September 20, 2024

ಜಿಲ್ಲೆಯಲ್ಲಿ ಸಣ್ಣ-ಮಧ್ಯಮ ಕೈಗಾರಿಕೆ ಸ್ಥಾಪಿಸಲು ಯುವಜನತೆ ಮುಂದಾಗಬೇಕು

0
ನಗರದ ಗ್ರಾಂಡ್ ಕೃಷ್ಣ ಹೋಟೆಲ್ ಸಭಾಂಗಣದಲ್ಲಿ ನಡೆದ ರಫ್ತು ಕುರಿತ ವಿಚಾರ ಸಂಕಿರಣ

ನಗರದ ಗ್ರಾಂಡ್ ಕೃಷ್ಣ ಹೋಟೆಲ್ ಸಭಾಂಗಣದಲ್ಲಿ ನಡೆದ ರಫ್ತು ಕುರಿತ ವಿಚಾರ ಸಂಕಿರಣ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಯುವಜನತೆ ಮುಂದಾಗಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಆರ್ ಎಂ ಮಹೇಶ್ ಕರೆ ನೀಡಿದರು

ನಗರದ ಗ್ರಾಂಡ್ ಕೃಷ್ಣ ಹೋಟೆಲ್ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಚೇಂಬರ್ ಆಫ್ ಕಾಮರ್ಸ್ ಹಾಗೂ ಬೆಂಗಳೂರಿನ ಕಾಸಿಯಾ ಸಂಸ್ಥೆ ಶನಿವಾರ ಏರ್ಪಡಿಸಿದ್ದ ರಫ್ತು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆರಳೆಣಿಕೆ ಯಷ್ಟು ಸಂಖ್ಯೆಯಲ್ಲಿವೆ ಅದರಿಂದಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು

ಯಾವುದೇ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಬೇಕು ಅದರಿಂದ ಜಿಲ್ಲೆಯ ಸಹಸ್ರಾರು ಜನರಿಗೆ ಉದ್ಯೋಗ ದೊರೆಯುತ್ತದೆ ಆ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ರಫ್ತು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಯುವಜನತೆ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉದ್ಯಮಿಗಳಾಗಬೇಕು ಎಂದು ಕಿವಿಮಾತು
ಹೇಳಿದರು

ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಕಾರ್ಪೊರೇಷನ್ನಿನ ಉಪನಿರ್ದೇಶಕ ಮನ್ಸೂರ್ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸುವ ಬಗೆ ಮತ್ತು ರಫ್ತಿನ ಕುರಿತು ಉಪನ್ಯಾಸ ನೀಡಿದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಸಿಯ ಸಂಸ್ಥೆಯ ಅಧ್ಯಕ್ಷ ಸಿ ಎ ಶಶಿಧರ ಶೆಟ್ಟಿ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಯುವ ಜನತೆ ಮುಂದೆ ಬಂದಲ್ಲಿ ತಮ್ಮ ಸಂಸ್ಥೆಯಿಂದ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು

ಕಾಸಿಯ ಸಂಸ್ಥೆ ಉಪಾಧ್ಯಕ್ಷ ಎಂಜಿ ರಾಜಗೋಪಾಲ್ ಅರುಣ್ ಪಡಿಯಾರ್ ಚೆಂಬರ್ ಕಾಮರ್ಸ್ ನ ಉಪಾಧ್ಯಕ್ಷ ಶಾಂತಾರಾಮ್ ಹೆಗಡೆ ನಿರ್ದೇಶಕರಾದ ಅಕ್ಕಿಕಾಳು ವೆಂಕಟೇಶ್ ಆನಂದ್ ಕುಮಾರ್ ಶೆಟ್ಟಿ ಮೋಹನ್ ಕುಮಾರ್ ಶಿವಣ್ಣ ಕುಮಾರಸ್ವಾಮಿ ಕಾರ್ತಿಕ್ ಉಪಸ್ಥಿತರಿದ್ದರು

Youth should come forward to establish small and medium industries in the district

About Author

Leave a Reply

Your email address will not be published. Required fields are marked *