September 20, 2024

ನಗರಸಭೆ ಅಧ್ಯಕ್ಷರಿಂದ ಏಳು ಮಂದಿ ವಿರುದ್ಧ ಪ್ರಕರಣ ದಾಖಲು

0
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್

ಚಿಕ್ಕಮಗಳೂರು: ನಗರದ ನೆಹರು ನಗರದ ಸಹರಾ ಶಾದಿ ಮಹಲ್ ಸಮೀಪ ಕಸದ ಡಪಿಂಗ್‌ಯಾರ್ಡ್ ನಿರ್ಮಾಣ ಸಂಬಂಧ ನಡೆದ ಪ್ರತಿಭಟನೆ ವೇಳೆ ಸ್ಥಳಕ್ಕೆ ತೆರಳಿದ್ದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೇಲೆ ಹಲ್ಲೆಗೆ ಯತ್ನಿಸಿದ ನಗರಸಭೆ ಸದಸ್ಯ ಮಧು ಕುಮಾರ್ ರಾಜ್ ಅರಸ್ ಸೇರಿದಂತೆ ಏಳು ಮಂದಿ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ಬಸವನಹಳ್ಳಿ ಪೊಲೀಸ್ ಠಾಣೆರಯಲ್ಲಿದೂರು ದಾಖಲಿಸಿರುವ ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಹಾಗೂ ಆತನ ಸಹೋದರ ಅವಿಶಿತ್ ಹಾಗೂ ನಗರಸಭೆ ಸದಸ್ಯ ಮಧುಕುಮಾರ್ ರಾಜ್ ಅರಸ್ ಮೇಲೆ ದೂರು ದಾಖಲಿಸಿದ್ದಾರೆ.

ಕಸದ ಯಾರ್ಡ್ ಕಾಮಗಾರಿ ನಡೆಸುತ್ತಿರುವ ಬಗ್ಗೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಮುಂದಾದ ವೇಳೆ ನಗರಸಭೆ ೫ನೇ ವಾರ್ಡ್ ಸದಸ್ಯ ಮಧುಕುಮಾರ್ ರಾಜ್ ಅರಸ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು. ಈ ವೇಳೆ ಕೈಯಲ್ಲಿದ್ದ ಮೊಬೈಲ್ ಗೆ ಹಾನಿಯಾಗಿದೆ.

೫೦ ಗ್ರಾಂ. ಚಿನ್ನದ ಚೈನ್ ಕತ್ತಿನಿಂದ ಬಿದ್ದಿದೆ. ರಾಡ್ ಹಾಗೂ ಮಾರಕಾಸ್ತ್ರಗಳಿಂದ ಹೊಡೆಯಲು ಯತ್ನಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಗಲಾಟೆ ನಡೆಯುವ ಬಗ್ಗೆ ಮೊದಲೇ ಡಿವೈಎಸ್‌ಪಿಯವರಿಗೆ ಸೂಚನೆ ಇದ್ದರೂ ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದಿದ್ದಾರೆ.

A case has been filed against seven people by the chairman of the municipal council

About Author

Leave a Reply

Your email address will not be published. Required fields are marked *