September 21, 2024

ಮೂಡಿಗೆರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೂಡಿಗೆರೆ: ಅಟೋ ಚಾಲಕರು ತನ್ನ ದಿನ ನಿತ್ಯದ ದುಡಿಮೆಯನ್ನು ಆಟೋ ಚಾಲನೆಯಿಂದಲೇ ಸಂಪಾದಿಸಿ ತಮ್ಮ ಕುಟುಂಬ ನಿರ್ವಹಣೆ ಮಾಡುವ ಜತೆಗೆ ಸಮಾಜದೊಂದಿಗೆ ಸ್ನೇಹಪೂರ್ವಕವಾಗಿ ಬದುಕುತ್ತಿದ್ದಾರೆಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಪಟ್ಟಣದ ತಾಲೂಕು ಕಚೇರಿ ಎದುರು ನೂತನವಾಗಿ ನಿರ್ಮಾಣಗೊಂಡ ಆಟೋ ನಿಲ್ದಾಣ ಹಾಗೂ ನಾಡ ಪ್ರಭು ಕೆಂಪೇಗೌಡ ಹೆಸರಿನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಆಟೋ ಚಾಲಕರಿಂದ ಪ್ರಯಣಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಇದು ಕೂಡ ಒಂದು ಸಮಾಜ ಮುಖಿ ಕೆಲಸ ಎಂದರು

ಓರ್ವ ಆಟೋ ಚಾಲಕನಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಎಲ್ಲಾ ಆಟೋ ಚಾಲಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲಾ ಆಟೋ ಚಾಲಕರು ತಮ್ಮ ಕೆಲಸವನ್ನು ಸೇವಾ ಮನೋಭಾವದಿಂದ ಮಾಡಬೇಕೆಂದು ಕಿವಿ ಮಾತು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ತಾನು ಎಂಎಲ್‌ಸಿ ಆಗಿದ್ದಾಗ ಇದೇ ಆಟೋ ನಿಲ್ದಾಣಕ್ಕೆ ೫ ಲಕ್ಷ ಹಣ ಇಡಲಾಗಿತ್ತು. ಆದರೆ ಜಾಗದ ಕೊರತೆಯಿಂದ ನಿಲ್ದಾಣ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ಆಟೋ ನಿಲ್ದಾಣ ನಿರ್ಮಾಣವಾಗಿದ್ದರಿಂದ ಪಾದಾಚಾರಿಗಳೂ ಮತ್ತು ವಾಹನ ಸಂಚಾರ ಅಧಿಕವಾಗಿರುತ್ತದೆ. ಹಾಗಾಗಿ ಆಟೋ ಚಾಲಕರು ಜಾಗರೂಕತೆಯಿಂದ ಸಂಚರಿಸಬೇಕೆಂದು ಸಲಹೆ ನೀಡಿದರು.

ಪ.ಪಂ. ಸದಸ್ಯರಾದ ಮನೋಜ್ ಹಂಝಾ, ಸ್ವತಶ್ಛಲಿ ಆಟೋ ಚಾಲಕ ಸಂಘದ ಅಧ್ಯಕ್ಷ ಚಂದ್ರೇಶ್, ತಾಲೂಕು ಅಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ಅಮರ್‌ನಾಥ್ ಮುಖಂಡರಾದ ಜೆ.ಎಸ್.ರಘು, ಗಜೇಂದ್ರ, ಗಣೇಶ್, ದಯಾನಂದ್, ಪ್ರಕಾಶ್, ಸುಧೀರ್ ಮತ್ತಿತರರಿದ್ದರು.

Clean drinking water plant inaugurated at Mudigere

About Author

Leave a Reply

Your email address will not be published. Required fields are marked *