September 20, 2024

ವ್ಯವಹಾರಿಕ ಜ್ಞಾನ ಮುಂದಿನ ಜೀವನ ಉತ್ತುಂಗಕ್ಕೆ ಸಹಕಾರಿ

0
ಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ

ಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ

ಚಿಕ್ಕಮಗಳೂರು:  ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯ ದೊಂದಿಗೆ ವ್ಯವಹಾರಿಕ ಜ್ಞಾನ ಬೆಳೆಸಿದರೆ ಅವರ ಮುಂದಿನ ಜೀವನ ಉತ್ತುಂಗಕ್ಕೆ ಸಾಗಲು ಸಹಕಾರಿಯಾಗಲಿದೆ ಎಂದು ಶಂಕರ ವಿದ್ಯಾಮಂದಿರದ ಅಧ್ಯಕ್ಷ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ನಲ್ಲೂರು ಸಮೀಪದ ಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ವ್ಯವಹಾರಿಕ ಜ್ಞಾನವೂ ಮುಖ್ಯ. ಸಂತೆಯಲ್ಲಿ ಮಕ್ಕಳು ಭಾಗವಹಿಸುವುದರಿಂದ ವ್ಯವಹಾರಿಕ ಜ್ಞಾನ ಹೆಚ್ಚಲು ಸಹಕಾರಿಯಾಗಿದೆ. ಮಕ್ಕಳಿ ವಿದ್ಯಾಭ್ಯಾಸದೊಂದಿಗೆ ಏನನ್ನಾ ದರೂ ಸಾಧಿಸಲು ಅವಕಾಶಗಳು ಅಗತ್ಯ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವ್ಯವಹಾರಿಕ ಜ್ಞಾನವನ್ನು ವೃದ್ದಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನ ಮೂಡಿಸಬೇಕು. ಮಕ್ಕಳಿಗೆ ಸಂತೆ ಅತ್ಯುತತಮವಾಗಿದ್ದು ರೈತರು ಒಂದೊಂದು ಬೆಳೆ ಬೆಳೆಯವುದರ ಹಿಂದೆ ಎಷ್ಟು ಪರಿಶ್ರಮಿವಿದೆ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನದ ಕೊರತೆಯಿದೆ. ಕೇವಲ ಶಾಲೆ, ಪಠ್ಯಪುಸ್ತಕಗಳ ಅಧ್ಯ ಯನ ಮಾತ್ರಕ್ಕೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಹಾಗೂ ಸಮಾಜದಲ್ಲಿ ಮುಕ್ತವಾಗಿ ಬದುಕುವ ದೃಷ್ಟಿಯಿಂದ ಶಾಲೆ ವತಿಯಿಂದ ಪ್ರತಿವರ್ಷವು ವ್ಯವಹಾರಿಕ ಜ್ಞಾನದ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾಮಂದಿರದ ಟ್ರಸ್ಟಿ ಅಶೋಕ್‌ಕುಮಾರ್ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳ ಸಂತೆ ಏರ್ಪಡಿಸಿ ಸ್ವತಃ ಮಕ್ಕಳೆ ಬಗೆ ಬಗೆ ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಮಾರಾಟ ಮಾಡಿ ಕಡಿಮೆ ಬಂಡ ವಾಳದಲ್ಲಿ ಹೆಚ್ಚು ಲಾಭ ಗಳಿಸುವ ಕೌಶಲ್ಯ ಮೂಡಿಸಿಕೊಳ್ಳಲು ಸಹಕಾರಿಯಗಲಿದೆ ಎಂದರು.

ಇದೇ ವೇಳೆ ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ತರಕಾರಿಗಳು, ಸೊಪ್ಪು, ಪಾನಿಪುರಿ, ಹಣ್ಣುಹಂಪಲು, ಮಜ್ಜಿಗೆ, ಬೊಂಟಿ ಪದಾರ್ಥಗಳನ್ನಿಟ್ಟುಕೊಂಡು ಮಕ್ಕಳು ಗ್ರಾಹಕರನ್ನು ಕರೆಯುತ್ತಿರುವುದು ಗಮನಸೆಳೆಯುತ್ತಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಖಾಸಗೀ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ನಂದಕುಮಾರ್, ಶಂಕರ ವಿದ್ಯಾ ಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದ್ರಮುನಿ, ಮುಖ್ಯಶಿಕ್ಷಕರಾದ ಮಮತಾ, ಸುಹಾಸ್, ಸಹ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Children’s Santhe program organized for the students of Shankara Vidyamandir School

About Author

Leave a Reply

Your email address will not be published. Required fields are marked *