September 20, 2024

ಲೋಕಸಭಾ ಸಾರ್ವತ್ರಿಕ ಚುನಾವಣೆ : ಇವಿಎಂ ಪ್ರಥಮ ರ್‍ಯಾಂಡಮೈಜೇಷನ್ 

0
ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳ ಕಂಪ್ಯೂಟರ್ ಆಧಾರಿತ ಪ್ರಥಮ ರ್‍ಯಾಂಡಮೈಜೇಷನ್ ಪ್ರಕ್ರಿಯೆ

ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳ ಕಂಪ್ಯೂಟರ್ ಆಧಾರಿತ ಪ್ರಥಮ ರ್‍ಯಾಂಡಮೈಜೇಷನ್ ಪ್ರಕ್ರಿಯೆ

ಚಿಕ್ಕಮಗಳೂರು:  ಲೋಕಸಭಾ ಸಾರ್ವತ್ರಿಕ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳ ಕಂಪ್ಯೂಟರ್ ಆಧಾರಿತ ಪ್ರಥಮ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳ ಪ್ರಥಮ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.
ಮೊದಲ ಹಂತದ ಪರಿಶೀಲನೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೧೨೨೯ ಮತಗಟ್ಟೆಗಳಿದ್ದು, ೨೨೦೯ ಬ್ಯಾಲೆಟ್ ಯೂನಿಟ್, ೧೫೭೦ ಕಂಟ್ರೋಲ್ ಯೂನಿಟ್, ೧೬೫೮ ವಿವಿ ಪ್ಯಾಟ್ ಇರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಕ್ಷಮದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರಥಮ ರ್‍ಯಾಂಡಮೈಜೇಷನ್ ನಡೆಯುತ್ತದೆ. ಇದಾದ ಬಳಿಕ ಆಯಾ ಮತಕ್ಷೇತ್ರಗಳಿಗೆ ಮತಯಂತ್ರಗಳನ್ನು ಕಳುಹಿಸಲಾಗುವುದು. ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದರೆ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ನಾಮಪತ್ರ ಪ್ರಕ್ರಿಯೆ ಉಡುಪಿ ಹಾಗೂ ಹಾಸನ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು.
ಇವಿಎಂಗಳ ಮೊದಲ ಪರಿಶೀಲನೆ ಮಾಡಲಾಗಿದ್ದು, ಪರಿಶೀಲನೆ ನಂತರ ೨೨೦೯ ಬ್ಯಾಲೆಟ್ ಯೂನಿಟ್, ೧೫೭೦ ಕಂಟ್ರೋಲ್ ಯೂನಿಟ್ ಹಾಗೂ ೧೬೫೮ ವಿವಿ ಪ್ಯಾಟ್‌ಗಳು ಸುಸ್ಥಿತಿಯಲ್ಲಿವೆ ಎಂದ ಅವರು. ೧೨೩ – ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ೩೨೦ ಬ್ಯಾಲೆಟ್ ಯೂನಿಟ್, ೩೨೦ ಕಂಟ್ರೋಲ್ ಯೂನಿಟ್ ಹಾಗೂ ೩೪೦ ವಿವಿ ಪ್ಯಾಟ್‌ಗಳು, ೧೨೪ – ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ೨೮೮ ಬ್ಯಾಲೆಟ್ ಯೂನಿಟ್, ೨೮೮ ಕಂಟ್ರೋಲ್ ಯೂನಿಟ್, ೩೦೭ ವಿವಿ ಪ್ಯಾಟ್, ೧೨೫ –  ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ೩೨೬ ಬ್ಯಾಲೆಟ್ ಯೂನಿಟ್, ೩೨೬ ಕಂಟ್ರೋಲ್ ಯೂನಿಟ್, ೩೪೨ ವಿವಿ ಪ್ಯಾಟ್, ೧೨೬ – ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ೨೮೫ ಬ್ಯಾಲೆಟ್ ಯೂನಿಟ್, ೨೮೫ ಕಂಟ್ರೋಲ್ ಯೂನಿಟ್, ೩೦೩ ವಿವಿ ಪ್ಯಾಟ್ ಹಾಗೂ ೧೨೭ – ಕಡೂರು ವಿಧಾನಸಭಾ ಕ್ಷೇತ್ರಕ್ಕೆ ೩೧೬ ಬ್ಯಾಲೆಟ್ ಯೂನಿಟ್, ೩೧೬ ಕಂಟ್ರೋಲ್ ಯೂನಿಟ್, ೩೩೬ ವಿವಿ ಪ್ಯಾಟ್ ಸೇರಿದಂತೆ ಒಟ್ಟು ೧೫೩೫ ಬ್ಯಾಲೆಟ್ ಯೂನಿಟ್, ೧೫೩೫ ಕಂಟ್ರೋಲ್ ಯೂನಿಟ್, ೧೬೩೩ ವಿವಿ ಪ್ಯಾಟ್‌ಗಳನ್ನು ರವಾನಿಸಲಾಗುತ್ತದೆ ಎಂದ ಅವರು.೯೮ ಇವಿಎಂ ಯಂತ್ರಗಳನ್ನು ಸಾರ್ವಜನಿಕರಲ್ಲಿ ಇವಿಎಂಗಳಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಲು ಸ್ವೀಪ್ ಸಮಿತಿಗೆ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ ೧೦ ಇವಿಎಂಗಳನ್ನು ತರಬೇತಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ವಾಹನ ಪರವಾನಗಿ, ಪ್ರಚಾರ ವೀಡಿಯೋ ವ್ಯಾನ್ ಅನುಮತಿ, ಪಕ್ಷದ ಪದಾಧಿಕಾರಿಗಳಿಗೆ ವಾಹನ ಅನುಮತಿ ಮುಂತಾದವುಗಳಿಗೆ ಸುವಿಧಾ ಮೂಲಕ ಅನುಮತಿ ಪಡೆಯಬೇಕು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಸಿವಿಜಲ್ ಮೂಲಕ ದೂರು ದಾಖಲಿಸಬಹುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಕಾಂತರಾಜು, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹಾಗೂ  ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.
First computer-based randomization process of Electronic Voting Machines (EVMs).

About Author

Leave a Reply

Your email address will not be published. Required fields are marked *