September 22, 2024

ಬಿಜೆಪಿ – ಜೆಡಿಎಸ್ ಹೊಂದಾಣಿಕೆ ತಳಮಟ್ಟದಲ್ಲೂ ಆಗಬೇಕು

0
An opinion poll meeting of seven taluk officials of the district was held at the JDS office

An opinion poll meeting of seven taluk officials of the district was held at the JDS office

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗಿದೆ ಎಂದಾಗಿದ್ದರೆ ಅದು ತಳಮಟ್ಟದಲ್ಲೂ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್‌ಶೆಟ್ಟಿ ಹೇಳಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ಏಳು ತಾಲೂಕುಗಳ ಪದಾಕಾರಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ದಳದ ನಡುವೆ ಹೊಂದಾಣಿಕೆಯಾಗಿದೆ. ಈ ಹೊಂದಾಣಿಕೆ ತಳಮಟ್ಟದಲ್ಲೂ ಆಗಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಇಂದಿನ ಸಭೆಯಲ್ಲಿ ಕ್ರೂಢಿಕೃತವಾದ ಪದಾಕಾರಿಗಳ ಅಭಿಪ್ರಾಯವನ್ನು ನಾಳೆ ಬೆಂಗಳೂರಲ್ಲಿ ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆಗ ಮುಟ್ಟಿಸುತ್ತೇನೆ. ನಂತರ ಜಿಲ್ಲೆಯಲ್ಲಿ ಮುಂದಿನ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದರು.

ಹೊಂದಾಣಿಕೆ ಎಂದ ಮೇಲೆ ನಮ್ಮಿಂದ ಕಾರ್ಯಕರ್ತರು ಬಹಳ ನಿರೀಕ್ಷೆ ಮಾಡುತ್ತಾರೆ. ಹೊಂದಾಣಿಕೆ ಆದ ಕೂಡಲೆ ಇನ್ನೊಂದು ಪಕ್ಷಕ್ಕೆ ಸಂಪೂರ್ಣ ಮಾರ್ಟಿಗೇಜ್ ಮಾಡಿಕೊಂಡಂತೆ ಅಲ್ಲ.ಈಗಿನ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ಸೀಮಿತವಾಗಿದೆ. ತದನಂತರ ಮುಂದಿನ ಚುನಾವಣೆಗಳಿಗೆ ಯಾವ ರೀತಿ ಹೊಂದಾಣಿಕೆ ಆಗಬೇಕು ಎಂಬುದನ್ನು ಪಕ್ಷನಿರ್ಧರಿಸಲಿದೆ ಎಂದರು.

ಸದ್ಯಕ್ಕೆ ಪಕ್ಷ ಸಂಘಟನೆಯೆ ನಮ್ಮ ಮುಖ್ಯ ಉದ್ದೇಶ. ಜಿಲ್ಲೆಯ ೭ ತಾಲೂಕಲ್ಲಿ ಪಕ್ಷ ಪ್ರಬಲವಾಗಿದೆ. ಎಲ್ಲೋ ಒಂದು ಕಡೆ ಪಕ್ಷದ ನಾಯಕತ್ವದ ಕೊರತೆ ಕಾಡುತ್ತಿದೆ. ಹೀಗಾಗಿ ಪಕ್ಷದ ನಾಯಕತ್ವಕ್ಕೆ ಚಾಲನೆ ಕೊಡಬೇಕಿದೆ. ಮೂಡಿಗೆರೆ, ಶೃಂಗೇರಿ, ಕಡೂರು ಸೇರಿ ಎಲ್ಲ ತಾಲೂಕಲ್ಲಿ ಪಕ್ಷದ ಮತದಾರ ಗಟ್ಟಿಯಾಗಿ ನೆಲೆಯೂರಿದ್ದಾನೆ ಎಂದರು.

ಲೋಕಸಭಾ ಚುನಾವಣೆ ಈಗಾಗಲೆ ಹತ್ತಿರ ಬರುತ್ತಿದೆ. ಜಿಲ್ಲಾಮಟ್ಟದಿಂದ ಬೂತ್ ಮಟ್ಟದವರೆಗೆ ಪಕ್ಷ ಸಂಘಟನೆ ಮಾಡಲಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸರಕಾರ ಬಂದರೂ ಕೊಡಲೇಬೇಕು ಈ ಬಗ್ಗೆ ನಮ್ಮ ಟೀಕೆಯಿಲ್ಲ ಎಂದರು.

ಕಳೆದ ೮ ತಿಂಗಳಿಂದ ರಾಜ್ಯ ಸರಕಾರ ಅಕಾರ ಮಾಡುತ್ತಿದೆ. ಯಾವುದೇ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಎಂದು ಪದಾಕಾರಿಗಳು ಇಂದು ಗಮನಕ್ಕೆ ತಂದಿದ್ದಾರೆ. ಕಂದಾಯ , ಸರ್ವೆ, ಅರಣ್ಯ ಸೇರಿ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಸರಕಾರವನ್ನು ೪೦ ಪರ್ಸೆಂಟ್ ಸರಕಾರ ಎಂದು ಕಾಂಗ್ರೆಸ್ ಟೀಕಿಸಿತ್ತು. ಆದರೆ, ಇಂದು ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಅಭಿವೃದ್ಧಿ ಆಗದೇ ಇರುವದರಿಂದ ಲಂಚಾವತಾರ ೬೦ ಪರ್ಸೆಂಟ್‌ಗೆ ಮುಟ್ಟಿದೆ ಎಂದು ಆರೋಪಿಸಿದರು.

ಒಂದು ಕಡೆ ಬರಗಾಲ ಇನ್ನೊಂದು ಕಡೆ ಸರಕಾರ ಅಭಿವೃದ್ಧಿಗೆ ಒತ್ತು ಕೊಡುತ್ತಿಲ್ಲ.ಜನರ ಕೈಗೆ ಕೆಲಸವಿಲ್ಲ. ಈ ಸಂದರ್ಭ ಜನರ ವಿರುದ್ಧವಾದ ಯೋಜನೆಗಳು, ದಬ್ಬಾಳಿಕೆ ಹಾಗೂ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಪಕ್ಷ ನಿರ್ಧರಿಸಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್‌ಅಜಿತ್‌ಕುಮಾರ್, ಮುಖಂಡರಾದ ಮಂಜಪ್ಪ, ಜಿ.ಎಸ್.ಚಂದ್ರಪ್ಪ, ದೇವಿಪ್ರಸಾದ್, ಶ್ರೀದೇವಿ, ಜಗದೀಶ್, ಸಿ.ಕೆ.ಮೂರ್ತಿ ,ಗಂಗಾಧರನಾಯ್ಕ,ಚಂದ್ರು ಮತ್ತಿತರರಿದ್ದರು.

An opinion poll meeting of seven taluk officials of the district was held at the JDS office

About Author

Leave a Reply

Your email address will not be published. Required fields are marked *

You may have missed