September 20, 2024

ಗೌರವಧನ ಹೆಚ್ಚಳಗೊಳಿಸದೇ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

0
ಗೌರವಧನ ಹೆಚ್ಚಳಗೊಳಿಸದೇ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಗೌರವಧನ ಹೆಚ್ಚಳಗೊಳಿಸದೇ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿಗಳಲ್ಲಿ ಹಲವಾರು ದಶಕಗಳಿಂದ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳಗೊಳಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರುಗಳ ಫೆಡರೇಷನ್ ವತಿಯಿಂದ ಶಾಸಕ ಹೆಚ್.ಡಿ.ತಮ್ಮಯ್ಯ ಕಚೇರಿಯ ಮುಂಭಾಗದಲ್ಲಿ ಬುಧ ವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಗ್ರೇಟ್ಟ ಫರ್ನಾಂಡೀಸ್ ಕಾರ್ಯಕರ್ತೆಯರ ಬೇಡಿಕೆ ಗಳನ್ನು ನಿಗಧಿತ ಸಮಯದೊಳಗೆ ಈಡೇರಿಸದಿದ್ದಲ್ಲಿ ಅಂಗನವಾಡಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ವಾರಗಟ್ಟಲೇ ಬಂದ್‌ಗೊಳಿಸಿ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಹೆಚ್ಚಿ ಸುವ ಆರನೇ ಗ್ಯಾರಂಟಿಯನ್ನು ಪ್ರಿಯಾಂಕಾ ಗಾಂಧಿ ರ್‍ಯಾಲಿಯ ವೇಳೆಯಲ್ಲಿ ಘೋಷಿಸಿ ಪ್ರಣಾಳಿಕೆಯಲ್ಲೂ ಪ್ರಸ್ತಾ ಪಿಸಲಾಗಿದ್ದರೂ ಕೂಡಾ ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರ ಮೂಡಿಸಿದೆ ಎಂದರು.

ಪ್ರಸ್ತಕ್ತ ಸಾಲಿನಲ್ಲಿ ರಾಜ್ಯಸರ್ಕಾರ ಬಜೆಟ್‌ಗೆ ಅನುಮೋದನೆ ಪಡೆಯುವ ಮುನ್ನ ಆರನೇ ಗ್ಯಾರಂಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ೧೫ ಸಾವಿರ ಮತ್ತು ಸಹಾಯಕಿಯರಿಗೆ ೧೦ ಸಾವಿರ ಗೌರವಧನವನ್ನು ಹೆಚ್ಚಿಸ ಬೇಕು. ನಿವೃತ್ತರಿಗೆ ಇಡುಗಂಟನ್ನು ಕನಿಷ್ಟ ೩ ಲಕ್ಷ ರೂ.ಗೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಬಹುತೇಕ ಮಹಿಳಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳದ ಮೂಲಕ ಇಡೀ ಕುಟುಂಬ ನಿರ್ವಹಿಸಬೇ ಕಾಗಿದೆ. ಮಕ್ಕಳ ವಿದ್ಯಾಭ್ಯಾಸ, ಬಾಡಿಗೆ ಹಾಗೂ ದಿನೋಪಯೋಗಿ ವಸ್ತುಗಳ ಖರೀದಿಸಬೇಕಾಗಿದೆ. ಇದೇ ವೃತ್ತಿ ಯಲ್ಲಿರುವ ಕೆಲವು ವಿಧವೆ ಮಹಿಳೆಯರು ಮಾಸಿಕ ಸಂಬಳವನ್ನು ಅವಲಂಬಿಸಿದ್ದು ಹೆಚ್ಚಳಗೊಳಿಸಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜು ಮಾತನಾಡಿ ಅಂಗನವಾಡಿ ಸಿಬ್ಬಂದಿಗಳ ಬೇಡಿಕೆ ಗಳನ್ನು ಈಡೇರಿಸುತ್ತಿಲ್ಲ, ಬಜೆಟ್‌ನಲ್ಲೂ ಗೌರವಧನ ಹೆಚ್ಚಿಸುವ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದರಿಂದ ರಾಜ್ಯಾ ದ್ಯಂತ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾರ್ಯಕರ್ತರಿಗೆ ತೀವ್ರ ನಿರಾಸೆಯುನ್ನುಂಟು ಮಾಡಿರುವ ಹಿನ್ನೆಲೆ ಯಲ್ಲಿ ಮುಂದಿನ ಚುನಾವಣಾ ಕೆಲಸಕ್ಕೂ ಮಹಿಳಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು ಎಂದು ಹೇಳಿ ದರು.

ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಚತಾ ನಿರ್ವಹಣೆಗಾಗಿ ಸಾದಿಲ್ವಾರು ರೂಪದಲ್ಲಿ ತಿಂಗಳಿಗೆ ೮೩ ರೂ.ಗಳನ್ನು ನೀಡುತ್ತಿದ್ದು ಅವುಗಳನ್ನು ತಡೆಹಿಡಿಯಲಾಗಿದೆ. ಪೋಷಣ್ ಅಭಿಯಾನದಡಿ ಗರ್ಭೀಣಿ ಮಹಿಳೆಯರಿಗೆ ಸೀಮಂತ ನಡೆಸಲು ಹಣಕಾಸಿನ ವ್ಯವಸ್ಥೆಯಿಲ್ಲದಂತಾಗಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಶಾಸಕರ ಕಚೇರಿ ಮುಂಭಾಗದಲ್ಲಿ ನೂರಾರು ಮಹಿಳಾ ಕಾರ್ಯಕರ್ತೆಯರು ಚಳುವಳಿ ನಡೆ ಸುವ ಮೂಲಕ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಏರಿ ಸರ್ಕಾರದ ಗಮನ ಸೆಳೆಯುವ ಮುಖಾಂತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ಗೌರವಾಧ್ಯಕ್ಷ ಗುಣಶೇಖರ್, ತಾಲ್ಲೂಕು ಅಧ್ಯಕ್ಷೆ ಶೈಲಾ ಬಸವರಾಜು, ಕಾರ್ಯದರ್ಶಿ ವಸಂತ ಧರ್ಮೇ ಗೌಡ, ಸದಸ್ಯರುಗಳಾದ ಕುಶಲ, ಗೌರಮ್ಮ, ಧನಲಕ್ಷ್ಮೀ, ಅನುಸೂಯ, ಸಾವಿತ್ರಿ, ಗಿರಿಜಾ, ಅರುಣಾಕ್ಷಿ, ಸಾವಿತ್ರಿ, ಗೀತಾ, ಜಯಶ್ರೀ, ಸುಕನ್ಯ ಮತ್ತಿತರರು ಹಾಜರಿದ್ದರು.

Anganwadi workers protested against the attitude of neglect without increasing honorarium

About Author

Leave a Reply

Your email address will not be published. Required fields are marked *