September 20, 2024

ಫೆ.೨೪ ಕ್ಕೆ ಕಲಾಮಂದಿರದಲ್ಲಿ ಕಲ್ಕಟ್ಟೆ ಕನ್ನಡ ನೃತ್ಯ ನಮನ

0
ಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ಜಿ.ರಮೇಶ್ ಸುದ್ದಿಗೋಷ್ಠಿ

ಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ಜಿ.ರಮೇಶ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಯಾದ ಕಲ್ಕಟ್ಟೆ ಪುಸ್ತಕದ ಮನೆಗೆ ೨೧ ವೆರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಫೆ.೨೪ರಂದು ಶನಿವಾರ ಸಂಜೆ ೬ ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಕಲ್ಕಟ್ಟೆ ಕನ್ನಡ ನೃತ್ಯ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ಜಿ.ರಮೇಶ್ ಕಲ್ಕಟ್ಟೆ ಪುಸ್ತಕ ಮನೆ, ಲಯನ್ ಸಂಸ್ಥೆಗೆ ೫೦ ರ ಸಂಭ್ರಮ ಹಾಗೂ ಯಕ್ಷ ಸಿರಿ ನಾಟ್ಯ ವೃಂದ ಹಾಗೂ ಕೆನರಾ ಬ್ಯಾಂಕ್ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಖ್ಯಾತ ಚಲನಚಿತ್ರ ಜಲಪಾತದ ನಾಯಕಿ ನಟಿ ನಾಗಶ್ರೀಬೇಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಡಿ.ಅನಿಲ್‌ಕುಮಾರ್ ಆಶಯ ನುಡಿಯಾಡಲಿದ್ದಾರೆ.

ಇದೇ ವೇಳೆ ರಾಜ್ಯದ ಖ್ಯಾತ ನಿರೂಪಕಿ ಯುವ ಕವಿಯತ್ರಿ ಹಂಪಿ ವಿ.ವಿಯಿಂದ ಇತ್ತೀಚಿಗೆ ಪಿಹೆಚ್‌ಡಿ ಪದವಿ ಪಡೆದ ಬೆರಣಗೋಡಿನ ನಮನ ಬಿ.ಎನ್ ಹಾಗೂ ಜಲಪಾತ ಚಲನಚಿತ್ರದಲ್ಲಿ ಅಮ್ಮಮ್ಮ ಆಗಿ ರಾಜ್ಯವೇ ಮೆಚ್ಚುವಂತೆ ಅಭಿನಯಿಸಿದ ರೇಖಾ ಪ್ರೇಮ್‌ಕುಮಾರ್ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ನೃತ್ಯ ನಮನ ವಿಭಾಗದಲ್ಲಿ ಶೃಂಗೇರಿಯ ನಾಟ್ಯ ವೈಭವ ನೃತ್ಯ ಅಕಾಡೆಮಿ. ಚಿಕ್ಕಮಗಳೂರಿನ ಶ್ರೀಕಂಠೇಶ್ವರ ಕಲಾಮಂದಿರ ಹಾಗೂ ಭರತ ಕಲಾ ಕ್ಷೇತ್ರದ ಕಲಾವಿದರು ಸಾಹಿತಿ ಹೆಚ್.ಎಂ ನಾಗರಾಜ್ ರಾವ್ ಕಲ್ಕಟ್ಟೆ ವಿರಚಿತ ಎಸ್.ವಿ ಬಾಲಸುಬ್ರಮಣ್ಯಂ, ಪಿ ಸುಶೀಲ, ರಾಜೇಶ್ ಕೃ?ನ್, ರಶ್ಮಿ ಚಿಕ್ಕಮಗಳೂರು, ವೈ?ವಿ ಎನ್.ರಾವ್ ಹಾಡಿದ ೧೦ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ನೃತ್ಯ ಕ್ಷೇತ್ರದ ಸಾಧನೆಗಾಗಿ ನೃತ್ಯ ಗುರುಗಳಾದ ವೀಣಾ ಅರವಿಂದ್, ವಿದುಷಿ ಸುಮನಾ ರಾಮಚಂದ್ರ, ವಿದುಷಿ ಸುನೀತಾ ನವೀನಗೌಡ ಅವರನ್ನು ಗೌರವಿಸಲಾಗುವುದು. ಡಾ. ಜೆ.ಪಿ ಕೃ?ಗೌಡ, ರೇಖಾ ನಾಗರಾಜ್ ರಾವ್, ಪರಮೇಶ್ವರ, ಜಿ.ರಮೇಶ್ ಉಪಸ್ಥಿತರಿರುತ್ತಾರೆ ಎಂದರು.

Calcutta Kannada dance tribute at Kalamandir on February 24

About Author

Leave a Reply

Your email address will not be published. Required fields are marked *