September 21, 2024

ಮಾರ್ಚ್ 27 ರಿಂದ ನೇಹದಿ ನೇಯ್ಗೆ ರಂಗೋತ್ಸವ ಕಾರ್ಯಕ್ರಮ

0
ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್‌ರಾಜ್ ಸುದ್ದಿಗೋಷ್ಠಿ

ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್‌ರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಖ್ಯಾತ ಚಲನಚಿತ್ರ ನಟ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ಸಂಸ್ಥೆ ಆಶ್ರಯದಲ್ಲಿ ಇದೇ ಮಾರ್ಚ್ ೨೭ರಿಂದ ಏಪ್ರಿಲ್ ೧ ರವರೆಗೆ ನೇಹದಿ ನೇಯ್ಗೆ ಎಂಬ ಘೋಷ ವಾಕ್ಯದೊಂದಿಗೆ ರಂಗೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಹಾಗೂ ತಂಡದ ಇತರ ಮುಖಂಡರುಗಳು ನಗರದ ಕುವೆಂಪು ಕಲಾಮಂದಿರದಲ್ಲಿ ಈ ಜಿಲ್ಲೆಯ ರಂಗಭೂಮಿ ಕಲಾವಿದರನ್ನು ಒಳಗೊಂಡಂತೆ ಒಂದು ವಾರಗಳ ಕಾಲ ನಾಟಕ ಸಂಗೀತ ಚಿತ್ರ ಸಿನಿಮಾ ಸಾಹಿತ್ಯಗಳ ಸಂಮಿಲನದೊಂದಿಗೆ ವಿಭಿನ್ನ ಲಲಿತ ಕಲೆಗಳು ಹಾಗೂ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಬೆಸುಗೆಯಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಮಾರ್ಚ್ ೨೭ರಂದು ಕೃಷಿಕ ಹಾಗೂ ನಟ ಕಿಶೋರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಸಂಜೆ ೭ರ ನಂತರ ನಾಟಕೋತ್ಸವ ಪ್ರದರ್ಶನ ನಡೆಯಲಿದೆ ನಂತರ ಪ್ರತಿದಿನ ವಿಚಾರ ಸಂಕಿರಣಗಳು, ವಿಭಿನ್ನಕಲಾ ಪ್ರಕಾರಗಳು ಪ್ರಯೋಗಗೊಂಡ ನಾಟಕಗಳ ಚರ್ಚೆ ಸಂವಾದಗಳು ನಡೆಯಲಿವೆ ಎಂದು ಹೇಳಿದರು.

ಮಾರ್ಚ್ ೨೯ ರಂದು ರಂಗ ತಜ್ಞರೊಂದಿಗೆ ಮಾತುಕತೆ ಹಾಗೂ ಕೊನೆಯ ದಿನ ಏಪ್ರಿಲ್ ೧ ರಂದು ಬಹು ವಾದ್ಯಗಳ ನುಡಿ ನಡಿಗೆ ಮಂಟೇಸ್ವಾಮಿ ಕಾವ್ಯ ಪ್ರಯೋಗ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಂಗಕರ್ಮಿ ಡಾ. ಶ್ರೀಪಾದಭಟ್ ಕರಾವಳಿ ಭಾಗದ ವಿಭಿನ್ನ ಕಲಾವಿದರನ್ನು ಗುರುತಿಸಿ ೫೦ ಜನ ತಂಡ ಕಟ್ಟಲಾಗಿದೆ ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಲ್ಲಿ ತಂಡಗಳ ಪ್ರತಿನಿಧಿಗಳನ್ನು ಈ ಕಾರ್ಯಕ್ರಮಕ್ಕೆ ಕರೆಸಿ ವಿಭಿನ್ನ ಕಲೆಗಳ ದೇಶ ಹಾಗೂ ವಿದೇಶಗಳ ಕಲೆಗಳ ಬಗ್ಗೆಯೂ ಸಂವಾದ ನಡೆಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಾದ ಎನ್. ರಾಜು, ಪಿ. ರಾಜೇಶ್, ಶಿವಕುಮಾರ್ ವಿನೀತ್ ಇದ್ದರು.

Nehdi Weaving Rangotsava program from March 27

About Author

Leave a Reply

Your email address will not be published. Required fields are marked *