September 21, 2024

ಮಾ.10: ̧ಡಾ.ಎಚ್.ಡಿ.ಚಂದ್ರಪ್ಪಗೌಡರ ಪುಸ್ತಕಗಳ ಬಿಡುಗಡೆ ಸಮಾರಂಭ

0
ಕನ್ನಂಗಿ ಎಚ್.ಸಿ.ಆಶಾ ಶೇಷಾದ್ರಿ ಸುದ್ದಿಗೋಷ್ಠಿ

ಕನ್ನಂಗಿ ಎಚ್.ಸಿ.ಆಶಾ ಶೇಷಾದ್ರಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕನ್ನಡ ವೈದ್ಯ ಸಾಹಿತ್ಯ ಲೋಕದ ಅಮೂಲ್ಯ ರತ್ನ ಡಾ| ಎಚ್.ಡಿ.ಚಂದ್ರಪ್ಪಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳಾದ ಆರೋಗ್ಯಲೋಕ, ವಿಜ್ಞಾನಲೋಕ ಪುಸ್ತಕಗಳ ಬಿಡುಗಡೆ ಸಮಾರಂಭ ಮಾ.೧೦ ರಂದು ಬೆಳಗ್ಗೆ ೧೦ ಗಂಟೆಗೆ ಶಿವ ಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಕನ್ನಂಗಿ ಎಚ್.ಸಿ.ಆಶಾ ಶೇಷಾದ್ರಿ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿರುವ ಡಾ|ಎಚ್.ಡಿ. ಚಂದ್ರಪ್ಪಗೌಡ ಅವರ ಸಾಹಿತ್ಯ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ|ಡಿ.ವಿ.ಪರಮಾನ್ ಶಿವಮೂರ್ತಿ ವಹಿಸಲಿದ್ದಾರೆ. ಖ್ಯಾತ ಮನೋವೈದ್ಯ ಹಾಗೂ ವೈದ್ಯ ಸಾಹಿತಿ ಡಾ|ಕೆ.ಆರ್.ಶ್ರೀಧರ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ ಎಂದರು.

ಸಾಹಿತ್ಯ ಸಂಪುಟಗಳ ಬಿಡುಗಡೆಯನ್ನು ಖ್ಯಾತ ಮನೋವೈದ್ಯ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|ಸಿ.ಆರ್. ಚಂದ್ರಶೇಖರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿ ಕುಪಸಚಿವ ಡಾ| ವಿಜಯ್ ಪುಣಚ್ಚ ತಂಬಂಡ, ನವಕರ್ನಾಟಕ ಪಬ್ಲಿಕೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಹಂಪಿ ಕನ್ನಡ ವಿವಿ ಪ್ರಸಾರಾಂಗ ನಿರ್ದೇಶಕ ಡಾ|ಮಾದವ ಪೆರಾಜೆ ಭಾಗವಹಿಸುವರು. ಸಾಹಿತ್ಯ ಸಂಪುಟಗಳ ಪರಿಚಯವನ್ನು ಶಿವಮೊಗ್ಗದ ಅರವಳಿಕೆ ವೈದ್ಯ ಶಾಸ್ತ್ರ ಪ್ರಾಧ್ಯಾ ಪಕರಾದ ಡಾ|ಗುರುದತ್ ನಡೆಸಿಕೊಡಲಿದ್ದಾರೆಂದು ಹೇಳಿದರು.

ವೈದ್ಯರತ್ನ ಡಾ|ಎಚ್.ಡಿ.ಚಂದ್ರಪ್ಪಗೌಡರು ೧೯೭೧-೭೬ ರವರೆಗೆ ಚಿಕ್ಕಮಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಹಾಯಕ ಸರ್ಜನ್ ಆಗಿ ೧೯೮೧-೮೪ ರವರೆಗೆ ಜಿಲ್ಲಾ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದು, ಇವರು ರಚಿಸಿದ ಹಲವಾರು ಸಾಹಿತ್ಯಗಳಿಗೆ ಮೂರು ಸಾಹಿತ್ಯ ಅಕಾ ಡೆಮಿ ಪ್ರಶಸ್ತಿ ಲಭಿಸಿತು. ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದು ಹೇಳಿ ದರು. ಸುದ್ದಿಗೋಷ್ಟಿಯಲ್ಲಿ ಶೇಷಾದ್ರಿ, ಎಂ.ಎ.ರಮೇಶ್ ಹೆಗಡೆ, ಹಾಲುಸ್ವಾಮಿ ಇದ್ದರು.

Mar. 10: Dr. H. D. Chandrapp Gowda’s book release ceremony

About Author

Leave a Reply

Your email address will not be published. Required fields are marked *