September 20, 2024

ಇ-ಖಾತಾ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ

0
೨೦ ಲಕ್ಷ ರೂ.ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಭೂಮಿ ಪೂಜೆ

೨೦ ಲಕ್ಷ ರೂ.ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಭೂಮಿ ಪೂಜೆ

ಚಿಕ್ಕಮಗಳೂರು: ಬಹುತೇಕ ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಇರುವ ಇ-ಖಾತಾ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ರಾಂಪುರ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೨೦ ಲಕ್ಷ ರೂ.ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇ-ಖಾತಾ ಸಮಸ್ಯೆ ಬಗ್ಗೆ ತೇಗೂರು ಗ್ರಾಮಪಂಚಾಯಿತಿಯ ಹೆಸರು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ್ದೇನೆ. ತೇಗೂರು ಪಂಚಾಯಿತಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ವಯವಾಗುವಂತೆ ಇ-ಖಾತಾ ಸಮಸ್ಯೆಯ ಬಗೆಹರಿಯಲಿ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಸಚಿವರು ಚರ್ಚಿಸಿದ್ದು ಅಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇ-ಖಾತಾ ಸಮಸ್ಯೆ ಜಟಿಲವಾಗಿರುವ ಕಾರಣ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಆಸ್ತಿ ಮಾರುವಂತಿಲ್ಲ.ಕೊಳ್ಳುವಂತಿಲ್ಲ. ಹೀಗಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲಿದ್ದೇವೆ ಎಂದು ಹೇಳಿದರು.

ರಾಂಪುರದಲ್ಲಿ ಎಸ್‌ಇಪಿ ಅನುದಾನ ೨೦ ಲಕ್ಷ ರೂ ಬಳಸಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ಜನಪ್ರತಿನಿಗಳು ಕಾಲಕಾಲಕ್ಕೆ ಬದಲಾಗಬಹುದು. ಆದರೆ , ಸರಕಾರದ ವ್ಯವಸ್ಥೆ ಹಾಗೆ ಇರುತ್ತದೆ.ಜನಪ್ರತಿನಿಗಳ ಉದ್ದೇಶ ಜನರ ಸೇವೆ ಮಾಡುವುದೇ ಆಗಿದೆ. ಬಾಕ್ಸ್ ಚರಂಡಿಯನ್ನು ಗುಣಮಟ್ಟದ ಜತೆಗೆ ಶಾಶ್ವತವಾಗಿರುವಂತೆ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ನಗರಸಭೆ ಸದಸ್ಯ ಪರಮೇಶರಾಜ್ ಅರಸ್, ತೇಗೂರು ಗ್ರಾಮಪಂಚಾಯಿತಿ ಸದಸ್ಯರಾದ ಶಿವುಪ್ರಸಾದ್, ಶೇಖರ್, ನಾರಾಯಣ್, ಕಾಂಗ್ರೆಸ್ ಮುಖಂಡ ಮಂಜೇಗೌಡ, ಎಂಜಿನಿಯರ್ ಗವಿರಂಗಪ್ಪ ಉಪಸ್ಥಿತರಿದ್ದರು.

A sincere effort to resolve the e-Khata issue

About Author

Leave a Reply

Your email address will not be published. Required fields are marked *