September 19, 2024
ನಗರದ ಎಂಜಿ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ

ನಗರದ ಎಂಜಿ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ

ಚಿಕ್ಕಮಗಳೂರು: ಭಾರತದ ಸಂಸ್ಕೃತಿ ಪರಂಪರೆ ಉಳಿಯಲು ಹಾಗೂ ಪರಿಶಿ? ಜಾತಿ, ಪರಿಶಿ? ಪಂಗಡದ ಸಮುದಾಯವನ್ನು ಪ್ರಧಾನಿ ನರೇಂದ್ರ ಮೋದಿ ಹಂತ ಹಂತವಾಗಿ ಮೇಲಕ್ಕೆ ತರುತ್ತಿರುವುದನ್ನು ಮನಗಂಡು ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಮತ ನೀಡುವಂತೆ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಕೆ.ಪಿ ವೆಂಕಟೇಶ್ ಮನವಿ ಮಾಡಿದರು.

ಅವರು ಇಂದು ನಗರದ ಎಂಜಿ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಇಂದು ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ನಾಮಪತ್ರ ಸಲ್ಲಿಸಿದ್ದು ಇವರು ಅತಿ ಹೆಚ್ಚಿನ ಮತಗಳಿಂದ ಜಯಶಾಲಿಯಾಗಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.

ದಲಿತ ಸಮುದಾಯಕ್ಕೆ ಪೂರಕವಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ೫ ಪಂಚಧಾಮ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋಧ್ಯಮಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ೧೯೮೯ ಡಾ. ಬಿ.ಆರ್ ಅಂಬೇಡ್ಕರ್‌ರವರಿಗೆ ಭಾರತರತ್ನ ಪುರಸ್ಕಾರ ನೀಡಲಾಗಿದೆ. ಸಾಮಾಜಿಕ ನ್ಯಾಯದಡಿ ದಲಿತ ಸಮುದಾಯದ ಇಬ್ಬರು ರಾಷ್ಟ್ರಪತಿ ಹುದ್ದೆಯನ್ನು ರಾಮನಾಥ್ ಕೋವಿಂದ್ ಹಾಗೂ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ನೀಡಿದ್ದಾರೆ ಎಂದರು

ಬಡ ಕುಟುಂಬದಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸುವ ಜೊತೆಗೆ ಕ್ಷೇತ್ರದ ಬಡಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು.ಉಗ್ರ ಸಂಘಟನೆಗಳ ಸದೆಬಡಿಯಲು ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು.

ಎಸ್.ಸಿ ಮೋರ್ಚಾ ರಾಜ್ಯಕಾರ್ಯದರ್ಶಿ ಸೀತಾರಾಮ್‌ಭರಣಯ್ಯ ಮಾತನಾಡಿ ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆ ದೇಶದ ಭವಿ? ನಿರ್ಧಾರ ಮಾಡುವ ಚುನಾವಣೆ ಆಗಿದೆ. ಗ್ಯಾರೆಂಟಿ ನಂಬಿ ಮತ ಹಾಕುವಂತ ಚುನಾವಣೆ ಅಲ್ಲ ಮತದಾರರು ಪ್ರಜ್ಞಾವಂತರಾಗಿದ್ದಾರೆ, ಡಾ|| ಬಿ.ಆರ್ ಅಂಬೇಡ್ಕರ್‌ರವರ ಸಿದ್ಧಾಂತ ಶಿಕ್ಷಣ, ಹೋರಾಟ, ಸ್ವಾತಂತ್ರ ಭಾರತದಲ್ಲಿ ಜನ ಸುರಕ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಿತ ಸಮುದಾಯ ದೇಶದ ಭವಿ? ಯಾರ ಕೈಯಲ್ಲಿರಬೇಕೆಂದು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಈ ದೇಶದಾದ್ಯಂತ ೪೦೦ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ-ಎನ್‌ಡಿಎ ಗೆಲುವು ಖಚಿತ ಕೋಟಾ ಶ್ರೀನಿವಾಸ್ ಪೂಜಾರಿ ಬಿಜೆಪಿ ಅಭ್ಯರ್ಥಿ ಆಗಿರದೆ ಜನರ ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಜಾತಿ ಎಲ್ಲೇ ಮೀರಿ ದೇಶ ಉಳಿಯಬೇಕೆಂಬ ಏಕೈಕ ಉದ್ದೇಶದಿಂದ ದಲಿತ ಸಮುದಾಯದ ಜನ ಬಿಜೆಪಿಯನ್ನು ಬೆಂಬಲಿಸಿ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್.ಸಿ ಮೋರ್ಚಾ ಮುಖಂಡರಾದ ಹಂಪಯ್ಯ, ಲಕ್ಷ್ಮಣ್‌ನಾಯಕ್, ರಾಘವೇಲ್, ಕೇಶವ್, ಮಂಜುನಾಥ, ರೇವನಾಥ್, ಜಗದೀಶ್, ಪ್ರದೀಪ್, ಗುರು, ಪ್ರಕಾಶ್, ಶಿವಪ್ರಸಾದ್, ಮತ್ತಿತರರು ಭಾಗವಹಿಸಿದ್ದರು.

The fate of the country will be decided by Lok Sabha elections

About Author

Leave a Reply

Your email address will not be published. Required fields are marked *

You may have missed