September 22, 2024

ವಿದ್ಯಾರ್ಥಿನಿಯರಿಗೆ ಸಂಸ್ಕಾರದ ಶಿಕ್ಷಣ ಅಗತ್ಯ

0
ತರಳಬಾಳು ಜಗದ್ಗುರು ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಠ್ಯ-ಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭ

ತರಳಬಾಳು ಜಗದ್ಗುರು ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಠ್ಯ-ಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭ

ಚಿಕ್ಕಮಗಳೂರು: ಹೆಣ್ಣು ಮಕ್ಕಳು ಮೊದಲು ಕುಟುಂಬ ನಿರ್ವಹಣೆ ಮಾಡಬೇಕಾದಂತ ಸಂದರ್ಭದಲ್ಲಿ ನಿಮಗೆ ಸಂಸ್ಕಾರದ ಶಿಕ್ಷಣ ಕೊಡಬೇಕು, ಇದನ್ನು ಅಳವಡಿಸಿಕೊಂಡಾಗ ನಾಡು-ಆ ಕುಟುಂಬಕ್ಕೆ ಬೆಳಕಾಗುತ್ತದೆ. ಈ ನಿಟ್ಟಿನಲ್ಲಿ ಜೀವನದ ಶಿಕ್ಷಣ ಬಹಳ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ತಿಳಿಸಿದರು.

ಅವರು ಇಂದು ನಗರದ ತರಳಬಾಳು ಜಗದ್ಗುರು ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪಠ್ಯ-ಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ಜೀವನದಲ್ಲಿ ಸಂಸ್ಕಾರದ ಶಿಕ್ಷಣವನ್ನು ಅಳವಡಿಸಿಕೊಳ್ಳದಿದ್ದಾಗ ಉತ್ತಮವಾಗಿ ಸಂಸಾರದ ಜೀವನ ನಡೆಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಓದು-ಒಕ್ಕಾಲು, ಬುದ್ದಿ ಮುಕ್ಕಾಲು ಎಂಬಂತೆ ಹೆಚ್ಚು ಓದಿರಲಿಲ್ಲ. ಕೃಷಿ ಬದುಕಿನಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿದ್ದರು ಎಂದು ಹೇಳಿದರು.

ಹಿಂದೆ ಸ್ವಾಸ್ಥ್ಯ ಸಮಾಜ ಪ್ರೀತಿಯ ಬದುಕು, ನೆಮ್ಮದಿಯ ಬದುಕನ್ನು ಕಾಣುತಿದ್ದೆವು. ಇಂದು ವಿಜ್ಞಾನ ಬೆಳೆದಿದ್ದರೂ ಇವುಗಳನ್ನು ಕಾಣಲಾಗುತ್ತಿಲ್ಲ ಎಂದು ವಿಷಾಧಿಸಿ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪೂರ್ವಜರು ಶ್ರಮಿಸಿದ್ದರು ಎಂದರು.

ಇಂದು ಉನ್ನತ ವ್ಯಾಸಂಗ, ತಂತ್ರಜ್ಞಾನ, ವಿಜ್ಞಾನ ಮುಂದುವರೆದಿದ್ದರೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ವಿಫಲವಾಗಿದ್ದೇವೆ. ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿರುವುದು ಅಗತ್ಯ ಎಂದು ಎಚ್ಚರಿಸಿದರು.

ಈ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಬಹುತೇಕ ಕೃಷಿ ಕುಟುಂಬದಿಂದ ಬಂದವರಾಗಿದ್ದು, ಸಿರಿಗೆರೆ ಹಿರಿಯ ಶ್ರೀಗಳು ಕೃಷಿಯಿಂದ ನಡೆಸುತ್ತಿರುವ ಮಠ ಇದಾಗಿದೆ ಎಂದು ಶ್ಲಾಘಿಸಿದರು.

ಸಿರಿಗೆರೆ ಮಠದ ಹಿರಿಯ ಶ್ರೀಗಳು ಅತಿ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿದ್ದಾರೆ. ಆ ಕಾಲಘಟ್ಟದಲ್ಲಿ ಚಿಕ್ಕಮಗಳೂರಿನಲ್ಲಿ ಯಾವುದೇ ಮಹಿಳಾ ಕಾಲೇಜು ಇರಲಿಲ್ಲ. ಇದನ್ನರಿತು ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕೆಂದು ನಗರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ಶ್ರೀಗಳ ಆಲೋಚನೆಗೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಶ್ಲಾಘಿಸಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ನಾಣ್ಣುಡಿಯಂತೆ ಪ್ರತಿ ಕುಟುಂಬದಲ್ಲಿ ಹೆಣ್ಣು ಮಗಳು ವಿದ್ಯಾವಂತಳಾದರೆ ಆ ಕುಟುಂಬ ಸೌಭಾಗ್ಯದ ರೀತಿ ಲಕ್ಷ್ಮಿಯಾಗಿದ್ದೀರಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದ ಜಾವಗಲ್ ನ ಮಾಡೆಲ್ ಶಾಲೆ ಸಂಸ್ಥಾಪಕ ಡಾ|| ವಿನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯಕ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ನಿರಂಜನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಲಲಿತಾಕುಮಾರ, ಭಾರತಿ, ಚೇತನ, ಸಂತೋಷ್‌ಕುಮಾರ್ ಮತ್ತಿತರರಿದ್ದರು. ಮೊದಲಿಗೆ ಸುಮ ಸ್ವಾಗತಿಸಿ, ಆಶಾ ವಂದಿಸಿದರು.

Closing ceremony of co-curricular activities

About Author

Leave a Reply

Your email address will not be published. Required fields are marked *

You may have missed