September 19, 2024

Voter List Addition Special Campaig: ಮತದಾರರ ಪಟ್ಟಿ ಸೇರ್ಪಡೆ ವಿಶೇಷ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ:

0

ಚಿಕ್ಕಮಗಳೂರು: ಚುನವಣಾ ಆಯೋಗ ವೇಳಪಟ್ಟಿ ಅನುಸಾರ ನವೆಂಬರ್ ೨೦ರಂದು ವಿಶೇಷ ಅಭಿಯಾನದಡಿ ೧೫೫ ಮತ್ತು ೧೫೭ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಭೇಟಿ ನೀಡಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನಕ್ಕೆ ಚಾಲನೇ ನೀಡಿ ಮಾತನಾಡಿದ ಅವರು ಭಾನುವಾರ ನಗರದ ೧೫೫ ಮತ್ತು ೧೫೭ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿ ಬಿಎಲ್‌ಓಗಳಿಗೆ ಸೂಚನೆ ನೀಡಿದರು.

ಚುನಾವಣೆಯನ್ನು ಉತ್ತಮವಾಗಿ ನಡೆಸಬೇಕಿದ್ದರೆ ಮತದಾರರ ಪಟ್ಟಿಯ ಗುಣಮಟ್ಟ ಅತೀ ಮುಖ್ಯವಾಗಿದೆ. ಮತದಾರರ ಪಟ್ಟಿ ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಉತ್ತಮ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಮತದಾನದ ದಿನಾಂಕದಂದು ಹೆಸರು ತೆಗೆದು ಹಾಕಿದ್ದಾರೆ, ಹೊಸ ಸೇರ್ಪಡೆಯಾಗಿದೆ, ಆ ವ್ಯಕ್ತಿಯೇ ಇಲ್ಲ, ಬೋಗಸ್ ಮತದಾನ ಮಾಡಿದ್ದಾರೆ ಎಂಬೆಲ್ಲ ದೂರುಗಳು ಬರುತ್ತದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳು, ಸಾರ್ವಜನಿಕರು, ಬಿಎಲ್‌ಓಗಳು ಮುಂಚಿತವಾಗಿ ಮಾಹಿತಿ ನೀಡಿದರೆ ಸರಿಪಡಿಸಲು ಅನುವಾಗುತ್ತದೆ ಎಂದು ಅವರು ಹೇಳಿದರು.

ಜ.೫ ರಂದು ಅಂತಿಮ ಮತದಾರ ಪಟ್ಟಿ ಪ್ರಕಟವಾಗುವ ಹಿನ್ನೆಲೆ ಡಿಸೆಂಬರ್ ೮ ರವರೆಗೂ ಮತದಾರರ ಸೇರ್ಪಡೆ ಮತ್ತು ರದ್ದುಪಡಿಸಲು ಅರ್ಜಿ ನೀಡಿದರೆ ಅನುಕೂಲವಾಗುತ್ತದೆ. ಚುನಾವಣೆ ನಡೆಯುವ ಸಮಯದ ವರೆಗೂ ಈ ಪ್ರಕ್ರಿಯೆ ನಿರಂತರವಾಗಿ ಚಾಲನೆಯಲ್ಲಿರುತ್ತದೆ. ಸಮಸ್ಯೆಗಳಿದ್ದರೆ ಬಿಎಲ್‌ಓಗಳಿಂದ ಅರ್ಜಿ ಪಡೆದು ನಂತರ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದೆಂದು ಮಾರ್ಗದರ್ಶನ ಪಡೆದರೆ ಮತದಾನಕ್ಕೆ ಅನುಕೂಲವಾಗುತ್ತದೆ. ಆಧಾರ್ ಲಿಂಕ್‌ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೇಳಿರುವ ಸೂಚನೆಗಳನ್ನು ಮತದಾರರಿಗೆ ತಿಳಿಸಿ ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ ಎಂದರು.

೧೫೫ ಮತ್ತು ೧೫೭ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿದಾಗ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ, ತೆಗೆದು ಹಾಕುವುದು, ಮೃತಪಟ್ಟವರು ಸೇರಿದಂತೆ ಬಿಎಲ್‌ಓಗಳು ವ್ಯವಸ್ಥಿತ ಮಾಹಿತಿ ಕಲೆಹಾಕಿ ಉತ್ತಮ ಕೆಲಸ ಮಾಡಿದ್ದಾರೆ.

ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಗಳು ಇದ್ದಾರೊ ಇಲ್ಲವೊ ಎಂಬ ಮಾಹಿತಿ ಕಲೆಹಾಕಿ ತಕ್ಷಣದಲ್ಲೇ ಗುರುತುಮಾಡಿ, ಪ್ರತಿಯೊಂದು ಕುಟುಂಬದಲ್ಲೂ ಹೊಸದಾಗಿ ವ್ಯಕ್ತಿಗಳು ಸೇರ್ಪಡೆಗೊಳ್ಳುವವರಿದ್ದರೆ ಅವರ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ಬರೆದುಕೊಂಡು ನಮೂನೆ ೬ನ್ನು ಪಡೆಯಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆಗೆದುಹಾಕುವುದು, ತಿದ್ದುಪಡಿ ಮತ್ತು ವಾಸವಿಲ್ಲದವರ ಮಾಹಿತಿಯನ್ನು ಪ್ರತ್ಯೇಕ ನಿರ್ವಹಣೆ ಮಾಡಿದರೆ ಡಿಲೀಷನ್ ಮಾಡಿ ಪಟ್ಟಿ ಸರಿಮಾಡಲು ಹೆಚ್ಚು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.

ಬಿಎಲ್‌ಗಳು ಮನೆಗಳಿಗೆ ಬೇಟಿ ನೀಡುವ ಸಂದರ್ಭ ಹೊಸ ಸೇರ್ಪಡೆಗೆ ಅರ್ಜಿ, ವಯಸ್ಸು ದೃಢೀಕರಣ ಪತ್ರ, ಸರಿಯಾದ ವಿಳಾಸದ ವಿವರ ನೀಡಿದರೆ ಪರಿಶೀಲಿಸಿ ವ್ಯಕ್ತಿ ಅಲ್ಲೆ ವಾಸವಿದ್ದರೆ ಸೇರ್ಪಡೆ ಮಾಡುತ್ತಾರೆ. ಮತದಾರರ ಪಟ್ಟಿಯಲ್ಲಿರುವವರು ವಾಸವಿಲ್ಲದೆ ವಲಸೆ ಹೋಗಿದ್ದರೆ ವ್ಯಕ್ತಿ ಮೃತಪಟ್ಟಿದ್ದರೆ, ಬೇರೆಡೆ ಕೆಲಸ ಮಾಡುತ್ತಿದ್ದರೆ ಅಥವಾ ಸ್ಥಳಾಂತರವಾಗಿದ್ದರೆ ಡಿಲೀಟ್ ಮಾಡುವ ಕಾರಣಕ್ಕೆ ಬಿಎಲ್‌ಓಗಳು ಅಂತಹ ಹೆಸರು ಪಟ್ಟಿ ಮಾಡುವ ಜೊತೆ ಪ್ರತ್ಯೇಕ ರಿಜಿಸ್ಟರ್ ನಿರ್ವಹಣೆ ಮಾಡಿ ನಮೂನೆ ೭ ಅರ್ಜಿ ಸಂಗ್ರಹ ಮಾಡಬೇಕು. ಮತದಾರರ ಪಟ್ಟಿಯಲ್ಲಿ ವ್ಯಕ್ತಿಗಳ ಸ್ಪಷ್ಟ ಚಿತ್ರ ಕಾಣದಿದ್ದರೆ ಬದಲು ಮಾಡಲು ಅವರಿಂದ ಗುಣಮಟ್ಟದ ಫೋಟೋ ಸಂಗ್ರಹಿಸಿ ಅಳವಡಿಸಬೇಕು, ತಿದ್ದುಪಡಿಯಾಗಬೇಕಿದ್ದರೆ ನಮೂನೆ ೮ನ್ನು ಪಡೆದು ಸರಿಪಡಿಸುವ ಕಾರ್ಯ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ಹೈದರಾಬಾದ್ ನಿಂದ ಮತಯಂತ್ರಗಳು ಈಗಾಗಲೆ ಬಂದಿದ್ದು ಎಲ್ಲಾ ರಾಜಕೀಯ ಪಕ್ಷದವರ ಸಮಕ್ಷಮದಲ್ಲೆ ವಿಡೀಯೋ ಚಿತ್ರೀಕರಣದ ಸಮೇತ ಮತಯಂತ್ರಗಳನ್ನು ವ್ಯವಸ್ಥಿತವಾಗಿಟ್ಟು ಸೀಲ್ ಮಾಡಿ ಇಎಂಎಸ್ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಪಾರದರ್ಶಕವಾಗಿರುವ ಬಗ್ಗೆ ರಾಜಕೀಯ ಪಕ್ಷದವರು ಖಾತರಿ ಪಡಿಸಿಕೊಂಡಿದ್ದಾರೆ ಎಂದರು.
ತಹಸೀಲ್ದಾರ್ ವಿನಾಯಕ್ ಸಾಗರ್, ಪೌರಾಯುಕ್ತ ಬಿ.ಸಿ.ಬಸವರಾಜ್, ಬಿಎಲ್‌ಓ ಮಂಜುನಾಥ್, ಸಿದ್ದಮರಿಯಪ್ಪ, ಪರಮೇಶ್ವರಪ್ಪ ಇದ್ದರು.

Voter List Addition Special Campaign

About Author

Leave a Reply

Your email address will not be published. Required fields are marked *

You may have missed