September 21, 2024

ಕರ್ಮವಾದವನ್ನು ಮೀರಿ ಮನುಷ್ಯತ್ವದ ಬಗ್ಗೆ ಮಾತನಾಡಿದವರು ಬಸವಣ್ಣ

0
ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ನಡೆದ ಬಸವತತ್ವ ಸಮಾವೇಶ

ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ನಡೆದ ಬಸವತತ್ವ ಸಮಾವೇಶ

ಚಿಕ್ಕಮಗಳೂರು:  ದೇವರು ಧರ್ಮದ ಬಗ್ಗೆ ಮತ್ತು ಕರ್ಮವಾದವನ್ನು ಮೀರಿ ಮನುಷ್ಯತ್ವದ ಬಗ್ಗೆ ಮಾತನಾಡಿದವರು ವಿಶ್ವಗುರು ಬಸವಣ್ಣನವರು ಎಂದುಬೈಲೂರಿನ ನಿಶ್ಕಲ ಮಂಟಪದ ಶ್ರೀ ಮ. ನಿ. ಪ್ರ. ನಿಜಗುಣಾನಂದ ಮಹಾಸ್ವಾಮಿ ಗಳು ಹೇಳಿದರು.

ನಗರದ ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ಶ್ರೀ ಮ. ನಿ. ಪ್ರ. ಚಂದ್ರಶೇಖರ ಮಹಾಸ್ವಾಮಿಗಳವರ ೧೬೯ನೆಯ ಜಯಂತಿ, ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳವರ ೨೮ನೆಯ ಸಂಸ್ಮರಣೆ ಅಂಗವಾಗಿ ಇಂದು ಜರುಗಿದ ಬಸವತತ್ವ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಜಗ ಜಗತ್ತಿನಲ್ಲಿ ಹಲವು ಪ್ರವಾದಿ, ಮಹಾತ್ಮರು, ಸಂತರು ದಾರ್ಶನಿಕರು ಕಾಣದ ಕಾಲ್ಪನಿಕ ದೇವರ ಬಗ್ಗೆ ಮಾತನಾಡಿದರು ಆದರೆ ಬಸವಣ್ಣ ವಿಜ್ಞಾನ ಮತ್ತು ವೈಚಾರಿಕತೆಯಬಗ್ಗೆ ಜನ ಜಾಗೃತಿ ಮೂಡಿಸಿದ ಮಹನೀಯರು ಎಂದರು.

ಇಂದಿನ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬೇಕೆಂಬ ಹೇಳುತ್ತಾರೆಯೇ ವಿನಃ ಒಳ್ಳೆಯ ರೈತ,ಒಳ್ಳೆಯ ಸ್ವಾಮೀಜಿ ಆಗುತ್ತೇನೆ ಎಂದು ಯಾರೂ ಹೇಳುವುದಿಲ. ಸಮಾಜಕ್ಕೆ ತನು, ನಿಸ್ವಾರ್ಥ ಭಾವದ ಉತ್ತಮ ಚಾರಿತ್ರದ ಸ್ವಾಮೀಜಿಗಳು ದೊರೆಯುವುದು ವಿರಳವಾಗಿರುವ ಸಂದರ್ಭದಲ್ಲಿ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಸಚ್ಚಾರಿತ್ರ್ಯ ಸ್ವಾಮೀಜಿಗಳ ಅಗತ್ಯಇದೆ ಎಂದರು.

ಬಸವ ತತ್ವ ಪೀಠದ ಜಯಚಂದ್ರ ಶೇಖರ ಸ್ವಾಮಿಗಳು ಸಣ್ಣ ಸಣ್ಣ ಸ್ವಾಮೀಜಿಗಳನ್ನು ಗುರುತಿಸಿ ಬೆಳೆಸಿದ ವಿಶಾಲ ಹೃದಯಿಗಳು, ತನುಮನ ಭಾವಗಳನ್ನು ಬಸವಣ್ಣನಿಗೆ ಅರ್ಪಿಸಿದ ನಿಸ್ವಾರ್ಥ ಜೀವಿ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ ಬಸವಾದಿ ಶರಣರ ವಿಚಾರಧಾರೆಗಳನ್ನು ಹೇಳುವುದು ಬಹು ಸುಲಭ ಆದರೆ ಅದನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು ಬಹು ಕಷ್ಟದ ವಿಚಾರ. ಅವರ ಸಂಪೂರ್ಣ ಆದರ್ಶಗಳನ್ನು ಪಾಲಿಸಲು ಸಾಧ್ಯವಾಗದಿದ್ದರೂ ಅದರಲ್ಲಿ ಕೆಲವನ್ನಾದರೂ ಬದುಕಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ದೇಶದಲ್ಲಿ ಕಾಯಕ ಯೋಗಿ ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಹುಟ್ಟದೇ ಇದ್ದಿದ್ದರೆ ದೇಶದ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಸ್ಥಾನ ನೀಡಬೇಕೆಂದು.

ಬಸವಣ್ಣನವರು ಪ್ರತಿಪಾದಿಸಿದರೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಪ್ರಾಧ್ಯಾನತೆ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಕಾರಣವಾಗಿದ್ದಾರೆ ಎಂದರು.

ಪ್ರಾಧ್ಯಾಪಕ ಪ್ರಶಾಂತ ನಾಯಕ್ ದಿಕ್ಸೂಚಿ ಭಾಷಣ ಮಾಡಿ ಈಗಾಗಲೇ ಬಸವಣ್ಣನವರನ್ನು ನಾಡಿನ ಜನ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಬಹುದಿನಗಳು ಕಳೆದು ಹೋಗಿದೆ. ಆದರೆ ಬಹು ತಡವಾಗಿಯಾದರೂ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮೌಡ್ಯ,ಅಂಧಕಾರದ ಹೆಸರಿನಲ್ಲಿ ಬಹು ಜನರನ್ನು ಶೋಷಣೆಗೊಳಗಾಗಿದ್ದ ಜನರಲ್ಲಿ ಜಾಗೃತಿ ಮೂಡಿದ ಬಸವಣ್ಣನವರು ಈ ದೇಶದ ಹೆಮ್ಮೆಯ ವ್ಯಕ್ತಿ ಎಂದು ಹೇಳಿದರು. ನಾಲಿಗೆಜನ ತಮಗೆ ಬೇಕಾದಂತೆ ಹೊರಳಿಸುತ್ತಿರುವ ಈ ದಿನಗಳಲ್ಲಿ ಮನುಷ್ಯ ತನ್ನ ನಾಲಿಗೆಯನ್ನು ಶುದ್ಧಗೊಳಿಸಿಕೊಂಡರೆ ಆಲೋಚನೆ ,ಭಾವನೆಗಳು ಶುದ್ಧವಾಗುತ್ತವೆ ಎಂಬುದನ್ನು ಶರಣರು ನುಡಿದರೆ ಮಾಣಿಕ್ಯದ ಹಾರದಂತಿರಬೇಕು ಎಂದು ಹೇಳಿದ್ದಾರೆ ಎಂದರು.

ಭಾರತ ದೇಶದಲ್ಲಿ ಸಮಾಜದ ವ್ಯವಸ್ಥೆಯಲ್ಲಿ ಜಾತಿ ಎಂಬುದು ದರಿದ್ರ ಆಲೋಚನೆ ಎಂಬುದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಶಿಕ್ಷಕರು ಬೋಧಿಸಬೇಕಿದೆ ಎಂದು ಹೇಳಿದ ಅವರು ಪ್ರಶ್ನಿಸುವುದೇ ಅಪರಾಧ ಎನ್ನುತ್ತಿರುವ ಈ ವಿಷಯ ಸಂದರ್ಭದಲ್ಲಿ ಬಸವಣ್ಣನವರ ವೈಚಾರಿಕ ವಿಚಾರಧಾರೆಗಳು ಇಂದು ಅತ್ಯಗತ್ಯ.

ಇತ್ತೀಚಿನ ದಿನಗಳಲ್ಲಿ ಪ್ರತಿ ಎಂದು ಸ್ಥಳದಲ್ಲಿಯೂ ಬುದ್ಧ ಬಸವ ಪ್ರತಿಷ್ಠಾಪಿಸಲ್ಪಡುತ್ತಿದ್ದಾರೆ . ಬಹಳಷ್ಟು ಕಾರ್ಯಕ್ರಮಗಳಲ್ಲಿ ಬುದ್ಧ,ಬಸವನ ಸಮಗ್ರ ಪರಿಚಯವಿಲ್ಲದಿದ್ದರೂ ಸಹ ಕೊಡುಗೆಯಾಗಿ ಬುದ್ಧ ಬಸವರ ವಿಗ್ರಹಗಳನ್ನು ನೀಡಲಾಗುತ್ತಿದೆ ಇದೇ ಭೆಳವಣಿಗೆ ಮುಂದುವರೆದರೆ ಮುಂದೊಂದು ದಿನ ದೇಶದ ಜನ ಬುದ್ಧ ಬಸವ ಮಾರ್ಗಕ್ಕೆ ಮರಳುವ ಭರವಸೆ ಇದೆ ಎಂದು ಹೇಳಿದರು.

ವಚನ ಚಳುವಳಿಯಲ್ಲಿ ಬಸವಣ್ಣನವರು ಹೇಳಿದ್ದು ವಿಜ್ಞಾನ ಮತ್ತು ವೈಚಾರಿಕತೆಯನ್ನು ಶಾಲಾ ಕಾಲೇಜು ಕಚೇರಿ ಒಳಗೆ ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಅವರಿಗೆ ಕರ್ಪೂರ ಹಚ್ಚಿದರೆ ಸಾಲದು ಅವರ ವಿಚಾರ ಧಾರೆಗಳನ್ನು ಅಳವಡಿಸಿ ಕೊಳ್ಳಬೇಕೆಂದರು.

ಚಿನ್ನದ ಹಿಂದೆ ಹೋಗುತ್ತಿರುವ ಮನುಷ್ಯ ಅನ್ನವನ್ನು ಮರೆಯುತ್ತಿರುವುದು ದುರ್ದೈವದ ಸಂಗತಿ. ಮನುಷ್ಯ ಯಾವುದರ ಹಿಂದೆ ಹೋಗಬೇಕು ಎನ್ನುವುದರ ಬಗ್ಗೆಯೇ ಜಿಜ್ಞಾಸೆಯಲ್ಲಿದ್ದಾ. ಇಡೀ ದೇಹದಲ್ಲಿ ಮೂಳೆಇಲ್ಲದ ಅಂಗವೆಂದರೆ ಅದು ನಾಲಿಗೆ ನಾಲಿಗೆಗೆ ಆದ ಗಾಯ ಮಾಯಬಹುದು ಆದರೆ ನಾಲಿಗೆಯಿಂದ ಆದ ಗಾಯ ಮಾಯಲು ಸಾಧ್ಯವಿಲ್ಲ ಪ್ರತಿಯೊಬ್ಬರು ನಡೆ-ನುಡಿ ಎಲ್ಲಿ ವ್ಯತ್ಯಾಸವಿಲ್ಲದೆ ಬಸವಾದಿ ಪ್ರಮಥರ ಆಶಯದಂತೆ ನಡೆಯೋಣ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗು ರಫ್ತು ನಿಗಮದ ಅಧ್ಯಕ್ಷ ಬಿ. ಎಚ್. ಹರೀಶ್ ವರಸಿದ್ಧಿ ವೇಣುಗೋಪಾಲ್, ಎಚ್. ಸಿ. ಕಲ್ಮರುಡಪ್ಪ, ಎಂ. ಎಸ್. ನಿರಂಜನ, ಮಹಡಿಮನೆ ಸತೀಶ್, ಬಿ. ಎ. ಶಿವಶಂಕರ್, ಬಿ. ಜೆ. ಸೋಮಶೇಖರಪ್ಪ, ಬಿ. ಸಿ. ಬಸವರಾಜು, ಬಿ. ಎನ್. ಚಿದಾನಂದ್, ಎನ್. ಸಿ. ಶಿವಕುಮಾರ್, ಗುರುಮಲ್ಲಪ್ಪ, ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಿಗ್ಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ವೃತ್ತದಿಂದ ಶ್ರೀ ಬಸವೇಶ್ವರ ರಸ್ತೆಯ ಮೂಲಕ ಶ್ರೀ ಮಠದವರೆಗೆ ವಿವಿಧ ಜಾನಪದ ಕಲಾತಂಡ ಗಳೊಂದಿಗೆ ಉತ್ಸವ ಜರುಗಿತು.

It was Basavanna who talked about humanity beyond karma

 

About Author

Leave a Reply

Your email address will not be published. Required fields are marked *