September 21, 2024

ಶ್ರೀ ಬೋಳರಾಮೇಶ್ವರ ದೇವಸ್ಥಾನದ ಅವರಣದಲ್ಲಿ 88ನೇ ಮಹಾಶಿವರಾತ್ರಿ

0
ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ ಭಾಗ್ಯಕ್ಕ ಪತ್ರಿಕಾಗೋಷ್ಠಿ

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ ಭಾಗ್ಯಕ್ಕ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಜ್ಞಾನಪ್ರಕಾಶ ಭವನದಲ್ಲಿ ನಾಳೆ (ಮಾ.೮) ಶುಕ್ರವಾರ ಬೆಳಗ್ಗೆ ೭ ಗಂಟೆಗೆ ೮೮ನೇ ಮಹಾಶಿವರಾತ್ರಿ ವಿಶೇ? ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ ಭಾಗ್ಯಕ್ಕ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಶಿವಧ್ವಜಾರೋಹಣ ೮೮ ಜ್ಯೋತಿ ಬೆಳಗಿಸಿ ಶಿವನ ಹುಟ್ಟುಹಬ್ಬ ಆಚರಣೆ, ಶಿವಪ್ರಸಾದ ವಿತರಣೆ ಏರ್ಪಡಿಸಿದ್ದು ಶ್ರೀ ಬೋಳರಾಮೇಶ್ವರ ದೇವಸ್ಥಾನದ ಅವರಣದಲ್ಲಿ ಅದ್ಭುತವಾದ ಸಹಸ್ರ ಲಿಂಗ ದರ್ಶನ ಹಾಗೂ ಅಲೌಕಿಕ ಅನುಭೂತಿಯ ದರ್ಶನವಿದೆ ಎಂದರು.

ನಿತ್ಯ ಸತ್ಯ ಶಿವರಾತ್ರಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬ್ರಹ್ಮಕುಮಾರೀಸ್‌ನ ೨೦ ವರ್ಗಗಳ ಮೂಲಕ ವಿಶೇ? ಸೇವೆಯ ೧೦೧ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸತ್ಯ ಜ್ಞಾನ ಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ ಎಂದು ಹೇಳಿದರು.

ಆಧ್ಯಾತ್ಮಿಕತೆಯ ತವರೂರು ಭಾರತ ದಿವ್ಯ ಸುಸಂಸ್ಕೃತಿಯ ನೆಲೆವೀಡು ಭಾರತ. ಸರ್ವ ಧರ್ಮ ಸಮನ್ವಯದ ನಾಡು ಭಾರತ ಆದರೆ ಇಂದೇನಾಗುತ್ತಿದೆ? ಭೌತಿಕವಾದ ಅತಿ ಅವಲಂಬನೆ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ, ಜಾತಿ ಮತಗಳ ಸಂಘ?ಗಳಿಂದ ಭಾರತೀಯರು ನಲಗುತ್ತಿದ್ದಾರೆ ಎಂದು ವಿ?ಧಿಸಿದರು.

ನೈತಿಕ ಮೌಲ್ಯಗಳು ನೆಲೆ ಕಳೆದುಕೊಂಡಿವೆ. ಸಾಮಾಜಿಕ ಮೌಲ್ಯಗಳು ಅದೃಶ್ಯಗೊಳ್ಳುತ್ತಿವೆ. ಮಕ್ಕಳು ಶ್ರೇ? ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ಯುವ ಜನತೆ ಸಂಸ್ಕೃತಿಯ ಸಂಗವಿಲ್ಲದೇ ಬಾಡುತ್ತಿದ್ದಾರೆ. ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಹಿಂದೊಮ್ಮೆ ವಿಶ್ವಕ್ಕೆ ಆದರ್ಶವಾಗಿದ್ದ ಭಾರತ ಇಂದು ಗತಕಾಲದ ವೈಭವವನ್ನೇ ನೆನೆಯುವಂತಾಗಿದೆ ಎಂದು ಹೇಳಿದರು.

ವಿಶ್ವಕ್ಕೆ ಭಾಗ್ಯವಿಧಾತನಾದ ಭಾರತ ಸ್ವರ್ಗವಿಧಾತನಾದ ಸರ್ವ ಆತ್ಮರ ತಂದೆ, ಪರಂ ಜ್ಯೋತಿ ಸ್ವರೂಪ, ಪ್ರಕಾಶ ಸ್ವರೂಪ, ಪರಂಪಿತ ಶಿವ ಪರಮಾತ್ಮನು ಪ್ರಜಾಪಿತ ಬ್ರಹ್ಮಾರವರ ಮಾಧ್ಯಮದ ಮೂಲಕ ಮನುಷ್ಯಾತ್ಮರನ್ನು ಜ್ಞಾನ, ಗುಣ, ಶಕ್ತಿಗಳಿಂದ ಸಂಪನ್ನರನ್ನಾಗಿ ಮೌಲ್ಯ ಸಮೃದ್ಧರನ್ನಾಗಿ ಮಾಡಲು ಆವತರಿಸಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಯವನ್ನು ಸ್ಥಾಪಿಸಿದ್ದಾರೆ. ಈಶ್ವರೀಯ ಜ್ಞಾನ ಹಾಗೂ ಸಹಜ ರಾಜಯೋಗ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಂದಕುಮಾರ್, ಮಹಾಲಕ್ಷ್ಮಿ, ಇಂದಿರಾ, ರಾಯಪ್ಪಣ್ಣ, ಸಚಿನ್ ಇದ್ದರು.

88th Mahashivaratri at Sri Bolarameswara Temple Avarana

About Author

Leave a Reply

Your email address will not be published. Required fields are marked *