September 19, 2024

ಒಂಟಿ ಸಲಗ ದಾಳಿಗೆ ತಮಿಳುನಾಡು ಮೂಲದ ಕೂಲಿಕಾರ್ಮಿಕ ಸಾವು

0
ಅರಣ್ಯ ಇಲಾಖೆ ಕಾರ್ಯವೈಖರಿ ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಶವಾಗಾರದ ಎದುರು ಪ್ರತಿಭಟನೆ

ಅರಣ್ಯ ಇಲಾಖೆ ಕಾರ್ಯವೈಖರಿ ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಶವಾಗಾರದ ಎದುರು ಪ್ರತಿಭಟನೆ

ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ತಮಿಳುನಾಡು ಮೂಲದ ಶ್ರೀಧರ ಕೂಲಿಕೆಲಸಕ್ಕೆಂದು ತೋಟಕ್ಕೆ ತೆರಳುತ್ತಿದ್ದಾಗ ಒಂಟಿ ಸಲಗ ದಾಳಿನಡೆಸಿದ್ದು, ಗಾಯಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವಪ್ಪಿದ್ದಾರೆ.

ತಮಿಳುನಾಡಿನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಕುಟುಂಬ ಮತ್ತಾವರ ಗುಡ್ಡದ ಮಾರ್ಗವಾಗಿ ಮೊನ್ನೆಬಂದಿರುವ ಒಂಟಿ ಸಲಗ ಮತ್ತಾವರ ಅರಣ್ಯಮಾಹಿತಿಕೇಂದ್ರದ ಬಳಿ ಬುಧವಾರ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ತಡೆದು ಪಟಾಕಿ ಸಿಡಿಸುವ ಮೂಲಕ ಓಡಿಸಿದ್ದರು.

ಈ ಆನೆ ಕೆ.ಆರ್.ಪೇಟೆ ಸುತ್ತಮುತ್ತಲಲ್ಲಿ ಸಂಚರಿಸುತ್ತಿತ್ತು. ಕೆಲವು ವರ್ಷಗಳಿಂದ ದಾನಿಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಎರಡು ವರ್ಷದಹಿಂದೆ ಕಂಚೇನಹಳ್ಳಿಗೆ ಬಂದಿದ್ದರು. ಇಂದು ಕೆಲಸಕ್ಕೆ ತೆರಳುವಾಗ ಆನೆ ದಾಳಿನಡೆಸಿಕೊಂಡುಹಾಕಿದೆ.ಕಳೆದ ಎರಡು ವರ್ಷದಲ್ಲಿ ಆನೆ ದಾಳಿಗೆ ಐದಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಸ್ಥಳೀಯರ ಆಕ್ರೋಶ: ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವೇ ಕಾಡಿಗೆ ಅಟ್ಟಲು ಮುಂದಾಗಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು, ವಲಯಾರಣ್ಯಾಧಿಕಾರಿ ಮೋಹನ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.

೧೫ ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ: ಒಂಟಿ ಸಲಗದ ಹಾವಳಿ ಜಿಲ್ಲೆಯಲ್ಲಿ ಅಧಿಕಗೊಂಡಿದೆ. ಕೆಲವು ದಿನಗಳ ಹಿಂದೆ ಪ್ರವಾಸಕ್ಕೆಂದು ಮೂಡಿಗೆರೆ ತಾಲೂಕಿನ ದೇವರ ಮನೆಗೆ ಬಂದಿದ್ದ ಪ್ರವಾಸಿಗರ ಮೇಲೆ ಒಂಟಿಸಲಗವೊಂದು ದಾಳಿನಡೆಸಿದ್ದು, ಬೈಕ್‌ಬಿಟ್ಟು ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಈ ದಿನ ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಶ್ರೀಧರ ಮೇಲೆ ಸಲಗವೊಂದು ದಾಳಿ ನಡೆಸಿಕೊಂಡು ಹಾಕಿದೆ.

ಪ್ರತಿಭಟನೆ: ಆನೆದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವುದನ್ನು ಖಂಡಿಸಿ, ಸರ್ಕಾರ ಮತ್ತು ಅರಣ್ಯ ಇಲಾಖೆ ಕಾರ್ಯವೈಖರಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಶವಾಗಾರದ ಎದುರು ಸಂಜೆ ಪ್ರತಿಭಟನೆ ನಡೆಸಿದರು.

ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ, ಮರ್ಲೆ ಅಣ್ಣಯ್ಯ, ಹುಣಸೆಮಕ್ಕಿ ಲಕ್ಷ್ಮಣ, ಅಂಗಡಿ ಚಂದ್ರು, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಸುರೇಶ್, ಪೂರ್ಣೇಶ್, ಉಮೇಶ್,ಕೆ.ಜೆ.ಮಂಜುನಾಥ ಇದ್ದರು.

ಜಿಲ್ಲೆಯಲ್ಲಿ ಸುತ್ತಾಡಿಕೊಂಡಿದ್ದ ಬೀಟಮ್ಮಗುಂಪಿನ ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಟ್ಟು ಕೊನೆಗೂ ಹಾಸನ ಜಿಲ್ಲೆಗೆ ಕಳುಹಿಸಲು ಯಶಸ್ವಿಯಾಗಿದ್ದ ಅರಣ್ಯ ಇಲಾಖೆಗೆ ಈಗ ಒಂಟಿಸಲಗಳ ಕಾಡ ಜಾಸ್ತಿಯಾಗುವ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Labourer’s death from Tamil Nadu due to lone gun attack

About Author

Leave a Reply

Your email address will not be published. Required fields are marked *

You may have missed