September 21, 2024
ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ಪತ್ರಿಕಾಗೋಷ್ಠಿ

ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಚಂದ್ರಶೇಖರ ಮಹಾ ಸ್ವಾಮಿಗಳ ೧೬೯ ನೇ ಜಯಂತಿ ಜಯಚಂದ್ರಶೇಖರ ಮಹಾ ಸ್ವಾಮಿಗಳ ೨೮ ಸಂಸ್ಮರಣೆ ಅಂಗವಾಗಿ ಮಾ.೭ ರಂದು ಕಲ್ಯಾಣ ನಗರದ ಬಸವ ಮಂದಿರದಲ್ಲಿ ಬಸವತತ್ವ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಅಂದು ಬೆಳಗ್ಗೆ ೫ ಗಂಟೆಗೆ ಇಷ್ಟಲಿಂಗ ಪೂಜೆ, ನಂತರ ೭ ಗಂಟೆಗೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿಗಳವರಿಂದ ಷಟ್‌ಸ್ಥಲ ಧ್ವಜಾರೋಹಣ ನಡೆಯಲಿದೆ. ನಂತರ ಬಸವತತ್ವ ಪೀಠದ ಸಂಸ್ಥಾಪಕರಾದ ಜಯಚಂದ್ರಶೇಖರ ಸ್ವಾಮಿಗಳ ಗದ್ದುಗೆಗೆ ಪೂಜೆ ನಡೆಯಲಿದೆ. ನಂತರ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿಶ್ವಗುರು ಬಸವಣ್ಣನವರ, ಚಂದ್ರಶೇಖರ ಮಹಾ ಸ್ವಾಮಿಗಳ, ಜಯಚಂದ್ರಶೇಖರ ಮಹಾ ಸ್ವಾಮಿಗಳ ಭಾವಚಿತ್ರದೊಂದಿಗೆ ಎಐಟಿ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ಶ್ರೀಮಠವನ್ನು ತಲುಪಲಿದೆ ಎಂದರು.

ಅದೇ ದಿನ ಸಂಜೆ ೬ ಗಂಟೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಗೋಷ್ಠಿಯಲ್ಲಿ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳವರನ್ನು ಗೌರವಿಸಲಾಗುವುದು. ಸಭೆಯ ಉದ್ಘಾಟನೆಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ನೆರವೇರಿಸಲಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾಕರಂದ್ಲಾಜೆ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ಮಾಜಿ ಸಚಿವ ಸಿ.ಟಿ ರವಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಹೆಚ್.ಸಿ ಕಲ್ಮರುಡಪ್ಪ, ಎಂ.ಎಸ್ ನಿರಂಜನ್, ಮಹಡಿಮನೆ ಸತೀಶ್, ಕಿಶೋರ್ ಕುಮಾರ್ ಹೆಗಡೆ, ಬಿ.ಎ ಶಿವಶಂಕರ್, ಬಿ.ಜೆ ಸೋಮಶೇಖರಪ್ಪ, ಬಿ.ಸಿ ಬಸವರಾಜು, ಬಿ.ಎನ್ ಚಿದಾನಂದ, ಶಿವಕುಮಾರ್, ಗುರುಮಲ್ಲಪ್ಪ ಮುಂತಾದವರು ಉಪಸ್ಥಿತರಿರುತ್ತಾರೆಂದು ಎಂದರು.

ಬರಗಾಲದ ಕಾರಣ ಹಾಗೂ ಶ್ರೀಮಠದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ದಿನ ಮಾತ್ರ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದ ಶ್ರೀಗಳು ಖ್ಯಾತ ಹಿಂದೂಸ್ಥಾನಿ ಗಾಯಕ ಅಂಬಯ್ಯ ನುಲಿ ಮತ್ತು ಅಕ್ಕನ ಬಳಗದವರ ವಚನಗಾಯನ ತುಷಾರ ಎಸ್.ಪಟೇಲ್ ಇವರ ವಚನ ನೃತ್ಯ ನಡೆಯಲಿದೆ ಎಂದು ತಿಳಿಸಿದರು.

ಈ ಬಸವತತ್ವ ಸಮಾವೇಶಕ್ಕೆ ಸರ್ವರೂ ಆಗಮಿಸಿ ತನು-ಮನ-ಧನಗಳೊಂದಿಗೆ ಸಹಕರಿಸಿ ಬಸವಾದಿ ಶರಣರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದ ಅವರು ಮಠದ ಈ ಕಾರ್ಯಕ್ರಮದ ಯಶಸ್ವಿಗೆ ದಾಸೋಹಕ್ಕೆ ಉದಾರವಾಗಿ ಧನಸಹಾಯ ಮಾಡುವವರು ಹಣ, ದವಸ, ಧಾನ್ಯಗಳನ್ನು ಶ್ರೀಮಠಕ್ಕೆ ಸ್ವಯಂಪ್ರೇರಣೆಯಿಂದ ನೀಡಿ ರಶೀದಿ ಪಡೆದುಕೊಳ್ಳುವಂತೆ ಟ್ರಸ್ಟಿಗರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಬಿ.ಜೆ ಸೋಮಶೇಖರ್, ಕುಮಾರ್, ಚಿದಾನಂದ, ಷಡಾಕ್ಷರಿ, ಸದಾಶಿವಪ್ಪ, ಬಸವರಾಜಪ್ಪ, ಬಾಬು ಮತ್ತಿತರರು ಉಪಸ್ಥಿತರಿದ್ದರು.

Basavatva convention at Basava Mandir on 7th March

About Author

Leave a Reply

Your email address will not be published. Required fields are marked *