September 20, 2024

ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ ಸ್ಪರ್ಧೆ

0
ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ ಸ್ಪರ್ಧೆ

ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ ಸ್ಪರ್ಧೆ

ಚಿಕ್ಕಮಗಳೂರು: : ಸಮರತೆ ಆತ್ಮರಕ್ಷಣೆಗಾಗಿ ಇಂದು ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವ ವಿಶೇಷತೆಯಿಂದ ಇರುವ ಟ್ವೇಕ್ವಾಂಡೋ ಕ್ರೀಡೆಯು ಜಿಲ್ಲೆಯಲ್ಲಿ ಅತ್ಯಂತ ಜನಪ್ರಿಯತೆಗೊಳ್ಳುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳ ಉತ್ಸಾಹವೇ ಸಾಕ್ಷಿ
ವಿವೇಕಾನಂದ ಫಿಟ್‌ನೆಸ್ ಹಾಗು ಇನ್‌ಫ್ಯಾಂಟ್ ಜೀಸಸ್ ಇವರ ಸಂಯುಕ್ತಾಶ್ರಯದಲ್ಲಿ ೨೦೨೪ರ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ ಇನ್‌ಫ್ಯಾಂಟ್ ಜೀಸಸ್ ಶಾಲೆಯ ಒಳಾಂಗಣದಲ್ಲಿ ನೆಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ಟ್ವೇಕಾಂಡೋ ಪಟುಗಳು ಭಾಗವಹಿಸಿದ್ದು, ಆಯಾ ಜಿಲ್ಲೆಯ ಸ್ಪರ್ಧಿಗಳು ಅಂಕಣಕಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಉತ್ಸಾಹದಿಂದ ಪಾಲ್ಗೋಳ್ಳುವುದರ ಜೊತೆಗೆ ಕಿವಿಗಟ್ಟಿಸುವಂತೆ ಕೆಕೆ ಹಾಕಿ ಪ್ರೋತ್ಸಾಹಿಸಿದರು.

ಶಿಸ್ತು ಮತ್ತು ಸಮಯಪಾಲನೆ ಆಯೋಜನೆಗೆ ಅತ್ಯಂತ ಮಹತ್ವವನ್ನು ಆಯೋಜಕರು ನೀಡಿರುವುದು ಗಮನಾರ್ಹವಾಗಿತ್ತು, ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ೫೦ಕ್ಕೂ ಹೆಚ್ಚು ಮಂದಿಯನ್ನು ಕ್ರೀಡೆಯ ತೀರ್ಪುಗಾರರ ಕರ್ತವ್ಯಕ್ಕೆ ನೇಮಿಸಲಾಗಿತ್ತು ಎಂದರು.

ಕ್ರೀಡೆಯ ಅಧ್ಯಕ್ಷತೆಯನ್ನು ವಹಿಸಿದ್ದ ಇನ್‌ಫ್ಯಾಂಟ್ ಜೀಸಸ್ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಮಾತನಾಡಿ ಟೇಕ್ವಾಂಡೋ ಕ್ರೀಡೆಯು ಸ್ವಯಂ ರಕ್ಷಣೆ ಹಾಗೂ ಶಿಸ್ತಿನ ಶಿಕ್ಷಣದ ಪರಿಪೂರ್ಣತೆಗೆ ಸಹಕಾರಿ ಆಗಿರುವುದರಿಂದ ನಮ್ಮ ಶಾಲೆಯಲ್ಲಿ ಕಳೆದ ೧೨ ವರ್ಷಗಳಿಂದ ಈ ತರಬೇತಿಯನ್ನು ಮಕ್ಕಳಿಗೆ ನೀಡುತ್ತಿದ್ದೇವೆ ಎಂದರು.

ನಗರಸಭೆ ಮಾಜಿ ಸದಸ್ಯೆ ಸುರೇಖಾಸಂಪತ್ ಮಾತನಾಡಿ ಇಂದು ಈ ಕ್ರೀಡೆಯು ಹೆಣ್ಣು ಮಕ್ಕಳಿಗೆ ಅನಿವಾರ್ಯವಾಗಿದೆ, ಈ ವಿದ್ಯೆಯನ್ನು ಎಲ್ಲರೂ ಕಲಿಯಬೇಕು, ಟೇಕ್ವಾಂಡೋ ದಂತಹ ಕ್ರೀಡೆ ಆತ್ಮರಕ್ಷಣೆಗೆ ಹೆಚ್ಚು ಸಹಕಾರಿ ಆಗಿರುವುದರಿಂದ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಇಂತಹ ಕ್ರೀಡೆಗಳ ಕಡೆಗೂ ಪ್ರೋತ್ಸಾಹ ನೀಡಬೇಕಾಗಿದೆ, ಕ್ರೀಡೆಯಲ್ಲಿ ಸೋಲು-ಗೆಲುವು ಅನಿವಾರ್ಯ ಆದರೆ ಸ್ಪರ್ಧಿಗಳು ಸೋತಾಗ ನಿರಾಶೆಯಾಗದೆ ಗೆಲುವಿನ ಹಂಬಲ ಹೊಂದಬೇಕು, ಕ್ರೀಡೆಯಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕುಮಾರಿ ಇನು.ವಿ.ಗೌಡ ಹಾಗೂ ಅಮಾನ್ ಶ್ರೀವಾಸ್ತ.ಎಂ.ಎಸ್ ಇವರಿಗೆ ಹರೀಶ್.ಎಚ್.ಎಸ್ ಶೃಂಗೇರಿ ಮೂರನೇ ಡಾನ್ ಬ್ಲಾಕ್‌ಬೆಲ್ಟ್ ಇವರಿಂದ ಮೊದಲನೆ ಬ್ಲಾಕ್‌ಬೆಲ್ಟ್‌ಗೆ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ವೆಂಕಟೇಶ್.ಆರ್, ಸಯದ್ ರಿಯಾಜ್ ತರಿಕೆರೆ, ಆಶಿಫ್ ಮಂಗಳೂರು ಉಪಸ್ಥಿತರಿದ್ದರು. ಪೂರ್ವಿಕರಾಜ್ ಅರಸ್ ಪ್ರಾರ್ಥಿಸಿ, ಸುಶೀಲ್‌ಕುಮಾರ್.ಐ.ಎಸ್ ವಂದಿಸಿ, ನಂದಕುಮಾರ್ ನಿರೂಪಣೆ ನೆರೆವೇರಿಸಿಕೊಟ್ಟರು.

State Level Freedom Cup Taekwondo Championship Competition

About Author

Leave a Reply

Your email address will not be published. Required fields are marked *