September 19, 2024
ದೀಪಕ್ ದೊಡ್ಡಯ್ಯ ನಿವಾಸದಲ್ಲಿ ಚುನಾವಣಾ ಪ್ರಚಾರ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ

ದೀಪಕ್ ದೊಡ್ಡಯ್ಯ ನಿವಾಸದಲ್ಲಿ ಚುನಾವಣಾ ಪ್ರಚಾರ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ

ಚಿಕ್ಕಮಗಳೂರು:  ರಾಜಕೀಯವನ್ನು ವೃತ್ತಿ ಮಾಡಿಕೊಳ್ಳುವುದಕ್ಕಿಂತ ವ್ರತವನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯಿಸಿದರು.

ಅವರು ಕಲ್ಯಾಣ ನಗರದ ದೀಪಕ್ ದೊಡ್ಡಯ್ಯ ನಿವಾಸದಲ್ಲಿ ಚುನಾವಣಾ ಪ್ರಚಾರ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಯಾರೆಲ್ಲಾ ರಾಜಕೀಯವನ್ನು ವ್ರತವನ್ನಾಗಿ ಮಾಡಿಕೊಳ್ಳುತ್ತಾರೋ ಅವರು ರಾಜಕೀಯ ಮತ್ಸದ್ದಿಯಾಗುತ್ತಾರೆ ರಾಜಕೀಯ ವೃತ್ತಿ ಮಾಡಿಕೊಳ್ಳುವವರು ರಾಜಕಾರಣಿಗಳಾಗಿ ಮಾತ್ರ ಉಳಿಯುತ್ತಾರೆ ಎಂದರು.

ಸಮಾಜದ ಉನ್ನತೀಕರಣ, ರಾಜಕೀಯ ಶುದ್ಧೀಕರಣ ದೇಶದ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಈ ಸಮಾಜದ ಸಜ್ಜನರು ಪ್ರಮುಖ ಪಾತ್ರ ವಹಿಸಬೇಕು ದುರ್ಜನರು ದು? ಕಾರ್ಯಗಳನ್ನು ಮಾಡುತ್ತಿರುವಾಗ ಸಜ್ಜನರು ಮೌನ ವಹಿಸಿದರೆ ದುರ್ಜನರ ಕೈ ಮೇಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಮಾಜದಲ್ಲಿ ಸಾಕ? ಸಮಸ್ಯೆಗಳಿವೆ ಸಾಕ? ಅಭಿವೃದ್ಧಿ ಸಾಧಿಸಬೇಕಿದೆ ಇವುಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆ ಮೇಲೆ ಮುಂದುವರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಅವರು ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಈ ದೇಶ ಬಹಳ ಎತ್ತರಕ್ಕೆ ಬೆಳೆದಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರಣ ಎಂದರು.

? ಕಾರ್ಯಗಳಾಗಬೇಕಿದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕು ಇಲ್ಲಿರುವ ರೈತರ ಸಮಸ್ಯೆಗಳಿಗೆ ಧ್ವನಿಯಾಗಬೇಕು, ರಸ್ತೆ ಅಭಿವೃದ್ಧಿ ಹೆಚ್ಚಾಗಿ ನಡೆಯಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಶೈಕ್ಷಣಿಕವಾಗಿ ಈ ಕ್ಷೇತ್ರ ಉನ್ನತ ಸ್ಥಾನವನ್ನು ಗಳಿಸಬೇಕು, ವಿಶೇ?ವಾಗಿ ಕೇಂದ್ರ ಸರ್ಕಾರದಿಂದ ಪ್ರವಾಸೋಧ್ಯಮದಿಂದ ಹೆಚ್ಚು ಒತ್ತನ್ನು ಕೊಡುವ ಆಲೋಚನೆ ಇದ್ದು ಈ ಕ್ಷೇತ್ರದ ಎಲ್ಲಾ ಗಣ್ಯರ, ವಿದ್ಯಾವಂತರ, ತಜ್ಞರ ಸಲಹೆ ಪಡೆದು ನನ್ನ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿ ೬ ತಿಂಗಳಿಗೊಮ್ಮೆ ಸಮಾಜ ಚಿಂತಕರ, ಬುದ್ಧಿಜೀವಿಗಳ, ತಜ್ಞರ ಸಭೆ ಕರೆದು ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಲಹೆ-ಸೂಚನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ ಎಂಬಂತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಬದ್ಧವಾಗಿದ್ದೇನೆಂದು ಹೇಳಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್ ದೇವರಾಜಶೆಟ್ಟಿ, ನಗರಾಧ್ಯಕ್ಷ ಪು?ರಾಜ್, ನಿಕಟ ಪೂರ್ವ ಅಧ್ಯಕ್ಷ ಎಚ್.ಸಿ ಕಲ್ಮರುಡಪ್ಪ ಡಾ|| ಜೆ.ಪಿ ಕೃ?ಗೌಡ, ದಿನೇಶ್ ಪಟೇಲ್, ಎಂ.ಎನ್ ?ಡಾಕ್ಷರಿ, ಡಾ|| ಸಿ.ಕೆ ಸುಬ್ರ್ರಾಯ, ದೀಪಕ್ ದೊಡ್ಡಯ್ಯ ಮತ್ತಿತರರು ಭಾಗವಹಿಸಿದ್ದರು.

Dialogue program organized in connection with election campaign at Deepak Doddaiah’s residence

About Author

Leave a Reply

Your email address will not be published. Required fields are marked *

You may have missed