September 20, 2024

ಸುಸಜ್ಜಿತ ಕೇಂದ್ರೀಯ ವಿದ್ಯಾಲಯ ನೂತನ ಕಟ್ಟಡ ಲೋಕಾರ್ಪಣೆ

0
ಸುಸಜ್ಜಿತ ಕೇಂದ್ರಿಯ ವಿದ್ಶಾಲಯ ನೂತನ ಕಟ್ಟಡ ಲೋಕಾರ್ಪಣೆ

ಸುಸಜ್ಜಿತ ಕೇಂದ್ರಿಯ ವಿದ್ಶಾಲಯ ನೂತನ ಕಟ್ಟಡ ಲೋಕಾರ್ಪಣೆ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಹಲವು ದಶಕಗಳ ಬೇಡಿಕೆಯಾಗಿದ್ದ ಕೇಂದ್ರಿಯ ಶಾಲೆಗೆ ಸುಸಜ್ಜಿತ ಕಟ್ಟಡ ಲೋಕಾರ್ಪಣೆ ಆಗುವ ಮೂಲಕ ಬಹುದಿನದ ಕನಸು ಈಡೇರಿದಂತಾಗಿದೆ.

ನಗರಕ್ಕೆ ಸಮೀಪದ ಕದ್ರಿಮಿದ್ರಿಯಲ್ಲಿ ನಿರ್ಮಾಣವಾಗಿರುವ ಕೇಂದ್ರಿಯ ಶಾಲೆಯ ಭವ್ಯ ಕಟ್ಟಡವನ್ನು ಜಮ್ಮು ಕಾಶ್ಮೀರದಲ್ಲಿ ಏರ್ಪಡಿಸಲಾಗಿದ್ದ ವರ್ಚ್ಯುಯಲ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಕೇಂದ್ರಯ ಶಾಲೆಗಳೊಂದಿಗೆ ಈ ಜಿಲ್ಲೆಯ ಕೇಂದ್ರಿಯ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುಯಲ್ ಕಾರ್ಯಕ್ರಮದ ಮೂಲಕ ಶಾಲಾಕಟ್ಟಡ ಲೋಕಾರ್ಪಣೆ ಮಾಡುತ್ತಿದ್ದಂತೆಯೇ ಶಾಲಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವರಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾಕರಂದ್ಲಾಜೆ ಅವರು ಉದ್ಘಾಟನಾ ಫಲಕವನ್ನು ಅನಾವರಣಾಗೊಳಿಸುವ ಮೂಲಕ ಜಿಲ್ಲಾಕೇಂದ್ರದ ಸುಸಜ್ಜಿತ ಕೇಂದ್ರಿಯ ಶಾಲಾ ಕಟ್ಟಡವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶೋಭಾಕರಂದ್ಲಾಜೆ ಅವರು ಹಲವಾರು ದಶಕಗಳಿಂದ ಕೇಂದ್ರಿಯ ಶಾಲೆ ಆರಂಭಕ್ಕೆ ಬೇಡಿಕೆ ಇದ್ದು ೨೦೧೪ರಲ್ಲಿ ನರೇಂದ್ರ ಮೀದಿ ನೇತೃತ್ವದ ಸರ್ಕಾರ ನವೋದಯ ಮತ್ತು ಕೇಂದ್ರಿಯ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಹಾಗೂ ರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡಬೇಕೆಂದು ತೀರ್ಮಾನ ಕೈಗೊಂಡಿದ್ದರಿಂದ ಇಲ್ಲಿಗೆ ಕೇಂದ್ರಿಯ ಶಾಲೆಯನ್ನು ಮಂಜೂರು ಮಾಡಿತೆಂದು ವಿವರಿಸಿದರು.

ಕೇಂದ್ರದಿಂದ ಮಂಜೂರಾದ ಶಾಲೆಗೆ ಜಿಲ್ಲಾಡಳಿತ ಜಮೀನು ಒದಗಿಸಿದ್ದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಭಿನಂದಿಸಿದ ಸಂಸದರು ಕೇಂದ್ರದಿಮದ ಹಣ ಕೊಡಿಸಬಹುದು ಆದರೆ ಜಮೀನು ಸಿಗದಿದ್ದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಹಕಾರ ಪ್ರಶಂಸನೀಯ ಎಂದರು.

ಬಡವರು, ಸಾಮಾನ್ಯರು ಎಲ್ಲಾ ವರ್ಗದ ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಶಿಕ್ಷಣ ದೊರೆಯಲು ಈ ಶಾಲೆಯಿಂದ ಅನುಕೂಲವಗಲಿದೆ ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ಈ ಶಾಲೆಗೆ ಅಗತ್ಯ ಸೌಲಭ್ಯ ನೀಡಬೇಕೆಂದು ಸೂಚಿಸಿದರು.

ಈ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ೪೦೦ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಬೇಲೂರು ಚಿಕ್ಕಮಗಳೂರು ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಇಡೀ ರಾಜ್ಯದಲ್ಲಿ ಈ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬಂದಿರುವಷ್ಟು ಹಣ ಬೇರಾವ ಜಿಲ್ಲೆಗೂ ಬಂದಿಲ್ಲ ಎಂದು ಹೇಳಿದರು.

ಕೇಂದ್ರಿಯ ಶಾಲೆ ಉದ್ಘಾಟನೆಯಾಗಿರುವುದು ಈ ಜಿಲ್ಲೆಯ ಅನೇಕ ಮಕ್ಕಳಿಗೆ ಅನುಕೂಲವಾಗಲಿದ್ದು ಇಲ್ಲಿ ಕಲಿತ ಮಕ್ಕಳು ಇಡೀ ದೇಶಕ್ಕೆ ಮಾದರಿಯಾಗುವಮತೆ ಶಿಕ್ಷಣ ನೀಡುವಂತೆ ಸಿಬ್ಬಂದಿಯರಿಗೆ ಕಿವಿ ಮಾತು ಹೇಳಿದ ಶೋಭಾಕರಂದ್ಲಾಜೆ ಅವರು ಇದೀಗ ೩೦ ವಿದ್ಯಾರ್ಥಿಗಳ ತರಗತಿ ನಡೆಸುತ್ತಿದ್ದು ಹೆಚ್ಚವರಿಯಾಗಿ ಇನ್ನೂ ಒಂದು ತರಗತಿ ಆರಂಭಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಇಂತಹ ಭವ್ಯ ಕಟ್ಟಡದ ಕೇಂದ್ರಿಯ ಶಾಲೆ ಆರಂಭವಾಗಿರುವುದು ಇಡೀ ಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ. ೨೦೧೪ ರಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಆಗುವವರೆಗೆ ಶ್ರಮಿಸಿರುವ ಸಂಸದೆ ಶೋಭಾಕರಂದ್ಲಾಜೆ ಅವರಿಗೆ ಅಭಿನಂದಿಸಿದರಲ್ಲದೆ ಯಾವುದೇ ಪಕ್ಷದವರಾಗಲಿ ಅಭಿವೃದ್ಧಿ ಕೆಲಸ ಮಾಡುವವರನ್ನು ಗೌರವಿಸಿ ಪ್ರೋತ್ಸಾಹಿಸಬೇಕೆಂದರು.

ಕೇಂದ್ರಿಯ ಶಾಲೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕೇಂದ್ರಿಯ ಶಾಲೆಯ ಒಕ್ಕೂಟದ ಆಯುಕ್ತರಾದ ಧರ್ಮೆಂದ್ರ ಚಾಗಲೆ, ಸಹಾಯಕ ಆಯುಕ್ತರಾದ ಶ್ರೀಮತಿ ಹೇಮಾ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|| ಬಿ. ಗೋಪಾಲಕೃಷ್ಣ, ಪೋಲೀಸ್ ವರಿಷ್ಠಾಧಿಕಾರಿ ಡಾ|| ವಿಕ್ರಮ ಅಮಟೆ ಮತ್ತಿತರರು ಭಾಗವಹಿಸಿದ್ದರು.

Inauguration of the well-equipped Kendriya Vidyalaya new building

About Author

Leave a Reply

Your email address will not be published. Required fields are marked *