಗೂ ಮುಂದಿನ ೧೫ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು, ರಸ್ತೆ, ಬೀದಿ ದೀಪ ಅಳವಡಿಸಲು ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗು ವುದು ಎಂದರು.

ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದಲ್ಲಿ ಪ್ರಥಮವಾಗಿ ಜನಸಂಪರ್ಕ ಸಭೆ ಆಯೋಜಿಸ ಲಾಗಿದೆ. ತಮ್ಮ ವಾರ್ಡ್ ಗಳ ಸಮಸ್ಯೆಗಳನ್ನು ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತರಬೇಕು, ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ರಸೂಲ್ ಖಾನ್ ಮಾತನಾಡಿ, ವಾರ್ಡ್ ನಲ್ಲಿ ಕೊಳಚೆ ನೀರು ಹರಿಯುವುದರಿಂದ ಸೊಳ್ಳೆ ಗಳ ಕಾಟ ಜಾಸ್ತಿಯಾಗಿದೆ. ಡೆಂಗ್ಯೂ, ಮಲೇರಿಯಾ ದಂತಹ ರೋಗಗಳು ಜಾಸ್ತಿಯಾಗುತ್ತಿದೆ, ಕೊಳವೆ ಬಾವಿ ವ್ಯವಸ್ಥೆ ಹಾಗೂ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು

ವಾರ್ಡ್ ನ ನಗರಸಭಾ ಸದಸ್ಯ ನಟರಾಜ್ ಮಾತನಾಡಿ, ಯುಡಿಜಿ ವ್ಯವಸ್ಥೆ ಆಗಿಲ್ಲ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು, ಕಬ್ಬಿನಹಳ್ಳಿ ಚಂದ್ರಮ್ಮ ಮಾತನಾಡಿ, ವಾರ್ಡ್ ನಲ್ಲಿ ದೂಳಿನ ಸಮಸ್ಯೆ ಇದೆ. ಇದರಿಂದ ಉಸಿರಾಟ ದ ತೊಂದರೆಯಾಗುತ್ತಿದೆ ಎಂದರು.

ಬಿಜೆಪಿ ಯುವ ಮೋರ್ಚಾದ ಸಂತೋಷ್ ಕೋಟ್ಯಾನ್ ಮಾತನಾಡಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ನಗರಸಭೆ ಸದಸ್ಯ ಸಿ.ಪಿ.ಲಕ್ಷ್ಮಣ್, ಗುರುಮಲ್ಲಪ್ಪ, ಲಕ್ಷ್ಮಣ್, ಪರಮೇಶ್ ರಾಜ್ ಅರಸ್, ಜಾವಿದ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಾಗರತ್ನ, ಆಯುಕ್ತ ಬಿ.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ,ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

Public Kundu Deficiency Public Liaison Meeting held in Vijayapur Barangay

 

About Author

Leave a Reply

Your email address will not be published. Required fields are marked *

You may have missed