September 20, 2024

ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು

0
ನಗರಸಭೆ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಅನಾವರಣ

ನಗರಸಭೆ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಅನಾವರಣ

ಚಿಕ್ಕಮಗಳೂರು: ವಿಶ್ವಗುರು ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ನಗರಸಭೆ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಅನಾವರಣ ಮಾಡಿ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಿ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕಬೇಕೆಂಬ ಸುತ್ತೋಲೆ ಹೊರಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

೧೨ನೇ ಶತಮಾನತದಲ್ಲಿ ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣನವರು ದೇಶದುದ್ದಕ್ಕೂ ಸಂಚರಿಸಿ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದ ಫಲವಾಗಿ ಇಂದು ಸಾಂಸ್ಕೃತಿಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆಂದು ಶ್ಲಾಘಿಸಿದರು.

ಕ್ರಾಂತಿಯೋಗಿ, ಭಕ್ತಿಭಂಡಾರಿ, ಕಾಯಕ ಯೋಗಿ ಹೀಗೆ ಹಲವಾರು ಬಿರುದುಗಳನ್ನು ಪಡೆದುಕೊಂಡಿರುವ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ವೃತ್ತಿ ಬದುಕಿಗೆ ಮಹತ್ವ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆಂದು ವರ್ಣಿಸಿದರು.
ಬುದ್ದ, ಕನಕದಾಸ, ಬಸವಣ್ಣ, ಅಂಬೇಡ್ಕರ್ ಇವರ ತತ್ವಾದರ್ಶಗಳನ್ನು ಇಂದು ಸಮಾಜದ ಎಲ್ಲರೂ ಮೈಗೂಡಿಸಿಕೊಂಡು ಪಾಲಿಸೋಣ ಎಂದು ಕರೆ ನೀಡಿದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ರಾಜ್ಯ ಸರ್ಕಾರ ಸಾಂಸ್ಕೃತಿ ನಾಯಕ ಎಂಬ ಬಿರುದನ್ನು ಜಗಜ್ಯೋತಿ ಬಸವೇಶ್ವರರಿಗೆ ನೀಡಿರುವುದು ನಿಜವಾದ ಸಾಂಸ್ಕೃತಿಕ, ಧಾರ್ಮಿಕ ಪುರುಷರಿಗೆ ಸಿಕ್ಕಿದೆ ಎಂದು ಹೇಳಿದರು.

ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವೇಶ್ವರರು ಕ್ರಾಂತಿಕಾರಿ ಆಡಳಿತ ನಡೆಸಿ, ಸಮಾನತೆ ವಿರುದ್ಧ, ದೀನ ದಲಿತರ ವಿರುದ್ಧ ಧ್ವನಿಯಾಗಿ ನಿಂತು ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಹಿಂದೆ ಇದ್ದ ಬ್ರಾಹ್ಮಣ ಶಾಹಿ ಪದ್ದತಿ, ಹರಿಜನ-ಗಿರಿಜನ ಪದ್ದತಿ ಮಧ್ಯೆ ಉಂಟಾದ ಕಿತ್ತಾಟಗಳ ಸಂದರ್ಭಗಳಲ್ಲಿ ಈ ಇಬ್ಬರೂ ಜಾತಿಗಳಲ್ಲಿ ಪರಸ್ಪರ ವಿವಾಹ ಮಾಡುವ ಮೂಲಕ ಸಮಾನತೆ ತಂದವರು ಮೇಧಾವಿ ಬಸವಣ್ಣನವರು ಎಂದರು.

ಅನುಭವ ಮಂಟಪ ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸುತ್ತಿದ್ದರು. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮನಗಂಡಿದ್ದರು. ಇಂದು ನಾಗರೀಕರು ಮತ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆ ಮಾಡುವ ಜನಪ್ರತಿನಿಧಿಗಳು ನಿರ್ಣಯ, ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ಬಸವಣ್ಣನವರು ಮಾದರಿಯಾಗಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ವ್ಯವಸ್ಥಾಪಕ ರವಿ, ಅಭಿಯಂತರರುಗಳಾದ ಲೋಕೇಶ್, ತೇಜಸ್ವಿನಿ, ರಶ್ಮಿ, ಮಿಥುನ, ಲೆಕ್ಕಾಧೀಕ್ಷಕರಾದ ಲತಾಮಣಿ, ಕಂದಾಯ ಅಧಿಕಾರಿಗಳಾದ ರಮೇಶ್‌ಬಾಬು, ಸಮುದಾಯ ಸಂಘಟನಾಧಿಕಾರಿ ಕಲಾವತಿ, ಚಂದ್ರಶೇಖರ್, ರಾಜಸ್ವ ನಿರೀಕ್ಷಕ ಶಿವಾನಂದ, ಆರೋಗ್ಯ ನಿರೀಕ್ಷಕರಾದ ಈಶ್ವರಪ್ಪ, ರಂಗಪ್ಪ, ನಾಗಪ್ಪ, ವೆಂಕಟೇಶ್, ಶಶಿರಾಜ್ ಹಾಗೂ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Jagjyoti Basaveshwar’s portrait unveiled in Municipal Hall

About Author

Leave a Reply

Your email address will not be published. Required fields are marked *