September 20, 2024

ಬೆಳವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಮ್ಮ ಆಯ್ಕೆ

0
ಬೆಳವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಮ್ಮ ಆಯ್ಕೆ

ಬೆಳವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಮ್ಮ ಆಯ್ಕೆ

ಚಿಕ್ಕಮಗಳೂರು:  ತಾಲ್ಲೂಕಿನ ಬೆಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿ ಚುನಾವಣೆಗೆ ಭಾರೀ ಪೈಪೋಟಿ ನಡುವೆ ಅಂತಿಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಮ್ಮ ಅವರು ೭ ಮತಗಳನ್ನು ಗಳಿಸಿ ಕೊಳ್ಳುವ ಮುಖಾಂತರ ಅಧ್ಯಕ್ಷರಾಗಿ ಆಯ್ಕೆಗೊಂಡು ಮಂಗಳವಾರ ಗೆಲುವಿನ ನಗೆ ಬೀರಿದರು.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾವೇರಮ್ಮ ಮತ್ತು ಸಿರಾಜ್ ಉನ್ನಿ ಸಾ ಅವರು ನಾಮಪತ್ರ ಸಲ್ಲಿಸಿದ್ದರು. ಅಂತಿಮ ಹಣಾಹಣಿಯಲ್ಲಿ ೧೩ ಸದಸ್ಯರ ಪೈಕಿ ಕಾವೇರಮ್ಮ ೭ ಹಾಗೂ ಸಿರಾಜ್ ಉನ್ನಿಸಾ ೫ ಮತಗಳನ್ನು ಪಡೆದುಕೊಂಡರು. ಒಂದು ಮತ ಅಸಿಂಧುವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯ ರ್ಥಿ ಕಾವೇರಮ್ಮ ಅವರನ್ನು ಚುನಾವಣಾಧಿಕಾರಿ ಸಿ.ಸುಜಾತ ಅಧಿಕೃತವಾಗಿ ಘೋಷಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್.ಭಾಗ್ಯ ಓರ್ವರು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಬಳಿಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಬಿಜೆಪಿ ಚುನಾವಣಾ ಬಂದ ವೇಳೆಯಲ್ಲಿ ಮಾತ್ರ ರಾಜಕಾರಣ ಮಾಡುತ್ತೇವೆ, ಅದಾದ ಬಳಿಕ ಪಕ್ಷಾ ತೀತವಾಗಿ ಗ್ರಾಮಗಳ ಅಭಿವೃಧ್ದಿ ಎಲ್ಲರನ್ನು ಒಳಗೊಂಡಂತೆ ಕಾರ್ಯನಿರ್ವಹಿಸಲು ಸಂಸ್ಕೃತಿ ಹಾಗೂ ಬದ್ದತೆ ಬಿಜೆಪಿ ಕಲಿಸಿದೆ ಎಂದರು.

ಕಳೆದ ಬಾರಿ ಮೀಸಲಾತಿ ಸಮಸ್ಯೆಯಿಂದ ಅಧ್ಯಕ್ಷ ಸ್ಥಾನವು ಕೈತಪ್ಪಿತು. ಇದೀಗ ಮತ್ತೊಮ್ಮೆ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ತೆಕ್ಕೆಗೆ ತರುವಲ್ಲಿ ಕಾರ್ಯಕರ್ತರ ಶ್ರಮ ಹಾಗೂ ಗ್ರಾ.ಪಂ. ಸದಸ್ಯರ ಅಮೂಲ್ಯ ಮತ ದಿಂದ ಲಭಿಸಿದ್ದು ಈ ಗೆಲುವನ್ನು ಗ್ರಾಮಸ್ಥರು ಹಾಗೂ ಮಾಜಿ ಸಚಿವ ಸಿ.ಟಿ.ರವಿಯವರಿಗೆ ಅರ್ಪಿಸುವ ಕೆಲಸ ಮಾ ಡಲಾಗಿದೆ ಎಂದು ಹೇಳಿದರು.

ದೇಶದ ಪ್ರಧಾನ ಮಂತ್ರಿ ಮೋದಿ ಸಾಧನೆ ಹಾಗೂ ರಾಜ್ಯ ನಾಯಕರುಗಳು ಜಿಲ್ಲೆಗೆ ನೀಡಿರುವ ಕೊಡುಗೆ ಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷಾತೀತವಾಗಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕಾರ್ಯನಿರ್ವಹಿಸುವ ರೆಂಬ ನಂಬಿಕೆಯಿದೆ. ಆ ದಿಕ್ಕಿನಲ್ಲಿ ಎಲ್ಲರೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಹೆಜ್ಜೆಯನ್ನು ಇಡಲಾ ಗುವುದು ಎಂದು ತಿಳಿಸಿದರು.

ಪ್ರಸ್ತುತ ಬೆಳವಾಡಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ಬಾಕಿಯಿವೆ. ಅನೇಕ ವರ್ಷಗಳ ಬಸ್‌ನಿಲ್ದಾಣದ ಬೇಡಿಕೆಯಿದೆ. ಜೊತೆಗೆ ಗ್ರಾಮವು ಅತ್ಯಂತ ಪುರಾತನ ಸಂಸ್ಕೃತಿ ಹೊಂದಿರುವ ಗ್ರಾಮವಾಗಿದ್ದು ಉದ್ಬವ ಗಣಪತಿ ಹಾಗೂ ಶ್ರೀ ವೀರನಾರಾಯಣ ಸ್ವಾಮಿ ದೇವಾಲಯ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ತಾಣವಾಗಿದೆ ಎಂದರು.

ನೂತನ ಅಧ್ಯಕ್ಷೆ ಕಾವೇರಮ್ಮ ಮಾತನಾಡಿ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಹಾಗೂ ಕಾರ್ಯಕರ್ತ ರ ಬೆಂಬಲದಿಂದ ೭ ಮತಗಳ ಪಡೆದುಕೊಂಡಿದ್ದು ೨ ಮತಗಳ ಅಂತರದಲ್ಲಿ ಜಯಸಾಧಿಸಲಾಗಿದೆ. ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ತೊಡಕಾಗದಂತೆ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸವನ್ನು ಪರಿಗಣಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಬಿ.ಬಿ.ಧನುಕುಮಾರ್, ಬಿ.ಎಂ.ನಾಗರಾಜ್, ಬಿ.ಎಂ.ಪ್ರದೀಪ್, ಹೆಚ್.ಎಸ್.ಕಲ್ಪನಾ, ಗೌರಮ್ಮ, ಬಿ.ಬಿ.ರಂಗಸ್ವಾಮಿ, ಚಂದ್ರಮ್ಮ, ರೇಣುಕಾ, ಜಯಲಕ್ಷ್ಮೀ, ಜಿ.ಸಿ.ಪರಮೇಶ್ವರಪ್ಪ, ತಾ.ಪಂ. ಮಾಜಿ ಸದಸ್ಯ ಬಸವರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಗ್ರಾಮಸ್ಥರಾದ ಗಂಗಾಧರಪ್ಪ, ದಾಸಬೋವಿ, ರಾಮಾಬೋವಿ, ಹೊನ್ನಬೋವಿ, ಶಂಕರನಾಯ್ಕ್, ಪಿಡಿಓ ಸಿ.ಎಸ್.ವಿಶ್ವನಾಥಯ್ಯ ಮತ್ತಿತರರು ಹಾಜರಿದ್ದರು.

BJP-backed candidate Kaveramma has been selected for the post of president of Belawadi Gram Panchayat

About Author

Leave a Reply

Your email address will not be published. Required fields are marked *