September 20, 2024

ಸಖರಾಯಪಟ್ಟಣ ತಾಲ್ಲೂಕು ಕೇಂದ್ರ ರಚಿಸಲು ಆಗ್ರಹಿಸಿ ಪಾದಯಾತ್ರೆ

0
ಸಖರಾಯಪಟ್ಟಣ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಸಚಿನ್ ಎತ್ತಿನಮನೆ ಪತ್ರಿಕಾಗೋಷ್ಠಿ

ಸಖರಾಯಪಟ್ಟಣ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಸಚಿನ್ ಎತ್ತಿನಮನೆ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಸಖರಾಯಪಟ್ಟಣ ತಾಲ್ಲೂಕು ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಜ.೨೬ರಂದು ಪಾದಯಾತ್ರೆ ಮೂಲಕ ಜಿಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಖರಾಯಪಟ್ಟಣ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಸಚಿನ್ ಎತ್ತಿನಮನೆ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅಂದು ಸಖರಾಯಪಟ್ಟಣದಿಂದ ಆ ಭಾಗದ ಸಾರ್ವಜನಿಕರನ್ನೂಳಗೊಂಡ ಪಾದಯಾತ್ರೆ ಹೊರಟು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಈ ಮೇಲ್ಕಂಡವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದೆಂದು ಹೇಳಿದರು.

ಸಖರಾಯಪಟ್ಟಣ ಹೋಬಳಿಯು ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದು ೧೧ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ದೊಡ್ಡ ಹೋಬಳಿಯಾಗಿದೆ. ಆಡಳಿತಾತ್ಮಕವಾಗಿ ಕಡೂರು ತಾಲ್ಲೂಕು ವ್ಯಾಪ್ತಿಗೆ ಸೇರಿದ್ದರೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ತಾಲ್ಲೂಕುವಾರು ಅನುದಾನ ಮತ್ತು ಗುಣಮಟ್ಟದ ಆರೋಗ್ಯ ಕೇಂದ್ರವೇ ಇಲ್ಲದಿರುವುದರಿಂದ ಹಾಗೂ ಸರ್ಕಾರದ ಇನ್ನಿತರ ಪರಿಹಾರಗಳ ಹಂಚಿಕೆಯಲ್ಲಿ ನಮ್ಮ ಭಾಗಕ್ಕೆ ತಾರತಮ್ಯವಾಗುತ್ತಿದೆ ಎಂದರು.

ತಾಲ್ಲೂಕು ರೆವಿನ್ಯೂ ಆದಾಯ ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿದ್ದರೂ ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳಿಗೆ ಕಡೂರು ತಹಶೀಲ್ದಾರ್ ಕಾರ್ಯಾಲಯ ಮತ್ತು ತರೀಕೆರೆ ಎ.ಸಿ ವರೆಗೆ ಸಖರಾಯಪಟ್ಟಣ ಹೋಬಳಿಯ ಸಾರ್ವಜನಿಕರು ಅಲೆದಾಡುವಂತಾಗಿದೆ ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದೇ ರೀತಿ ಲಕ್ಯಾ ಹೋಬಳಿಯಲ್ಲಿ ೧೦ ಗ್ರಾಮ ಪಂಚಾಯಿತಿಗಳಿದ್ದು ಹಿಂದುಳಿದ ಜನಾಂಗದವರೇ ಹೆಚ್ಚಾಗಿರುವ ಪ್ರದೇಶವಾಗಿರುತ್ತದೆ, ನೀರಾವರಿ ಮುಂತಾದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಅನುಕೂಲವಾಗುತ್ತಿಲ್ಲ ಎಂದು ಹೇಳಿದರು.

ಈ ಸಮಸ್ಯೆಗಳನ್ನು ಬಗೆಹರಿಸಲು ಸಖರಾಯಪಟ್ಟಣ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಸಖರಾಯಪಟ್ಟಣ ಹೋಬಳಿಯ ೧೧ ಪಂಚಾಯಿತಿಗಳು ಮತ್ತು ಲಕ್ಯಾ ಹೋಬಳಿಯ ೧೦ ಪಂಚಾಯಿತಿಗಳನ್ನು ಒಳಗೊಂಡಂತೆ ಸುಮಾರು ೧.೫ ಲಕ್ಷದಷ್ಟು ಜನಸಂಖ್ಯೆ ಇದ್ದು ೧ ಲಕ್ಷ ಮೀರಿದ ಮತದಾರರಿರುತ್ತಾರೆ, ಮತ್ತು ಈ ಭಾಗದಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರಕ್ಕಾಗಿ, ತಾಲ್ಲೂಕು ಕಛೇರಿಗಾಗಿ, ಉನ್ನತ ವ್ಯಾಸಂಗಕ್ಕಾಗಿ ಕಾಲೇಜು, ವಿದ್ಯಾಸಂಸ್ಥೆಗಳ ನಿರ್ಮಾಣಕ್ಕಾಗಿ ಈ ಭಾಗದ ಶಾಶ್ವತ ನೀರಾವರಿ ಯೋಜನೆಗಳಿಗಾಗಿ ಹಾಗೂ ಪ್ರವಾಸೋಧ್ಯಮಕ್ಕಾಗಿ, ತಾಲ್ಲೂಕು ನ್ಯಾಯಾಲಯಕ್ಕಾಗಿ, ಎ.ಪಿ.ಎಂ.ಸಿ ಮಾರುಕಟ್ಟೆಗಾಗಿ ಸರ್ಕಾರದ ಅನುದಾನದ ಸಮಪಾಲಿಗೋಸ್ಕರ ಈ ಪ್ರತ್ಯೇಕ ತಾಲ್ಲೂಕು ಹೋರಾಟವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಲಕ್ಯಾ, ಜಗದೀಶ್ ಬ್ಯಾಡರಹಳ್ಳಿ, ಮಂಜುನಾಥ್ ಬಾಣೂರು, ಸೌಂದರ್ಯ ಬ್ಯಾಡರಹಳ್ಳಿ, ಪುನೀತ್ ದೇವನೂರು ಇದ್ದರು.

Walk demanding creation of Sakharayapatnam taluk center

About Author

Leave a Reply

Your email address will not be published. Required fields are marked *