September 19, 2024

He accepted the bjp’s party’s ideology and joined the party; ಅನುದಾನ ತಂದರೆ ತಾವು, ಇಲ್ಲದಿದ್ದರೆ ಕೈತಪ್ಪಿಸಿದೆ ಎಂದು ನಾಟಕ

0

ಎನ್.ಆರ್.ಪುರ:  ಶಾಸಕ ಟಿ.ಡಿ.ರಾಜೇಗೌಡ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಂಡು ಬಹಳ ದಿನಗಳಾಗಿದ್ದು ಅನುದಾನ ತಂದರೆ ತಾವು ಎಂದು, ಇಲ್ಲದಿದ್ದರೆ ಮಾಜಿ ಶಾಸಕರು ಕೈತಪ್ಪಿಸಿ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ವ್ಯಂಗ್ಯವಾಡಿದ್ದಾರೆ.

ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್‌ಗೋಡು ಗ್ರಾಮದಲ್ಲಿ ಸೋಮವಾರ ಸಂಜೆ ೨೦೦ಕ್ಕೂ ಹೆಚ್ಚು ಮಂದಿ ಬಿಜೆಪಿಯ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಮೆಚ್ಚಿ ಸಾರ್ವಜನಿಕರು ಬಿಜೆಪಿ ಸೇರಿದ್ದು ದೇಶಕ್ಕೆ ಬಿಜೆಪಿ ಅನಿವಾರ್ಯ ಎಂಬುದು ಜನ ತೀರ್ಮಾನಿಸಿದ್ದಾರೆ ಎಂದರು.

ಹೆಚ್ಚಿನ ಮಟ್ಟದಲ್ಲಿ ದಲಿತರೇ ಇರುವ ಮಹಲ್‌ಗೋಡು ಇಷ್ಟೊಂದು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ದಲಿತರಿಗೆ ಮೀಸಲಾತಿ ಹೆಚ್ಚಿಸಿದ ರಾಜ್ಯಸರ್ಕಾರದ ನಿಲುವನ್ನು ಅವರು ಮೆಚ್ಚಿದ್ದಾರೆ. ದೇಶದ ಭದ್ರತೆಯನ್ನೂ ಗಮನಿಸಿ ಬಿಜೆಪಿ ಸೇರ್ಪಡೆಗೊಂಡಿರುವರುವುದು ಖುಷಿಯ ವಿಚಾರ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಕಲ್ಲುಮಕ್ಕಿ ಉಮೇಶ್, ನಾಗೇಶ್, ವನಿಲಾ ಭಾಸ್ಕರ್, ಜಗದೀಶ್ ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

He accepted the bjp’s party’s ideology and joined the party

About Author

Leave a Reply

Your email address will not be published. Required fields are marked *

You may have missed