September 20, 2024
ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಮತ್ತು ಸೂರ್ಯ ಹೋಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಮತ್ತು ಸೂರ್ಯ ಹೋಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ಚಿಕ್ಕಮಗಳೂರು: ಯೋಗ ಅಂದರೆ ಕೇವಲ ಋಷಿ ಮುನಿಗಳು ಮಾಡುತ್ತಾರೆ ಎಂಬ ಅಭಿಪ್ರಾಯ ಬದಲಾಗಿ ಇಂದು ಸರ್ವರೂ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಹೆಚ್.ಸಿ ಸುರೇಂದ್ರ ತಿಳಿಸಿದರು.

ಅವರು ಇಂದು ಎಂಎಲ್‌ಆರ್ ಲಯನ್ಸ್ ಹಾಲ್‌ನಲ್ಲಿ ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಮತ್ತು ಸೂರ್ಯ ಹೋಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಮಲ್ನಾಡಹಳ್ಳಿಯಲ್ಲಿ ಯೋಗಾಭ್ಯಾಸ ಪ್ರಸಿದ್ಧಿಯಾಗಿತ್ತು. ಇತ್ತೀಚೆಗೆ ದೇಶಾದಾದ್ಯಂತ ಯೋಗಾಭ್ಯಾಸ ಮಾಡುತ್ತಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ಸದೃಢವಾಗಲು ಕಾರಣವಾಗಿದೆ ಎಂದು ಹೇಳಿದರು.

ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ, ಬೆಳಗ್ಗೆ ಎದ್ದು ಲದ್ದಿ ಈ ಮೂರನ್ನು ನಿಗಧಿತ ಸಮಯದಲ್ಲಿ ಮಾಡುವ ವ್ಯಕ್ತಿಯೇ ಯೋಗ ಎನ್ನುತ್ತಾರೆ ಮಂಡ್ಯ ಜನರು ವ್ಯಾಖ್ಯಾನಿಸುತ್ತಾರೆ ಎಂದು ತಿಳಿಸಿದರು.

ಈ ಮೂರು ಸರಿಯಾಗಿ ಇದ್ದಾಗ ಮಾತ್ರ ಜೀವನದಲ್ಲಿ ಆರೋಗ್ಯವಂತರಾಗಿದ್ದೀರಿ ಎಂದು ಅರ್ಥ. ಇವುಗಳಲ್ಲಿ ಒಂದು ವ್ಯತ್ಯಾಸವಾದರು ಜೀವನವೇ ಬೇಡ ಎನಿಸುತ್ತದೆ ಆದ್ದರಿಂದ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಜೀವನ ನಡೆಸಿ ಎಂದು ಕರೆ ನೀಡಿದರು.

ಮನೆಯಲ್ಲಿ ಹಾಲು ಇದ್ದರೆ ಆ ಮನೆಯು ಸಮೃದ್ಧಿಯಾಗಿರುತ್ತದೆ ಎಂದ ಅವರು Money, I-Influence, L-luck, K-Knowledge, ಇವೆಲ್ಲವೂ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್‌ರವರಲ್ಲಿದೆ ಅದಕ್ಕೆ ಅವರನ್ನು ಮಿಲ್ಕ್‌ಗೆ ಹೋಲಿಸಿದ್ದೇನೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ ಯೋಗಾಭ್ಯಾಸದಲ್ಲಿ ವಿವಿಧ ಆಸನ ಮಾಡುವುದರಿಂದ ಹಲವಾರು ಮೂಲಭೂತ ಗುಣಗಳು ಯೋಗಾಭ್ಯಾಸದ ಸ್ಥಳದಲ್ಲಿ ನೆಲೆಯೂರಿರುತ್ತವೆ ಎಂದು ಹೇಳಿದರು.

ಯೋಗ ಅಂದರೆ ಮನಸ್ಸು, ದೇಹ, ಆತ್ಮವನ್ನು ಪರಮಾತ್ಮನ ಜೊತೆ ಕೂಡಿಸುವುದಾಗಿದೆ. ಯೋಗಾಭ್ಯಾಸದಲ್ಲಿ ಆಸನ ಒಂದು ಭಂಗಿ ಆಗಿ ಸ್ಥಿರವಾಗಿ ಮಾಡುವುದರಿಂದ ಇವುಗಳು ಲಭ್ಯವಾಗಲಿವೆ ಎಂದರು.

ವೇದಿಕೆಯಲ್ಲಿ ಎಂ.ಆರ್ ನಾಗರಾಜ್, ಕನಕರಾಜ್, ಗಿರೀಶ್, ನಟರಾಜ್ ಉಪಸ್ಥಿತರಿದ್ದರು. ಡಾ|| ಸಿ.ಟಿ ಮಂಜುನಾಥ್ ಸ್ವಾಗತಿಸಿ ಶಿವಪ್ಪ ನಿರೂಪಿಸಿ ಗಿರೀಶ್ ವಂದಿಸಿದರು.

Practice yoga and improve your health

About Author

Leave a Reply

Your email address will not be published. Required fields are marked *