September 20, 2024

ಚಿಕ್ಕಮಗಳೂರು:  ಕರಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಗುಣಮಟ್ಟದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಕುಟುಂಬವನ್ನು ಸದೃಢಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ಕೈಗಾರಿಕಾ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಗ್ರಾಮೀಣ ಭಾಗದಲ್ಲಿರುವ ಕರಕುಶಲಕರ್ಮಿ ವೃತ್ತಿ ನಿರತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಲಕರಣೆಗಳನ್ನು ವಿತರಿಸುತ್ತಿದೆ. ಸುಮಾರು ೩೪ ಲಕ್ಷ ರೂ. ವೆಚ್ಚದಲ್ಲಿ ಪ್ಲಂಬರ್‍ಸ್, ಗಾರೆ ಕೆಲಸದವರು, ಕ್ಷೌರಿಕ, ಕಮ್ಮಾರಿಕೆ ಸೇರಿದಂತೆ ಕರಕುಶಲಕರ್ಮಿಗಳಿಗೆ ಅವರ ವೃತ್ತಿಗನುಸಾರವಾಗಿ ಸಲಕರಣಗೆಗಳನ್ನು ನೀಡಲಾಗುತ್ತಿದೆ ಎಂದರು.

ಬಡವರ ಆರ್ಥಿಕ ಸ್ಥತಿಯನ್ನು ಸದೃಢಗೊಳಿಸಬೇಕು ಎನ್ನುವ ದೃಷ್ಠಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ನೀಡುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮುಂದುವರಿಸಲಾಗುತ್ತಿದೆ. ಅವುಗಳನ್ನು ಸ್ಥಗಿತಗೊಳ್ಳುತ್ತವೆ ಎಂದು ಹಲವರು ಹೇಳುತ್ತಿದ್ದರು. ಆದರೆ ಈ ಬಾರಿಯ ಬಜೆಟ್‌ನಲ್ಲೂ ಎಲ್ಲಾ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿಗಳು ಅನುದಾನ ಮೀಸಲಿಟ್ಟಿದ್ದಾರೆ ಎಂದರು.

ಕರಕುಶಲಕರ್ಮಿಗಳು ಸ್ವಾವಲಂಬಿಗಳು ಯಾರ ಬಳಿಯೂ ಕೈ ವೊಡ್ಡದೆ ಕಷ್ಟಪಟ್ಟು ದುಡಿದು ಬದುಕುತ್ತಿರುವವರು, ಈ ವೃತ್ತಿ ಮಾಡುವವರು ಇಲ್ಲದಿದ್ದರೆ ಸಮಾಜದ ಸ್ಥಿತಿ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕರಕುಶಲ ವಸ್ತುಗಳು ನಮ್ಮ ದೇಹವಿದ್ದಂತೆ ಯಾವುದೇ ಒಂದು ಒಂದು ಅಂಗವಿಲ್ಲವಾದರೆ ಸದೃಢವಾಗಿರಲು ಸಾಧ್ಯವಿಲ್ಲ. ಹಾಗೆಯೇ ಎಲ್ಲ ಕರಕುಶಲ ವಸ್ತುಗಳು ಬದುಕಿಗೆ ಮುಖ್ಯ ಅದಕ್ಕಾಗಿ ಅವರೆಲ್ಲರಿಗೂ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಗ್ರಾಮೀಣ ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ರವಿಪ್ರಸಾದ್ ಮಾತನಾಡಿ, ಪ್ರತಿ ವರ್ಷ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ಪಾರಂಪರಿಕ ಕುಶಲಕರ್ಮಿ ವೃತ್ತಿ ನಿರತರಿಗೆ ಕಸುಬು ಅಭಿವೃದ್ಧಿ ಪಡಿಸಲು ವಿದ್ಯುತ್ ಚಾಲಿತ ಉಪಕರಣಗಳನ್ನು ನೀಡುವ ಮೂಲಕ ಕೌಶಲ್ಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಸುಧಾರಿತ ಉಪಕರಣಗಳನ್ನು ನೀಡಲಾಗುತ್ತಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ ೪೪೭ ಫಲಾನುಭವಿಗಳಿಗೆ ೩೪ ಲಕ್ಷ ರೂ. ಅನುದಾನವನ್ನು ಕಳೆದ ಸಾಲಿನಲ್ಲಿ ನಿಗಧಿಪಡಿಸಲಾಗಿತ್ತು. ಚಿಕ್ಕಮಗಳೂರು ತಾಲ್ಲೂಕಿಗೆ ೧೦೪ ಫಲಾನುಭವಿಗಳಿಗೆ ಸೌಲತ್ತುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ಯಪಕರಣದಗಳು ಅತ್ಯುತ್ತಮ ಗುಣಮಟ್ಟದ, ದೊಡ್ಡ ದೊಡ್ಡ ಕಂಪನಿಗಳದ್ದಾಗಿದೆ ಎಂದು ತಿಳಿಸಿದರು.

ಗ್ರಾ.ಪಂ.ಸದಸ್ಯ ಎಚ್.ಪಿ.ಮಂಜೇಗೌಡ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.

Distribution ceremony of advanced tools to artisans

About Author

Leave a Reply

Your email address will not be published. Required fields are marked *