September 20, 2024

ಫೆ.11ಕ್ಕೆ ಅಕ್ಷರ ದಾಸೋಹಕಾರ್ಯಕರ್ತೆಯರ ಜಿಲ್ಲಾಸಮಾವೇಶ

0
ಅಕ್ಷರ ದಾಸೋಹಕಾರ್ಯಕರ್ತೆಯರ ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವಿಜಯ್ ಕುಮಾರ್ ಸುದ್ದಿಗೋಷ್ಠಿ

ಅಕ್ಷರ ದಾಸೋಹಕಾರ್ಯಕರ್ತೆಯರ ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವಿಜಯ್ ಕುಮಾರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಆರನೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ (ಬಿಸಿಯೂಟ) ಕಾರ್ಯಕರ್ತೆಯರ ಫೆಡರೇಶನ್ ಜಿಲ್ಲಾ ಸಮಿತಿ ಫೆ.೧೧ ರಂದು ಭಾನುವಾರ ಬ್ರಹ್ಮಸಮುದ್ರ ರಂಗಣ್ಣನವರ ಛತ್ರದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವಿಜಯ್ ಕುಮಾರ್, ಅಂದು ಬೆಳಗ್ಗೆ ೧೦.೩೦ಕ್ಕೆ ಸಂತೆ ಮೈದಾನದ ಸಂಘದ ಕಚೇರಿಯಿಂದ ಮೆರವಣಿಗೆ ಹೊರಟು ೧೧:೩೦ಕ್ಕೆ ಕಾರ್ಯಕ್ರಮವನ್ನು ಶಾಸಕ ಹೆಚ್.ಡಿ ತಮ್ಮಯ್ಯ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷರ ದಾಸೋಹ ಫೆಡರೇಶನ್ ಜಿಲ್ಲಾಧ್ಯಕ್ಷ ಜಿ. ರಘು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಟಿ.ಡಿ ರಾಜೇಗೌಡ, ಜಿ.ಹೆಚ್ ಶ್ರೀನಿವಾಸ್, ಕೆ.ಎಸ್ ಆನಂದ್, ನಯನ ಮೋಟಮ್ಮ ಜಿಲ್ಲಾ ಶಿಕ್ಷಣಾಧಿಕಾರಿ ವೈ.ಬಿ ಸುಂದರೇಶ್, ರೈತ ಮುಖಂಡ ಹೆಚ್.ಎಂ ರೇಣುಕಾರಾಧ್ಯ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್.ಎಲ್ ರಾಧಸುಂದ್ರೇಶ್, ಕಾರ್ಮಿಕ ಮುಖಂಡ ಕೆ.ಎಸ್ ರಮೇಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಜಿಲ್ಲೆಯ ಐದು ಶಾಸಕರು ಭಾಗವಹಿಸಲಿದ್ದು ಆರನೇ ಗ್ಯಾರಂಟಿ ಯೋಜನೆ ಜಾರಿ ಮಾಡುವುದರ ಜೊತೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡುವಂತೆ ಸದನದಲ್ಲಿ ವಿ?ಯ ಪ್ರಸ್ತಾಪಿಸಿ ಬಜೆಟ್‌ನಲ್ಲಿ ಘೋಷಿಸಬೇಕೆಂದು ಆಗ್ರಹಿಸಲಾಗುವುದೆಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು ೧,೧೬,೦೦೦ ಬಿಸಿಯೂಟ ಕಾರ್ಯಕರ್ತೆಯರು ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದಲ್ಲಿ ಸುಮಾರು ೨೩ ವ?ಗಳಿಂದ ದಿನಕ್ಕೆ ಕೇವಲ ೧೦ ರೂಪಾಯಿಗಳಿಂದ ಕೆಲಸ ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಹೋರಾಟದ ಹಿನ್ನೆಲೆಯಲ್ಲಿ ಈಗ ತಿಂಗಳಿಗೆ ೩,೬೦೦ ಹಾಗೂ ರೂ. ೩೭೦೦ ಗಳನ್ನು ಮಾಸಿಕ ವೇತನವನ್ನಾಗಿ ಪಡೆಯುತ್ತಿದ್ದಾರೆ ಎಂದರು.

ಇದರಲ್ಲಿ ಕೇಂದ್ರ ಸರ್ಕಾರದ ರೂ ೬೦೦ ರೂಪಾಯಿಗಳು ಮತ್ತು ರಾಜ್ಯ ಸರ್ಕಾರದ ೩೦೦೦ ರೂ ಗಳನ್ನು ಕೃಢೀಕರಿಸಿ ವೇತನ ನೀಡಲಾಗುತ್ತಿದೆ. ಈಗಾಗಲೇ ಸುಮಾರು ೧೦ ವ?ಗಳಿಂದ ಕೇಂದ್ರ ಸರ್ಕಾರ ನೀಡಬೇಕಾದ ಶೇಕಡವಾರು ೬೦% ವೇತನವನ್ನು ನೀಡದೆ ಕೇವಲ ೬೦೦ ರೂ ಗಳನ್ನು ಮಾತ್ರ ನೀಡಿ ಕಾರ್ಯಕತೆಯರನ್ನು ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈವರೆಗೂ ಸೇವೆ ಸಲ್ಲಿಸಿದ ಹಲವಾರು ಜನ ಕಾರ್ಯಕತೆಯರು ೬೦ ವ? ಪೂರ್ಣಗೊಂಡು ಬರಿಗೈಯಲ್ಲಿ ನಿವೃತ್ತಿಗೊಂಡಿದ್ದು ಇವರಿಗೆ ನಿವೃತ್ತಿ ವೇತನವು ಸಹ ಇಲ್ಲದೆ ಹಲವಾರು ಜನ ಬೀದಿ ಪಾಲಾಗಿರುವ ನಿದರ್ಶನಗಳಿವೆ. ಅಡುಗೆಯವರಿಗೆ ೧೦ ಸಾಂರ್ಧಭಿಕ ರಜೆಯಿದ್ದರೂ ರಜೆ ನೀಡಲಾಗುತ್ತಿಲ್ಲ ಎಂದರು.

ಅಡಿಗೆ ಸಂದರ್ಭದಲ್ಲಿ ಹಲವಾರು ಅಗ್ನಿ ಅವಘಡಗಳು, ಕುಕ್ಕರ್ ಸಿಡಿಯುವಿಕೆಯಂತಹ ಘಟನೆಗಳು ನಡೆದು ಗಾಯಗೊಂಡರೂ ಯಾವುದೇ ವೈದ್ಯಕೀಯ ವೆಚ್ಚ ಮತ್ತು ಸೌಲಭ್ಯ ನೀಡುವಲ್ಲಿ ಹಲವಾರು ಕಡೆ ನಿರ್ಲಕ್ಷಿಸಲಾಗಿದೆ. ಜೀವ ವಿಮೆ, ಪಿ.ಎಫ್, ಇ.ಎಸ್.ಐ, ನಿವೃತ್ತಿ ವೇತನ, ನಿವೃತ್ತಿ ಹಿಡಿಘಂಟುನಂತಹ ಯಾವುದೇ ಸೌಲಭ್ಯವಿಲ್ಲದೆ ಕಾರ್ಯಕತೆಯರು ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ೬ನೇಯ ಗ್ಯಾರಂಟಿಯಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರದಿಂದ ೬,೦೦೦ ರೂ.ಗಳ ಸಂಬಳದ ಹೆಚ್ಚುವರಿ ನೀಡುವ ಭರವಸೆ ನೀಡಿದ್ದು ಇದರಂತೆ ಆಡಳಿತರೂಢ ಸರ್ಕಾರವು ಘೋಷಿತ ವೇತನ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ. ರಘು, ಶಿವಕುಮಾರ್, ಚಂದ್ರಮ್ಮ, ಶಮೀಮ್, ಶೋಭದೋರನಾಳು, ನಾಗಮಣಿ, ಸ್ವಪ್ನ, ಲಕ್ಷ್ಮಿ ಡಿ.ಕೆ, ಲತಾ ಅಜ್ಜಂಪುರ ಮತ್ತಿತರರಿದ್ದರು.

District convention of Akshara Daso workers on February 11

About Author

Leave a Reply

Your email address will not be published. Required fields are marked *